ನಾಳೆ ಸರಳ ಜಂಬೂಸವಾರಿ
ಮೈಸೂರು

ನಾಳೆ ಸರಳ ಜಂಬೂಸವಾರಿ

October 25, 2020

ಮೈಸೂರು, ಅ.24(ಎಂಟಿವೈ)- ಈ ಬಾರಿಯ ಸರಳ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಮೈಸೂರು ಅರಮನೆ ಆವ ರಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಲು `ಅಭಿಮನ್ಯು’ ನೇತೃತ್ವದ ಗಜಪಡೆ ಸನ್ನದ್ಧಗೊಂಡಿದೆ.

ಕೊರೊನಾ ಹಿನ್ನೆಲೆಯಲ್ಲಿ ಈ ಸಾಲಿನ ದಸರಾ ಮಹೋತ್ಸವವನ್ನು ಸರಳ ಹಾಗೂ ಸಾಂಪ್ರದಾಯಿಕ ವಾಗಿ ಆಚರಿಸಲಾಗುತ್ತಿದ್ದು, ಜಂಬೂಸವಾರಿ ಮೆರ ವಣಿಗೆಯನ್ನು ಅರಮನೆ ಆವರಣಕ್ಕೆ ಸೀಮಿತ ಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನ 2.59 ರಿಂದ 3.20ರ ನಡುವೆ ಸಲ್ಲುವ ಶುಭ ಮಕರ ಲಗ್ನ ದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅರಮನೆಯ ಉತ್ತರದ್ವಾರ(ಬಲರಾಮ)ದ ಬಳಿ ನಂದಿಧ್ವಜಕ್ಕೆ ಸಂಪ್ರದಾಯದಂತೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅರಮನೆ ಅಂಗಳದಲ್ಲಿ ಮಧ್ಯಾಹ್ನ 3.40 ರಿಂದ 4.15ರ ನಡುವೆ ಸಲ್ಲುವ ಶುಭ ಕುಂಭ ಲಗ್ನ ದಲ್ಲಿ ಅಭಿಮನ್ಯುವಿನ ಮೇಲಿರುವ ಚಿನ್ನದ ಅಂಬಾರಿ ಯಲ್ಲಿ ವಿರಾಜಮಾನಳಾಗಿರುವ ನಾಡದೇವಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಮುಖ್ಯ ಮಂತ್ರಿ ಸೇರಿದಂತೆ ಕೆಲವು ಗಣ್ಯರು ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

11 ತಂಡ, 4 ತುಕಡಿ: ಈ ಸಾಲಿನ ಜಂಬೂ ಸವಾರಿಯಲ್ಲಿ ಒಟ್ಟು 4 ಕಲಾತಂಡ, ಅಶ್ವಾರೋಹಿ ದಳದ 2 ತುಕಡಿ, 1 ಸ್ತಬ್ಧಚಿತ್ರ, ಕರ್ನಾಟಕ ಪೊಲೀಸ್ ಬ್ಯಾಂಡ್‍ನ ಆನೆಗಾಡಿ ಸಾಗಲಿವೆ. ಕುಮ್ಕಿ ಆನೆ ವಿಜಯ, ಕಾವೇರಿಯೊಂದಿಗೆ ಸಾಗುವ ಅಭಿ ಮನ್ಯು ಹಿಂದೆ ಅಶ್ವಾರೋಹಿ ದಳದ ಒಂದು ತುಕಡಿ, 3 ಪಿರಂಗಿ ಗಾಡಿ, ಅರಣ್ಯ ಇಲಾಖೆಯ ವೈದ್ಯರ ತಂಡ, ಅಗ್ನಿಶಾಮಕ ವಾಹನ ಹಾಗೂ ಆಂಬುಲೆನ್ಸ್ ಎಂದಿನಂತೆ ಸಾಗಲಿವೆ. ಪ್ರತಿ ವರ್ಷ ಜಂಬೂಸವಾರಿ ಸಂದರ್ಭ ಪೊಲೀಸರ ಸಂಖ್ಯೆಯೇ ಹೆಚ್ಚಿರುತ್ತಿತ್ತು. ಈ ಬಾರಿ ಕಡಿಮೆ ಸಂಖ್ಯೆ ಪೊಲೀಸರನ್ನು ಬಳಸಲಾಗುತ್ತಿದೆ.

ಜಂಬೂಸವಾರಿ ವೀಕ್ಷಣೆಗಾಗಿ ಅರಮನೆ ದ್ವಾರದ ಮುಂದೆ ನಿಲ್ಲಲೂ ಅವಕಾಶವಿಲ್ಲ. ಟಿವಿಗಳಲ್ಲಿ ನೇರ ಪ್ರಸಾರ ಇರುವುದರಿಂದ ಜನರು ಮನೆಯಲ್ಲಿ ಕುಳಿತೇ ಜಂಬೂಸವಾರಿ ವೀಕ್ಷಿಸುವಂತೆ ಜಿಲ್ಲಾಡಳಿತ ಕೋರಿದೆ. ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನ ದ್ವಾರದಲ್ಲಿ ಅಂಬಾರಿ ಆನೆಗೆ ನೀಡುತ್ತಿದ್ದ ಗಾಡ್ ಆಫ್ ಹಾನರ್ ಅನ್ನು ಈ ಬಾರಿ ಪ್ರಮೋದಾ ದೇವಿ ಒಡೆಯರ್ ಅವರ ನಿವಾಸದ ಬಳಿಯೇ ನೀಡಲಾಗುತ್ತದೆ. ನಂತರವಷ್ಟೇ ಕ್ರೇನ್ ಬಳಿ ಅಭಿಮನ್ಯುವನ್ನು ಕರೆದೊಯ್ದು ಸುರಕ್ಷಿತವಾಗಿ ಚಿನ್ನದ ಅಂಬಾರಿ ಕೆಳಗಿಳಿಸಲಾಗುತ್ತದೆ. ಅಲ್ಲಿಗೆ ಸರಳ ದಸರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೇಮಿಸಿದ ತಾಂತ್ರಿಕ ತಜ್ಞರ ಸಮಿತಿಯ ಶಿಫಾರಸಿನಂತೆ ಜಂಬೂ ಸವಾರಿಯಲ್ಲಿ ಗಜಪಡೆ ಮಾವುತರು, ಕಾವಾಡಿಗಳು, ಕಲಾವಿ ದರು, ಆಯ್ದ ಆಹ್ವಾನಿತರು ಸೇರಿದಂತೆ ಒಟ್ಟು 300 ಮಂದಿ ಗಷ್ಟೇ ಅವಕಾಶ ನೀಡಲಾಗಿದೆ. ವಿ.ಕೃಷ್ಣಮೂರ್ತಿ, ಎ.ಪುಟ್ಟ ಸ್ವಾಮಿ ಅವರ ನಾದಸ್ವರ ತಂಡದ 10 ಮಂದಿ, ಚಾಮುಂಡಿ ಪುರಂನ ಶ್ರೀನಿವಾಸರಾವ್ ನೇತೃತ್ವದ ಚಂಡೆ ಮೇಳದ 10 ಮಂದಿ, ನಂಜನಗೂಡು ತಾಲೂಕು ತಾಯೂರಿನ ಮರಗಾಲು ಕಲಾವಿದ ಸಿದ್ದರಾಜು ಜತೆಗಾರರು 8 ಮಂದಿ, ರಾಜಪ್ಪ ಜತೆ 10 ವೀರಗಾಸೆ ಕಲಾವಿದರು, ತಲಕಾಡಿನ ಟಿ.ಕೆ.ರಾಜ ಶೇಖರ್ ನೇತೃತ್ವದ ಚಿಲಿಪಿಲಿ ಗೊಂಬೆ ತಂಡದ 12 ಮಂದಿ, ಆನೆಗಾಡಿಯಲ್ಲಿ ಪೊಲೀಸ್ ಬ್ಯಾಂಡ್‍ನ 15 ಮಂದಿ, ತಲಾ 18 ಮಂದಿಯ 2 ಅಶ್ವಾರೋಹಿ ಪಡೆ, 10 ಮಂದಿಯ ಪಟ್ಟದ ನಾದಸ್ವರ ತಂಡ, ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆ ಕಾವೇರಿ, ವಿಜಯಳ ಮಾವುತರು, ಕಾವಾಡಿಗಳು, ಸಹಾಯ ಕರು, ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ಸೇರಿ 36 ಮಂದಿ ಇರಲಿದ್ದಾರೆ. ಉಳಿದಂತೆ ದಸರಾ ಆಹ್ವಾನ ಸಮಿತಿಯ ಆಹ್ವಾನದ ಮೇರೆಗೆ ಗಣ್ಯರು, ಜನಪ್ರತಿನಿಧಿಗಳಿಗೆ ಮಾತ್ರವೇ ಅರಮನೆ ಆವರಣ ಪ್ರವೇಶ ಅವಕಾಶ ನೀಡಲಾಗುತ್ತಿದೆ.

 

 

 

Translate »