ಮೈಸೂರಲ್ಲಿ ಧಾರಾಕಾರ ಮಳೆ
ಮೈಸೂರು

ಮೈಸೂರಲ್ಲಿ ಧಾರಾಕಾರ ಮಳೆ

October 11, 2021

ಮೈಸೂರು, ಅ.10(ವೈಡಿಎಸ್, ಎಂಕೆ)- ಮೈಸೂರು ನಗರದೆಲ್ಲೆಡೆ ಭಾನುವಾರ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮರ ಗಳು ಧರೆಗುರುಳಿದ್ದು, ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ದಸರಾ ದೀಪಾ ಲಂಕಾರವನ್ನೂ ಕಡಿತಗೊಳಿಸಿತು.

ನಗರದಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಆರಂಭವಾದ ಮಳೆ ಸಂಜೆ ವರೆಗೂ ಸುರಿಯಿತಲ್ಲದೆ, ತಡರಾತ್ರಿವ ರೆಗೂ ಸಣ್ಣದಾಗಿ ಜಿನುಗುತ್ತಿತ್ತು. ಇದ ರಿಂದ ನಗರದ ರಸ್ತೆಗಳು ಮಳೆ ನೀರಿ ನಿಂದ ತುಂಬಿ ಹರಿದು ವಾಹನ ಸವಾರರಿಗೆ, ಪಾದಚಾರಿಗಳ ಸಂಚಾ ರಕ್ಕೆ ತೊಂದರೆ ಉಂಟಾಯಿತು.

ಧರೆಗುರುಳಿದ ಮರಗಳು: ಜೆ.ಕೆ. ಮೈದಾನದ ಬಳಿ ಮರದ ಕೊಂಬೆ ಮತ್ತು ಹೆಬ್ಬಾಳ್‍ನಲ್ಲಿ ಮರದ ಕೊಂಬೆಯೊಂದು ವಿದ್ಯುತ್ ವೈರ್ ಮೇಲೆ ಮುರಿದು ಬಿದ್ದ ವಾದರೂ ಅದೃಷ್ಟವಶಾತ್ ಅವಘಡ ಸಂಭವಿಸಿಲ್ಲ. ಇದರಿಂದಾಗಿ ಈ ಮಾರ್ಗದ ವಾಹನ ಸವಾರರಿಗೆ ಕೆಲಕಾಲ ಸಂಚಾ ರಕ್ಕೆ ಆಡಚಣೆ ಉಂಟಾಯಿತು. ವಿಷಯ ತಿಳಿದು ಪಾಲಿಕೆಯ ಅಭಯ ತಂಡದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರದ ಕೊಂಬೆ ಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮನೆಗಳಿಗೆ ನುಗ್ಗಿದ ನೀರು: ನಗರದ ಕನಕಗಿರಿ, ಚಾಮುಂಡಿಪುರಂ, ವಿದ್ಯಾರಣ್ಯ ಪುರಂ, ಗುಂಡೂರಾವ್ ನಗರ, ಜೆಪಿ. ನಗರ, ಶಿವರಾತ್ರೀಶ್ವರ ನಗರ ಸೇರಿ ದಂತೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಮನೆಯಿಂದ ಹೊರಹಾಕಲು ನಿವಾಸಿಗಳು ಪರದಾಡು ವಂತಾಯಿತು. ಅಲ್ಲದೆ, ವಿಜಯನಗರ ಎಫ್ ಬ್ಲಾಕ್ ಮತ್ತು ಹಿನಕಲ್ ಸೇತುವೆ ಬಳಿ 2 ಮನೆಗಳಿಗೆ ನೀರು ನುಗ್ಗಿದೆ.

ಕೆರೆಯಂತಾದ ರಸ್ತೆಗಳು: ಕೆಲ ರಸ್ತೆಗಳಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆಯ ಮೇಲೆಯೇ ಹರಿದ ಪರಿಣಾಮ
ಹೈವೇ ಸರ್ಕಲ್, ಸ್ಮಶಾನ ರಸ್ತೆ ಸೇರಿದಂತೆ ನಗರದ ಬಹುತೇಕ ರಸ್ತೆಗಳೆಲ್ಲಾ ಕೆರೆಯಂತಾ ಗಿದ್ದವು. ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುವಂತಾಯಿತು.

ದೀಪಾಲಂಕಾರ ಕಡಿತ: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನಗರದ ಹಲವಾರು ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ದಸರಾ ವಿದ್ಯುತ್ ದೀಪಾಲಂಕಾರವನ್ನೂ ಕೆಲಕಾಲವಷ್ಟೇ ಆನ್ ಮಾಡಿ, ಮಳೆ ಜೋರಾಗುತ್ತಿದ್ದಂತೆ ಕಡಿತಗೊಳಿಸಲಾಯಿತು. ಇದರಿಂದ ವಾರದ ರಜಾದಿನವೂ ದೀಪಾಲಂಕಾರ ಕಣ್ತುಂಬಿಕೊಳ್ಳಲು ಸಾಧ್ಯವಾಗದೆ ಪ್ರವಾಸಿಗರು, ಸ್ಥಳಿಯರು ನಿರಾಸೆಯಿಂದಲೇ ಮನೆಗೆ ಹಿಂತಿರುಗಿದರು.

ಹೊತ್ತಿ ಉರಿದ ಸೀರಿಯಲ್ ಸೆಟ್: ರಾಮಸ್ವಾಮಿ ವೃತ್ತದ ಬಳಿಯ ಜೆಎಲ್‍ಬಿ ರಸ್ತೆ ಡಿವೈಡರ್‍ನಲ್ಲಿನ ಕಂಬಕ್ಕೆ ಅಳವಡಿಸಿದ್ದ ದಸರಾ ದೀಪಾಲಂಕಾರದ ಸೀರಿಯಲ್ ಸೆಟ್ ಹೊತ್ತಿ ಉರಿದ ಘಟನೆ ನಡೆಯಿತು. ಇದನ್ನು ಗಮನಿಸಿದ ವಾಹನ ಸವಾರರು ಕೂಡಲೇ ಸೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ ಎಚ್ಚೆತ್ತ ಸೆಸ್ಕಾಂ ಅಧಿಕಾರಿಗಳು ಹೆಚ್ಚಿನ ಅನಾಹುತ ನಡೆಯದಂತೆ ಮುಂಜಾಗೃತೆ ವಹಿಸಿದರು.

ಆಕ್ರೋಶ: ಸೀರಿಯಲ್ ಸೆಟ್ ಹೊತ್ತಿ ಉರಿಯುವುದನ್ನು ಕಂಡ ವಾಹನ ಸವಾರರು ಹಾಗೂ ಪಾದಾಚಾರಿಗಳು ಕಳಪೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಹೆಚ್ಚಿನ ಅನಾಹುತ ಉಂಟಾಗಿದ್ದರೆ ಯಾರು ಜವಾಬ್ದಾರರು ಎಂದು ಪ್ರಶ್ನಿಸಿದರಲ್ಲದೆ, ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

Translate »