ಸೋ.ಪೇಟೆ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಹಸ್ತಾಂತರ
ಕೊಡಗು

ಸೋ.ಪೇಟೆ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಹಸ್ತಾಂತರ

July 13, 2021

ಸೋಮವಾರಪೇಟೆ, ಜು.12-ಮೋಬಿ ಯಸ್ ಫೌಂಡೇಷನ್‍ನಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಾಂದ್ರಕ ಗಳನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮೂಲಕ ಹಸ್ತಾಂತರಿಸಲಾಯಿತು.

10.50 ಲಕ್ಷ ರೂ. ವೆಚ್ಚದ 10 ಆಕ್ಸಿಜನ್ ಸಾಂದ್ರಕಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಮೋಬಿಯಸ್ ಫೌಂಡೇಷನ್ ಅರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಶ್ಲಾಘ ನೀಯ. ಕೊರೊನಾ 3ನೇ ಅಲೆಯ ಬಗ್ಗೆಯೂ ತಜ್ಞರು ಎಚ್ಚರಿಸಿದ್ದಾರೆ. ಇಂತಹ ಸನ್ನಿ ವೇಶದಲ್ಲಿ ಮೋಬಿಯಸ್ ಫೌಂಡೇಷನ್ ಆಮ್ಲಜನಕ ಸಾಂದ್ರಕಗಳನ್ನು ನೀಡಿರು ವುದು ಮಾದರಿ ಕಾರ್ಯ ಎಂದರು.

ಫೌಂಡೇಷನ್‍ನಿಂದ ಹೊಸ್ಕೇರಿ ಗ್ರಾಮ ವ್ಯಾಪ್ತಿಯಲ್ಲಿ ಇಂಟರ್‍ನ್ಯಾಷನಲ್ ಸ್ಕೂಲ್ ಸ್ಥಾಪನೆಗೆ ಮುಂದಾಗಿರುವುದು ಶ್ಲಾಘ ನೀಯ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕಾದರೆ ಮೂಲಸೌಕರ್ಯ ದೊಂದಿಗೆ ಉತ್ತಮ ಶೈಕ್ಷಣಿಕ ಕೇಂದ್ರಗಳೂ ಅಗತ್ಯ. ಶಾಲೆ ನಿರ್ಮಾಣವಾದರೆ ಸ್ಥಳೀಯ ವಾಗಿಯೇ ಉತ್ತಮ ವಿದ್ಯಾಭ್ಯಾಸ ಲಭಿಸುವು ದರೊಂದಿಗೆ, ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೋಬಿಯಸ್ ಫೌಂಡೇಷನ್‍ನ ಯೋಜನಾ ಸಂಯೋಜಕ ಮಧು ಬೋಪಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯ ಸತೀಶ್‍ಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಪ್ರಮುಖರಾದ ಎಸ್.ಆರ್. ಸೋಮೇಶ್, ಶರತ್‍ಚಂದ್ರ, ನೇಗಳ್ಳೆ ಜೀವನ್, ಆಸ್ಪತ್ರೆ ಸಿಬ್ಬಂದಿ ಇದ್ದರು.

Translate »