ಮೈಸೂರು, ಮೇ 6- ಕೊರೊನಾ ಪ್ರಕರಣಗಳು ಕಡಿಮೆ ಯಾಗಿರುವ ಮೈಸೂರು ಜಿಲ್ಲೆಯನ್ನು ಆರೆಂಜ್ ಝೋನ್ ಆಗಿ ಮಾರ್ಪ ಡಿಸಿ ಕೇರಳ ಮಾದರಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕೆಂದು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ 90 ಕೊರೊನಾ ರೋಗಿಗಳು ಪತ್ತೆಯಾದ ಕಾರಣ ರೆಡ್ ಝೋನ್‍ಗೆ ಸೇರಿಸಲಾಗಿತ್ತು. ಆದರೆ ಈಗ 83 ಮಂದಿ ಗುಣಮುಖರಾಗಿ ಕೇವಲ 7 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಅಲ್ಲದೆ, ಕ್ವಾರಂಟೈನ್‍ನಲ್ಲಿ ಇದ್ದವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಹಲವು ದಿನಗಳಿಂದ ಹೊಸ ಪ್ರಕರಣಗಳೂ ದಾಖಲಾಗಿಲ್ಲ ಎಂದು ಅವರು ತಮ್ಮ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಮೈಸೂರು ಕೊರೊನಾ ಮುಕ್ತವಾಗು ತ್ತಿದೆ. ಆದರೆ, ಕೆಲಸ ಸಿಗದೆ ವಲಸೆ ಕಾರ್ಮಿ ಕರು ತವರಿಗೆ ತೆರಳಲು ಆರಂಭಿಸಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಮೈಸೂರಿನಲ್ಲಿ ಕಾರ್ಮಿಕರ ಅಭಾವವುಂಟಾಗಿ ಕೈಗಾರಿಕೆಗಳನ್ನು ನಡೆ ಸಲು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಅವರು, ಮೈಸೂರನ್ನು ಆರೆಂಜ್ ಝೋನ್ ಆಗಿ ಮಾರ್ಪಡಿಸಿ ಕೈಗಾರಿಕೆಗಳ ಪುನರಾರಂಭಕ್ಕೆ ಅನುಮತಿ ನೀಡಬೇಕು. ಕೇರಳ ಮಾದರಿಯಲ್ಲಿ ಲಾಕ್‍ಡೌನ್ ಸಮಯದಲ್ಲಿ ಪ್ರತಿದಿನ 5 ಗಂಟೆ ಕಾಲ ಬೇರೆ ಬೇರೆ ಉದ್ಯಮಿಗಳಿಗೆ ವ್ಯಾಪಾರ ವ್ಯವಹಾರಕ್ಕೆ ಅನುಮತಿ ನೀಡಬೇಕು. ಉದಾಹರಣೆಗೆ ಸೋಮ ವಾರ ಚಿನ್ನದಂಗಡಿ, ಎಲೆಕ್ಟ್ರಾನಿಕ್ ಶಾಪ್, ಮಂಗಳವಾರ- ಬಟ್ಟೆ ಅಂಗಡಿ, ಸರ್ವೀಸ್ ಸೆಂಟರ್‍ಗಳು, ಬುಧವಾರ- ಸ್ಟೀಲ್ ವರ್ಕ್ ಶಾಪ್ ಮತ್ತು ಸ್ಟೀಲ್ ಶಾಪ್, ಗುರುವಾರ- ಮೊಬೈಲ್ ಶಾಪ್, ಕಂಪ್ಯೂ ಟರ್, ಬುಕ್ ಮತ್ತು ಸ್ಟೇಷನರಿ ಶಾಪ್, ಶುಕ್ರವಾರ- ಗಿಫ್ಟ್ ಸೆಂಟರ್, ಸ್ವೀಟ್ ಸ್ಟಾಲ್, ಶನಿವಾರ- ವಾಹನಗಳ ಶೋರೂಂ ಗಳಿಗೆ ಅನುಮತಿ ನೀಡುವುದು. ಈ ಮಾದರಿಯನ್ನು ಅನುಸರಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.