ಕೃಷಿ ರಂಗಕ್ಕೆ ಲಕ್ಷ ಕೋಟಿ
ಮೈಸೂರು

ಕೃಷಿ ರಂಗಕ್ಕೆ ಲಕ್ಷ ಕೋಟಿ

May 16, 2020

ನವದೆಹಲಿ,ಮೇ15- ಲಾಕ್‍ಡೌನ್‍ನಿಂದ ಎದುರಾಗಿ ರುವ ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾತ್ರಿ ಘೋಷಿಸಿದ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್‍ನ ವಿವರಗಳ 3ನೇ ಕಂತನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಜೆ 4 ಗಂಟೆಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ತೆರೆದಿಟ್ಟಿದ್ದಾರೆ. ಈ ಕಂತಿನಲ್ಲಿ ಕೃಷಿ, ಹೈನುಗಾರಿಕೆ, ಮತ್ಸ್ಯೋದ್ಯಮ ಕ್ಷೇತ್ರದ ಬಲವರ್ಧನೆಗೆ ಒತ್ತು ನೀಡ ಲಾಗಿದೆ. ಜೇನು ಸಾಕಣೆಗೂ ಪ್ರೋತ್ಸಾಹ ದೊರೆಯಲಿದೆ.

ಈ ಬಾರಿ ಕೃಷಿ ಕ್ಷೇತ್ರಕ್ಕೆ ಬೃಹತ್ ಮೊತ್ತದ ಪ್ಯಾಕೇಜ್ ಪ್ರಕಟಿಸಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿ ವೃದ್ಧಿಗೆ ಒತ್ತು ನೀಡಿರುವ ಕೇಂದ್ರದ ಮೋದಿ ಸರ್ಕಾರ, ಅದಕ್ಕಾಗಿ 1 ಲಕ್ಷ ಕೋಟಿ ರೂ. ಮೀಸಲಿಟ್ಟಿರುವುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.

ಡೇರಿ ಉತ್ತೇಜನಕ್ಕೆ 15 ಸಾವಿರ ಕೋಟಿ ರೂ.: ಡೇರಿ ಉತ್ಪನ್ನಗಳಿಗೆ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ. ಪಶುಗಳ ರೋಗನಿರೋಧಕತೆ ಹೆಚ್ಚಿಸುವ ಲಸಿಕೆ ಹಾಕಲು 13,343 ಕೋಟಿ. ದೇಶದ 53 ಕೋಟಿ ಪಶುಗಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಮಿಲ್ಕ್ ಪೌಡರ್, ಚೀಸ್, ಮೊದ ಲಾದ ಡೇರಿ ಉತ್ಪನ್ನಗಳ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಡೇರಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಸಿಹಿ ಜೇನು: ಕೃಷಿಕರಿಗೆ ಉಪ ಕಸುಬು ನಡೆಸುವಂತೆ ಉತ್ತೇಜಿಸಲು ಜೇನು ಸಾಕಣೆಗೆ 500 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಇದರಿಂದ 2 ಲಕ್ಷ ಜೇನು ಸಾಕಣೆದಾರರಿಗೆ ಅನುಕೂಲವಾಗಲಿದೆ. ಮತ್ಸ್ಯೋದ್ಯಮ: ಮೀನುಗಾರರ ಉಪಕರಣಗಳ ಖರೀದಿಗೂ ಕೇಂದ್ರ ಸರಕಾರ ನೆರವು ನೀಡಲಿದೆ. ಮೀನುಗಾರರಿಗೆ 20 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದೆ. ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ನೀಡಿದ್ದಾರೆ. ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ನೀಡಲಾಗಿದೆ. ಬದಲಾಗಲಿದೆ ಎಪಿಎಂಸಿ: ಕೃಷಿ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡಲು ಯೋಜನೆ ಹಾಕಿಕೊಂಡಿರುವ ಕೇಂದ್ರ ಸರ್ಕಾರ, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ಬದಲಾಯಿಸಲು ಮುಂದಾಗಿದೆ. ರೈತರು ತಾವು ಬೆಳೆದಿದ್ದನ್ನು ‘ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲೇ ಮಾರಬೇಕು’ ಎಂಬ ನಿಯಮ ರದ್ದು, ಎಪಿಎಂಸಿ ಕಾರ್ಡ್ ಹೊಂದಿರುವ ರೈತರಿಗಷ್ಟೆ ಎಪಿಎಂಸಿಯಲ್ಲಿ ಮಾರಾಟ ಮಾಡಲು ಅವಕಾಶ ಎಂಬುದೂ ಸೇರಿದಂತೆ ಕೃಷಿ ಮಾರುಕಟ್ಟೆಗೆ ಸಮಗ್ರ ಸುಧಾರಣೆ ತರಲು ಸರ್ಕಾರ ಕ್ರಮ ಕೈಗೊಂಡಿದೆ. ಕೃಷಿ ಉತ್ಪನ್ನಗಳಿಗೆ ಇ-ಟ್ರೇಡ್: ಕೃಷಿ ಉತ್ಪನ್ನ ಗಳಿಗೂ ಇ-ಟ್ರೇಡಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಹೊಸ ಕಾಯಿದೆ ಜಾರಿಗೆ ಸಿದ್ಧತೆ ನಡೆದಿದೆ. ಕೃಷಿ ಉತ್ಪನ್ನಗಳನ್ನು ಬ್ರ್ಯಾಂಡಿಂಗ್ ಮೂಲಕವೇ ಮಾರಾಟ ಮಾಡುವುದು ಇದರ ಉದ್ದೇಶ ಎಂದು ಸಚಿವೆ ವಿವರಿಸಿದರು. ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ದೃಷ್ಟಿಯಿಂದಲೇ ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್‍ನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರದಿಂದ ಹಂತಹಂತವಾಗಿ ನೀಡುತ್ತಿದ್ದಾರೆ. ಮೊದಲಿಗೆ ಆದಾಯ ತೆರಿಗೆದಾರರು, ಸಣ್ಣ ಕೈಗಾರಿಕೆಗಳಿಗೆ ಆದ್ಯತೆ ನೀಡಿದ್ದರೆ, 2ನೇ ಹಂತದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಶ್ರಮಿಕರತ್ತ ನೋಟ ಹರಿಸಿದ್ದರು.

Translate »