ಪ್ರಧಾನಿ ಮೋದಿ ನೆರವು ಕೋರಿದ ಉಕ್ರೇನ್
ಮೈಸೂರು

ಪ್ರಧಾನಿ ಮೋದಿ ನೆರವು ಕೋರಿದ ಉಕ್ರೇನ್

February 25, 2022

ನವದೆಹಲಿ,ಫೆ.೨೪-ರಷ್ಯಾ ಪೂರ್ಣ ಪ್ರಮಾಣದಲ್ಲಿ ಯುದ್ಧ ಆರಂಭಿಸಿರುವುದರಿAದ ಭಾರತ ಪ್ರಧಾನಿ ನರೇಂದ್ರ ಮೋದಿ ನೆರವಾಗಬೇಕೆಂದು ಉಕ್ರೇನ್ ಮನವಿ ಮಾಡಿದೆ. ನರೇಂದ್ರ ಮೋದಿ ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಭಾರತ ತನ್ನ ಜಾಗತಿಕ ಪಾತ್ರ ವನ್ನು ಪೂರ್ಣ ಪ್ರಮಾಣದಲ್ಲಿ ವಹಿಸಿ ಕೊಳ್ಳುವಂತೆ ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ.ಇಗೊರ್ ಪೊಲಿಖಾ ಹೇಳಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ನಾವು ಭಾರತದ ಬೆಂಬಲವನ್ನು ಕೋರುತ್ತೇವೆ. ಪ್ರಜಾಸತಾತ್ಮಕ ದೇಶದ ವಿರುದ್ಧದ ಆಕ್ರಮಣ ನೀತಿ ಕೊನೆಯಾಗಲು ಭಾರತ ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು ಎಂದಿದ್ದಾರೆ. ವಿಶ್ವದ ಯಾರೆಲ್ಲ ನಾಯಕರ ಮಾತನ್ನು ಪುಟಿನ್ ಕೇಳಬಹುದು ಎಂಬುದು ನನಗೆ ಗೊತ್ತಿಲ್ಲ. ಆದರೆ, ಮೋದಿಯವರ ಗಟ್ಟಿ ಧ್ವನಿ ಬಗ್ಗೆ ನಮಗೆ ವಿಶ್ವಾಸವಿದೆ. ನಮಗೆ ಮೋದಿ ಸಹಕರಿಸಿದರೆ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬಹುದು. ಇತಿಹಾಸದಲ್ಲಿನ ಅನೇಕ ಸಂದರ್ಭಗಳಲ್ಲಿ ಭಾರತ ಶಾಂತಿಪಾಲನೆ ಮಾಡಿದೆ. ಈ ಯುದ್ಧವನ್ನು ನಿಲ್ಲಿಸಲು ಭಾರತದ ಗಟ್ಟಿ ಧ್ವನಿಯನ್ನು ನಾವು ಕೇಳುತ್ತೇವೆ. ಯುದ್ಧವನ್ನು ನಿಲ್ಲಿಸಲು ಭಾರತದ ನಾಯಕತ್ವದಿಂದ ಸಹಕಾರಕ್ಕಾಗಿ ಕಾಯುತ್ತಿದ್ದೇವೆ ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ತಕ್ಷಣ ಕದನ ವಿರಾಮಕ್ಕೆ ಪುಟಿನ್‌ಗೆ ಮೋದಿ ಮನವಿ
ನವದೆಹಲಿ: ಉಕ್ರೇನ್ ವಿರುದ್ಧದ ಯುದ್ಧ ಕೈಬಿಟ್ಟು ಕದನ ವಿರಾಮ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ, ಗುರುವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಲ್ಲಿ ಮನವಿ ಮಾಡಿದ್ದಾರೆ. ರಾತ್ರಿ ಸುಮಾರು ೨೫ ನಿಮಿಷಗಳ ಕಾಲ ದೂರವಾಣ ಯಲ್ಲಿ ಪುಟಿನ್ ಅವರೊಂದಿಗೆ ಮಾತು ಕತೆ ನಡೆಸಿದ ಮೋದಿ, ಮಾತುಕತೆ ಮೂಲಕ ಎಲ್ಲಾ ವಿವಾದ ವನ್ನು ಬಗೆ ಹರಿಸಿಕೊಳ್ಳುವಂತೆ ಮನವಿ ಮಾಡಿ ದರು ಎಂದು ತಿಳಿದು ಬಂದಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ವಿನಾಶಕ್ಕೆ ಕಾರಣವಾಗಲಿದೆ

Translate »