ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ
ಮೈಸೂರು

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ

April 19, 2018

ಹಾವೇರಿ: ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ಅವರು ಶಿರಸಿ ಯಿಂದ ಬೆಂಗಳೂ ರಿಗೆ ಕಾರಿನಲ್ಲಿ ತೆರ ಳುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣೇ ಬೆನ್ನೂರು ಹೊರವಲ ಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಲಾರಿ ಯೊಂದು ಏಕಾಏಕಿ ಸಚಿವರ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸಚಿವರ ಕಾರು 140 ಕಿ.ಮೀ. ವೇಗದಲ್ಲಿದ್ದು, ಕೂದಲೆಳೆ ಅಂತರದಲ್ಲಿ ಪಾಸ್ ಆದ ಕಾರಣ ಹಿಂದೆ ಬರುತ್ತಿದ್ದ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿ ಒನ್ ವೇಯಲ್ಲಿ ಟರ್ನ್ ಮಾಡಿ ಕೊಂಡು ಬಂದಿದ್ದರಿಂದ ಅಪಘಾತ ಸಂಭವಿ ಸಿದೆ ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೆಂಗಾವಲು ವಾಹನದಲ್ಲಿದ್ದ ಎಎಸ್ ಪ್ರಭು ತಳವಾರ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹತ್ಯೆಗೆ ಸಂಚು: ಆದರೆ, ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಲಾರಿ ಹತ್ತಿಸಿ  ನನ್ನನ್ನು ಹತ್ಯೆ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಆಕಸ್ಮಿಕ ಘಟನೆ: ಸಚಿವರ ಬೆಂಗಾವಲು ಕಾರು ಅಪಘಾತವು ಒಂದು ಆಕಸ್ಮಿಕ ಘಟನೆ. ಇದರ ಹಿಂದೆ ಯಾವ ದುರುದ್ದೇಶವಿರಲಿಲ್ಲ ಎಂದು ಹಾವೇರಿ ಎಸ್ಪಿ ಕೆ.ಪರಶು ರಾಮ್ ಸ್ಪಷ್ಟಪಡಿಸಿದ್ದಾರೆ.

ಸಚಿವರ ಆರೋಪದ ಹಿನ್ನೆಲೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಲಾರಿ ಚಾಲಕ ನಾಸೀರ್ ಅಹ್ಮದ್ ಮಾಫೀಜ್ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂ ಕಿನ ಮುತ್ತಿನಕಟ್ಟೆ ಗ್ರಾಮದ ನಿವಾಸಿ ಯಾಗಿದ್ದು, ಭಾನುವಾರ ತನ್ನ ಊರಿನಿಂದ ರಬ್ಬರ್ ವುಡ್ ತುಂಬಿಸಿಕೊಂಡು ಹುಬ್ಬಳ್ಳಿಯ ತಾರಿ ಹಾಳ ಇಂಡಸ್ಟ್ರಿಗೆ ತೆರಳಿದ್ದಾನೆ.ಅಲ್ಲಿ ಅನ್ ಲೋಡ್ ಆದ ಲಾರಿಯಲ್ಲಿ ಕಿರಾಣಿ ವಸ್ತುಗಳನ್ನು ತುಂಬಿ ಶಿವಮೊಗ್ಗಕ್ಕೆ ಹೊರಟಿದ್ದ. ಇಷ್ಟರಲ್ಲಿ ಆತನ ಸಂಬಂಧಿಯೊಬ್ಬ ಕರೆ ಮಾಡಿದ್ದ. ಹಾಗಾಗಿ ಚಾಲಕ ಹಲಗೇರಿ ಬೈಪಾಸ್ ನಲ್ಲಿ ತೆರಳದೆ ಓವರ್ ಬ್ರಿಡ್ಜ್  ಬಳಿ ಬಂದಿದ್ದನು. ದಾರಿ ತಪ್ಪಿದ್ದು ತಿಳಿಯುತ್ತಾ ಚಾಲಕ ಮತ್ತೆ ಯು ಟರ್ನ್ ತೆಗೆದುಕೊಳ್ಳಲು ನೋಡಿ ದ್ದಾನೆ. ಆಗ ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದೆ. ಅಪಘಾತ ಉದ್ದೇಶಪೂರ್ವಕವಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ ಎಂದು ಅವರು ಹೇಳಿದರು.

 

Translate »