ಮೈಸೂರು, ಜೂ.1(ಆರ್‍ಕೆಬಿ)- ಮೈಸೂರು ವಿಶ್ವ ವಿದ್ಯಾನಿಲಯ `ಎಜುಕೇಷನ್ ವಲ್ರ್ಡ್’ ರ್ಯಾಂಕಿಂಗ್ (E.W.Ranking) ನಲ್ಲಿ 38ನೇ ಸ್ಥಾನ ಗಳಿಸಿದ್ದು, ಕರ್ನಾ ಟಕದಲ್ಲಿ 2ನೇ ಸ್ಥಾನದಲ್ಲಿದೆ.
ಸಂಶೋಧನೆ ಮತ್ತು ಆವಿಷ್ಕಾರ, ಫ್ಯಾಕಲ್ಟಿ ಮೂಲ ಸವಲತ್ತು ಸೇರಿ 10 ವಿವಿಧ ಅಂಶಗಳನ್ನು ಈ ಆಯ್ಕೆಗೆ ಮಾನದಂಡ ವಾಗಿ ಪರಿಗಣಿಸಲಾಗಿತ್ತು. ಒಟ್ಟು 1300 ಅಂಕಗಳಿಗೆ ಮೈಸೂರು ವಿವಿ 884 ಅಂಕಗಳನ್ನು ಪಡೆದು 38ನೇ ಸ್ಥಾನ ಗಳಿಸಿದೆ.
ಈ ರ್ಯಾಂಕಿಂಗ್ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತಕುಮಾರ್, ರಿಸರ್ಚ್ ಅಂಡ್ ಇನ್ನೋವೇಷನ್, ಫ್ಯಾಕಲ್ಟಿ ವೆಲ್‍ಫೇರ್ ಅಂಡ್ ಡೆವಲಪ್‍ಮೆಂಟ್, ಇಂಡಸ್ಟ್ರಿ ಇಂಟರ್‍ಫೇಸ್, ಪ್ಲೇಸ್‍ಮೆಂಟ್ ಸೇರಿದಂತೆ ಹತ್ತು ಬೇರೆ ಬೇರೆ ಪ್ಯಾರಾ ಮೀಟರ್‍ಗಳಲ್ಲಿ ಅಳೆದು, ಅಂಕಗಳನ್ನು ಕೊಟ್ಟಿದ್ದಾರೆ. ಇದು ವಿಶ್ವ ವಿದ್ಯಾ ನಿಲಯದ ನ್ಯಾಕ್ ಮಾನ್ಯತೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ವಿವಿಯ ಎಲ್ಲರಿಗೂ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.