ಅಕ್ರಮ ಗೋ ಸಾಗಾಣಿಕೆ ತಡೆದ ಗ್ರಾಮಸ್ಥರು
ಕೊಡಗು

ಅಕ್ರಮ ಗೋ ಸಾಗಾಣಿಕೆ ತಡೆದ ಗ್ರಾಮಸ್ಥರು

May 6, 2021

ಮಡಿಕೇರಿ, ಮೇ 5- ಗೋವುಗಳ ಅಕ್ರಮ ಸಾಗಾಟವನ್ನು ತಡೆಯುವಲ್ಲಿ ದಕ್ಷಿಣ ಕೊಡಗಿನ ಕಿರುಗೂರು ನಿವಾಸಿಗಳು ಯಶಸ್ವಿಯಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ದಕ್ಷಿಣ ಕೊಡಗಿನ ಕಿರುಗೂರು ಸಮೀಪ ಮಂಗಳವಾರ ತಡರಾತ್ರಿ ಆಲ್ಟೋ ಕಾರ್‍ನ ರಕ್ಷಣೆಯೊಂದಿಗೆ ಪಿಕ್‍ಅಪ್ ಜೀಪ್‍ನಲ್ಲಿ ಅಕ್ರಮವಾಗಿ 3 ಗೋವುಗಳನ್ನು ಸಾಗಿಸ ಲಾಗುತ್ತಿತ್ತು. ಈ ಸಂದರ್ಭ ಸ್ಥಳೀಯರ ತಂಡÀ ಜಾಗೃತರಾಗಿ ವಾಹನವನ್ನು ಅಡ್ಡ ಗಟ್ಟಲು ಪ್ರಯತ್ನಿಸಿದಾಗ ಆಲ್ಟೋ ಕಾರ್ ನಲ್ಲಿ ಬಂದಿದ್ದ ಗೋ ಸಾಗಾಣಿಕೆದಾರರು ವಾಹನವನ್ನು ವೇಗವಾಗಿ ಚಲಾಯಿಸಿ ತಪ್ಪಿಸಿಕೊಂಡಿದ್ದಾರೆ.

ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪಿಕ್‍ಅಪ್ ಜೀಪನ್ನು ಅಡ್ಡಗಟ್ಟಿ ವಾಹನ ಸಹಿತ 3 ಗೋವುಗಳನ್ನು ಪೋಲೀಸರಿ ಗೊಪ್ಪಿಸುವಲ್ಲಿ ಸ್ಥಳೀಯರು ಯಶಸ್ವಿಯಾದರು. ಆದರೆ ಪಿಕ್‍ಅಪ್ ಚಾಲಕ ಕೂಡ ವಾಹನ ದಿಂದ ಜಿಗಿದು ಪರಾರಿಯಾಗಿದ್ದಾನೆ. ವಾಹನ ಮತ್ತು ಗೋವುಗಳನ್ನು ಪೊನ್ನಂ ಪೇಟೆ ಪೋಲಿಸರ ವಶಕ್ಕೆ ನೀಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಮುಖ್ಯಮಂತ್ರಿಗೆ ದೂರು: ಕೊಡಗು ಜಿಲ್ಲೆಯಲ್ಲಿ ನಿರಂತರ ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಲವು ಪ್ರಕರಣಗಳನ್ನು ಬೇಧಿಸುವಲ್ಲಿ ವಿಫಲ ವಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಆರೋಪಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಗೋಹತ್ಯೆ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಪೋಲೀಸ್ ವರಿಷ್ಠಾಧಿ ಕಾರಿಗಳು ಕಠಿಣ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

ಹಿಂದೂ ಸಂಘಟನೆಗಳ ಕಾರ್ಯ ಕರ್ತರು ಗೋ ಅಕ್ರಮಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ಎಲ್ಲಾ ಸಂದರ್ಭ ಗಳಲ್ಲೂ ವಿಫಲರಾಗುತ್ತಿದ್ದಾರೆ. ಗೌಪ್ಯವಾಗಿ ಗೋ ಸಾಗಾಟ ನಡೆಯುತ್ತಲೇ ಇದ್ದು, ಹಲವು ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದ್ದಾರೆ.

ದೇವರಪುರ ಸಮೀಪದ ಕಾಯಂ ಬೆಟ್ಟದ ತೋಟದಲ್ಲಿ 3 ಗೋವುಗಳನ್ನು ಗುಂಡಿಕ್ಕಿ ಕೊಂದಿರುವುದು ಸೇರಿದಂತೆ ಹಲವು ಪ್ರಕರಣಗಳ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ದುಷ್ಕರ್ಮಿಗಳು ಮತ್ತಷ್ಟು ಅಕ್ರಮಗಳಲ್ಲಿ ತೊಡ ಗಿಸಿಕೊಂಡಿದ್ದಾರೆ. ಗೋ ಅಕ್ರಮ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪೋಲಿಸರು ವಿಫಲವಾಗಿದ್ದಾರೆ ಎಂದು ಆರೋ ಪಿಸಿರುವ ಅಯ್ಯಣ್ಣ ಹಾಗೂ ಅಜಿತ್ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

Translate »