ವಿರಾಜಪೇಟೆ, ಸೋ.ಪೇಟೆಯಲ್ಲಿ ವಿಶ್ವ ಜಲ ದಿನಾಚರಣೆ
ಕೊಡಗು

ವಿರಾಜಪೇಟೆ, ಸೋ.ಪೇಟೆಯಲ್ಲಿ ವಿಶ್ವ ಜಲ ದಿನಾಚರಣೆ

March 23, 2019

ವಿರಾಜಪೇಟೆ: ಪ್ರತಿಯೊ ಬ್ಬರು ನೀರನ್ನು ಮಿತವಾಗಿ ಬಳಸುವುದರೊಂ ದಿಗೆ ಮಳೆಯ ನೀರನ್ನು ಸಂಗ್ರಹ ಮಾಡಿ ಮುಂದಿನ ದಿನಕ್ಕೆ ಉಳಿಸುವಂತಾಗಬೇಕು ಎಂದು 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯಿತಿಯ ಸಂಯುಕ್ತ ಆಶ್ರ ಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಜಲ ದಿನಾ ಚರಣೆ, ವಿಶ್ವ ಗ್ರಾಹಕರ ಹಕ್ಕುಗಳ ದಿನಾ ಚರಣೆ ಮತ್ತು ಎಲೆಕ್ಟ್ರಾನಿಕ್ ಮತ ಯಂತ್ರದ ಕುರಿತು ಅರಿವು” ಕಾರ್ಯಕ್ರಮ ಉದ್ಘಾಟಿ ಸಿದ ನ್ಯಾಯಾಧೀಶೆ ರಮಾ ಮಾತನಾಡಿ, ಗ್ರಾಹಕರುಗಳು ತಮ್ಮ ಹಕ್ಕುಗಳನ್ನು ತಿಳಿ ದುಕೊಳ್ಳುವುದರೊಂದಿಗೆ ಸೌಲಭ್ಯಗಳನ್ನು ಪಡೆದುಕೊಳ್ಳುವಂತಾಗಬೇಕು. ಮಾನವನಿಗೆ ಮುಖ್ಯವಾಗಿ ಬೇಕಾಗಿರುವ ನೆಲ, ಜಲ ಮತ್ತು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವಂತಾಗಬೇಕು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಎಲೆಕ್ಟ್ರಾನಿಕ್ ಮತ ಯಂತ್ರದ ಕುರಿತು ಮಾತನಾಡಿ, ಈಗಾಗಲೇ ಮೈಸೂರು- ಕೊಡಗು ಲೋಕಸಭಾ ಚುನಾವಣೆ ಹತ್ತಿರ ವಿದ್ದು, ಪ್ರತಿಯೊಬ್ಬ ಪ್ರಜೆಯು ಕಡ್ಡಾಯ ವಾಗಿ ಮತ ನೀಡುವ ಮೂಲಕ ಯೋಗ್ಯ ವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾ ಗಿದೆ. ಈ ಹಿಂದಿನ ಚುನಾವಣೆಯಲ್ಲಿ ಜನರು ಮತಗಟ್ಟೆಗೆ ಬರುವವರ ಸಂಖ್ಯೆ ಕಡಿಮೆಯಾಗಿದ್ದರಿಂದ ಫಲಿತಾಂಶವು ಕಡಿಮೆಯಾಗಿತ್ತು.

ಅದರಿಂದ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿದೆ. ವಿಶೇಷ ಚೇತನರಿಗೂ ಮತ ಹಾಕಲು ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದ ರಲ್ಲದೆ, ಮತ ಹಾಕುವ ವಿಧಾನ ಮತ್ತು ಮತಯಂತ್ರದ ಬಗ್ಗೆ ಸಾರ್ವಜನಿಕರಿಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾ ನಂದ್ ಲಕ್ಷ್ಮಣ ಅಂಚಿ ಮಾತನಾಡಿ, ಇತರ ದೇಶಗಳಿಗಿಂತ ಭಾರತ ದೇಶ ಮುಂದುವರಿದಿದೆ ಎಂದರಲ್ಲದೆ ಪ್ರತಿಯೊ ಬ್ಬರು ತಮ್ಮ ಹಕ್ಕನ್ನು ಮತದಾನದ ಮೂಲಕ ಚಲಾಯಿಸಬೇಕು ಎಂದರು. ಸಭೆ ಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಹಾಗೂ ಇತರರು ಉಪಸ್ಥಿತ ರಿದ್ದರು. ಎಸ್.ಡಿ.ಮಂಜುನಾಥ್ ಸ್ವಾಗತಿ ಸಿದರೆ, ಪ್ರದೀಪ್ ವಂದಿಸಿದರು.

ಸೋಮವಾರಪೇಟೆ ವರದಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಇವುಗಳ ಸಂಯುಕ್ತಾಶ್ರಯದಲ್ಲಿ ಸಮೀಪದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡ ಮನಿ ಮಾತನಾಡಿ, ಸಕಲ ಜೀವ ರಾಶಿಗಳಿಗೂ ಅತೀ ಅಗತ್ಯವಾಗಿ ಬೇಕಿರುವ ಜಲಮೂಲ ಗಳನ್ನು ರಕ್ಷಿಸುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿ ದ್ದರು. ಮುಖ್ಯ ಅತಿಥಿಯಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಎಸ್. ಭರತ್, ಕಾಲೇಜು ಪ್ರಾಂಶುಪಾಲ ಶ್ರೀಧರ್ ಅವರು ಗಳು ಇದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀ ಲರು ಗಳಾದ ಎಚ್.ಎಸ್.ವೆಂಕಟೇಶ್, ರಶ್ಮಿ ಅವರುಗಳು ದಿನದ ಮಹತ್ವದ ಬಗ್ಗೆ ವಿವ ರಿಸಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಇದ್ದರು.

Translate »