ಉ.ಕರ್ನಾಟಕ ನೆರೆ ಸಂತ್ರಸ್ತರಿಗೆ ದಿನಬಳಕೆ ಸಾಮಗ್ರಿ ರವಾನಿಸಿದ ಯುವಮೋರ್ಚಾ
ಮೈಸೂರು

ಉ.ಕರ್ನಾಟಕ ನೆರೆ ಸಂತ್ರಸ್ತರಿಗೆ ದಿನಬಳಕೆ ಸಾಮಗ್ರಿ ರವಾನಿಸಿದ ಯುವಮೋರ್ಚಾ

October 28, 2020

ಮೈಸೂರು, ಅ.27(ಆರ್‍ಕೆಬಿ)- ಉತ್ತರ ಕರ್ನಾಟಕದ ನೆರೆಯಿಂದ ಸಂತ್ರಸ್ತವಾಗಿರುವ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಬಿಜೆಪಿ ಯುವ ಮೋರ್ಚಾ ಮೈಸೂರು ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ತಾವು ದಾನಿಗಳಿಂದ ಸಂಗ್ರಹಿಸಿದ್ದ ದಿನಬಳಕೆ ವಸ್ತುಗಳು, ದಿನಸಿ ಪದಾರ್ಥಗಳನ್ನು ಇಂದು ಟೆಂಪೊ ಮೂಲಕ ಕಳುಹಿಸಿಕೊಟ್ಟರು.

50 ಬಾಕ್ಸ್ ಕುಡಿಯುವ ನೀರು, 100 ಬಾಕ್ಸ್ ಬಿಸ್ಕೆಟ್, ಚಪಾತಿ, ಸೋಪು, ಶಾಂಪು, ಹೊದಿಕೆ, ಟವಲ್ ಮೊದಲಾದ ವಸ್ತುಗಳಿದ್ದ ಟೆಂಪೊಗೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್, ಜೈಶಂಕರ್, ಯುವ ಮೋರ್ಚಾ ನಗರಾಧ್ಯಕ್ಷ ಎಂ.ಜೆ.ಕಿರಣ್‍ಗೌಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್‍ಕುಮಾರ್, ಸೋಮಸುಂದರ್, ಯುವಮೋರ್ಚಾ ನಗರ ಉಸ್ತುವಾರಿ ರಮೇಶ್ ಇನ್ನಿತರರಿದ್ದರು.

Translate »