ಜೀರೊ ಕಾರ್ಬನ್ ಪ್ರಮಾಣ ಪತ್ರ  ಪಡೆದ ‘ಸೈಕಲ್ ಪ್ಯೂರ್ ಅಗರಬತ್ತೀಸ್’
ಮೈಸೂರು

ಜೀರೊ ಕಾರ್ಬನ್ ಪ್ರಮಾಣ ಪತ್ರ ಪಡೆದ ‘ಸೈಕಲ್ ಪ್ಯೂರ್ ಅಗರಬತ್ತೀಸ್’

June 6, 2021

ಮೈಸೂರು, ಜೂ.5(ಎಂಕೆ)- ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಸೈಕಲ್ ಪ್ಯೂರ್ ಅಗರಬತ್ತೀಸ್’ ಸಂಸ್ಥೆಯು ವಿಶ್ವದಲ್ಲೇ ಶೂನ್ಯ ಇಂಗಾಲ (ಜೀರೋ ಕಾರ್ಬನ್) ಪ್ರಮಾಣೀಕರಣ ಪತ್ರ ಪಡೆದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪರಿಸರಕ್ಕೆ ಪೂರಕವಾದ ‘ಸೈಕಲ್ ಪ್ಯೂರ್ ಅಗರ ಬತ್ತೀಸ್’ ಕಂಪೆನಿಯ ಕಾರ್ಯವನ್ನು ಯುನೈಟೆಡ್ ಕಿಂಗ್‍ಡಮ್‍ನ ನ್ಯಾಚುರಲ್ ಕ್ಯಾಪಿಟಲ್ ಪಾರ್ಟ್ನಸ್ ಗುರು ತಿಸಿದ್ದು, ಇದು ಹೆಮ್ಮೆಯ ವಿಚಾರ ಎಂದು ಕಂಪೆನಿ ತಿಳಿಸಿದೆ. ಕಂಪೆನಿಯು `ಜೀರೋ ಕಾರ್ಬನ್’ ಸಾಧಿಸಲು ಅನೇಕ ಸಮರ್ಥನೀಯ ಉಪ ಕ್ರಮಗಳೊಂದಿಗೆ ಸಹಕರಿಸಿತು. ತಮಿಳುನಾಡಿನ ಆಂಡಿಪಟ್ಟಿ ಮತ್ತು ಥೇನಿ ವಿಂಡ್ ಪವರ್ ಯೋಜನೆಗಳು ಶೂನ್ಯ-ಹೊರ ಸೂಸುವಿಕೆಯನ್ನು ನೀಡುತ್ತವೆ. ಈ ಯೋಜನೆ ಗಳು ವಿಸಿಎಸ್‍ನಿಂದ ಪರಿಶೀಲಿಸಲ್ಪಟ್ಟಿದೆ. ಅಲ್ಲದೇ, ಸಿಡಿಎಂನಿಂದ ನೋಂದಣಿಯಾಗಿದೆ.
ಸೈಕಲ್ ಪ್ಯೂರ್ ಅಗರಬತ್ತೀಸ್‍ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತ ನಾಡಿ, ಮುಂದಿನ ಪೀಳಿಗೆಗೆ ಭರವಸೆ ನೀಡುವುದೇ ನಮ್ಮ ಕಂಪೆನಿಯ ಉದ್ದೇಶ. ಪ್ರಾರ್ಥನೆ ಭವಿಷ್ಯದ ಭರವಸೆಯ ವಿಧಾನ. ಆಧುನಿಕ ಜಗತ್ತಿಗೆ ಹವಾಮಾನ ಬದ ಲಾವಣೆ ದೊಡ್ಡ ಕಂಟಕ. ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಒದಗಿಸು ವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ, ನಮ್ಮ ಕಂಪೆನಿಯು ಶೂನ್ಯ ಇಂಗಾಲ ಆಶಯದಲ್ಲಿ ಉತ್ಪಾದನೆ ಕಾರ್ಯ ಮಾಡುತ್ತಿದೆ. ಭೂಮಾತೆಯ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ. ಭವಿಷ್ಯಕ್ಕಾಗಿ ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಲು ಪಣ ತೊಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Translate »