ಅ.2ರಿಂದ ಡಿ.ಬನುಮಯ್ಯ ವಿದ್ಯಾ ಸಂಸ್ಥೆ  ಶತಮಾನೋತ್ಸವ ಸಂಭ್ರಮ ಆಚರಣೆ
ಮೈಸೂರು

ಅ.2ರಿಂದ ಡಿ.ಬನುಮಯ್ಯ ವಿದ್ಯಾ ಸಂಸ್ಥೆ  ಶತಮಾನೋತ್ಸವ ಸಂಭ್ರಮ ಆಚರಣೆ

September 30, 2018

ಮೈಸೂರು:  ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಕ್ಕಾಗಿ ಸ್ಥಾಪಿತಗೊಂಡ ಮೈಸೂರಿನ ಡಿ.ಬನುಮಯ್ಯ ವಿದ್ಯಾ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಅ.2ರಂದು 1 ವರ್ಷಗಳ ಕಾಲ ವಿವಿಧ ಕಾರ್ಯಕ್ರಮ ಗಳ ಮೂಲಕ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ವಿ.ಬಿ.ಜಯದೇವ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮೈಸೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯನ್ನು 1919ರ ಅ.2ರಂದು ಡಿ.ಬನುಮಯ್ಯನವರು ಸ್ಥಾಪಿಸಿದರು. ಇದೀಗ ಈ ವಿದ್ಯಾಸಂಸ್ಥೆ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಅ.2ರಿಂದ 2019ರ ಅ.2ರವರೆಗೂ ವಿವಿಧ ಕಾರ್ಯಕ್ರಮ ನಡೆಸುವ ಮೂಲಕ ಆಚರಿಸಲಾಗುತ್ತಿದೆ. ಈ ಅವಧಿಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳನ್ನು ನಡೆಸಲಾಗುತ್ತದೆ.

ಅಲ್ಲದೇ ಹಳೆ ವಿದ್ಯಾರ್ಥಿಗಳು ಹಾಗೂ ವಿದ್ವತ್ಪೂರ್ಣ ಲೇಖಕರ ಸ್ಮರಣ ಸಂಚಿಕೆ ಪ್ರಕಟಿಸ ಲಾಗುವುದು. ಇದರೊಂದಿಗೆ ನೂತನವಾಗಿ ಸುಸಜ್ಜಿತ ಶತಮಾನೋತ್ಸವ ಕಟ್ಟಡ ನಿರ್ಮಿಸ ಲಾಗುವುದು ಎಂದರು. ಡಿ.ಬನುಮಯ್ಯ ಶಿಕ್ಷಣ ಸಂಸ್ಥೆಯು 12 ಅಂಗ ಸಂಸ್ಥೆಗಳನ್ನು ಹೊಂದಿದೆ. ಶಿಶುವಿಹಾರ ಶಿಕ್ಷಣದಿಂದ ಸ್ನಾತಕೋತ್ತರ ಪದವಿಯವರೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಜೀವನವನ್ನು ಉಜ್ವಲಗೊಳಿಸುತ್ತಾ ಬಂದಿದೆ. ವಾಣಿಜ್ಯ, ವ್ಯವಹಾರ, ಉದ್ಯಮ, ಬ್ಯಾಂಕಿಂಗ್, ಆಡಳಿತ ನಿರ್ವಹಣೆ, ಶಿಕ್ಷಣ, ಲಲಿತ ಕಲೆಗಳ ಕ್ಷೇತ್ರಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದೆ ಎಂರಲ್ಲದೆ, ಶತಮಾನೋತ್ಸವ ಸ್ಮರಣಾರ್ಥವಾಗಿ ಸುಸಜ್ಜಿತವಾದ ಶತಮಾನೋತ್ಸವ ಭವನ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಎಸ್.ಜಿ.ಲಕ್ಷ್ಮೇಗೌಡ, ಆಡಳಿತಾಧಿಕಾರಿ ಡಾ.ಎನ್.ತಿಮ್ಮಯ್ಯ ಇದ್ದರು.

Translate »