ರಂಗ ಕಲೆಗಳಿಂದ ನೆಮ್ಮದಿ ಜೀವನ ಸಾಧ್ಯ
ಮೈಸೂರು

ರಂಗ ಕಲೆಗಳಿಂದ ನೆಮ್ಮದಿ ಜೀವನ ಸಾಧ್ಯ

September 30, 2018

ಮೈಸೂರು: ಒತ್ತಡ ಬದುಕಿನಿಂದ ದೂರವಾಗಿ ರಂಗಕಲೆಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ನೆಮ್ಮದಿಯ ಜೀವನ ನಡೆಸಬಹುದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಪ್ರಭ ಸಾಂಸ್ಕೃತಿಕ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊ ಬ್ಬರ ನಿತ್ಯ ಬದುಕಿನಲ್ಲಿ ಒತ್ತಡ, ಜಿಜ್ಞಾಸೆ ಗಳೇ ತುಂಬಿರುವಾಗ, ರಂಗಕಲಾವಿದರಿಂದ ಮಾತ್ರ ನೆಮ್ಮದಿ ಬದುಕು ಕಾಣಲು ಸಾಧ್ಯವಾಗುತ್ತದೆ. ಕಲೆ, ಸಾಹಿತ್ಯ, ಸಾಂಸ್ಕೃತಿಕ ವಾಗಿ ತೊಡಗಿಸಿಕೊಳ್ಳದಿದ್ದರೆ ಮನುಷ್ಯ ಮಾನಸಿಕವಾಗಿ ಸ್ಥಿತಿವಂತನಾಗಿರಲು ಸಾಧ್ಯ ವಿಲ್ಲ. ರಂಗಚಟುವಟಿಕೆಯಲ್ಲಿ ತೊಡಗಿಸಿ ಕೊಂಡರೆ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ. ರಂಗಕಲಾ ಕ್ಷೇತ್ರದಲ್ಲಿ ಅಂಥ ಅದ್ಭುತ ಶಕ್ತಿಯಿದೆ ಎಂದು ಸ್ಮರಿಸಿದರು.

ರಂಗಪ್ರಭ ಸಾಂಸ್ಕೃತಿಕ ವೇದಿಕೆ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಕೆ.ಆರ್.ಪೇಟೆಯ ಹಾಸ್ಯನಟ ಶಿವರಾಜ್ ತಳಸಮುದಾಯದಿಂದ ಬೆಳೆದು ಇಂದು ಖ್ಯಾತ ನಟರೊಂದಿಗೆ ಅಭಿನಯಿಸುವ ಅವಕಾಶ ಪಡೆದುಕೊಂಡಿದ್ದಾರೆ. ಮನುಷ್ಯ ನಿರ್ದಿಷ್ಟ ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಮಾತ್ರವೇ ಗುರಿ ತಲುಪಲು ಸಾಧ್ಯ. ಅಂತೆಯೇ ಎಲ್ಲರ ಪ್ರಯತ್ನ ನಿರಂತರವಾಗಿರಬೇಕು ಎಂದು ನುಡಿದರು.

ಸಾಹಿತಿ ಮಳಲಿ ವಸಂತಕುಮಾರ್ ಮಾತನಾಡಿ, ನಮ್ಮ ತನುಮನದಲ್ಲಿ ರಸ ರೋಮಾಂಚನ ಉಂಟು ಮಾಡುವ ಕಲೆ ನಾಟಕ. ಪಂಪ, ರನ್ನ ತಮ್ಮ ಮಹಾಕಾವ್ಯಗಳಲ್ಲಿ ವೀರ ರಸದಿಂದಲೇ ಜನರ ಗಮನ ಸೆಳೆದಿದ್ದಾರೆ. ಕಲೆಯ ಹೊರತಾಗಿ ಬೇರ್ಯಾವುದು ಹೆಚ್ಚು ಸಂತೋಷ ಕೊಡುವುದಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಮಂದಿ ನಾಟಕದತ್ತ ಮುಖ ಮಾಡಬೇಕಿದೆ. ಮಂತ್ರಿಗಳು ಅಂದರೆ ಯಾರೂ ಬರಲ್ಲ ಎಂಬ ಮನೋಭಾವ ಈಗಿನ ಜನರಲ್ಲಿದೆ. ಆ ಭಾವನೆಗೆ ಅಪವಾದವೆಂಬಂತೆ ಸಿ.ಎಸ್.ಪುಟ್ಟರಾಜು ಅವರು ಕಾರ್ಯಕ್ರಮಕ್ಕೆ ಆಗಮಿಸಿ, ರಾಜಕಾರಣಿಗಳ ಘನತೆ ಕಾಪಾಡಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದೇ ವೇಳೆ ಸಚಿವ ಸಿ.ಎಸ್.ಪುಟ್ಟರಾಜು, ರೈತ ಸುಬ್ಬೇಗೌಡ, ರಂಗ ಸಾಹಿತ್ಯ ಪ್ರಕಾ ಶಕ ಹೆಚ್.ಎಸ್.ಗೋವಿಂದೇಗೌಡ, ಸಾಹಿತಿ ಮಳಲಿ ವಸಂತಕುಮಾರ್, ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಗುಬ್ಬಿಗೂಡು ರಮೇಶ್, ವೇದಿಕೆಯ ಅಧ್ಯಕ್ಷ ಹೆಚ್.ವಿ.ಗಣೇಶ್, ನಿವೃತ್ತ ಡಿವೈಎಸ್ಪಿ ಹೆಚ್.ಎಲ್.ಶಿವಬಸಪ್ಪ, ನಿವೃತ್ತ ಎಂಜಿ ನಿಯರ್ ಸಂಗಾಪುರ ನಾಗರಾಜ್, ಕರ್ನಾ ಟಕ ನಾಟಕ ಅಕಾಡೆಮಿ ನಿವೃತ್ತ ರಿಜಿ ಸ್ಟ್ರಾರ್ ಎ.ಎಸ್.ನಾಗರಾಜ್, ಅಕಾಡೆಮಿ ಸದಸ್ಯ ಹೊನ್ನನಾಯಕ, ನಾಟಕ ನಿರ್ದೇ ಶಕ ರಾಜಪ್ಪ ಕಿರಗಸೂರು, ವೇದಿಕೆ ಖಜಾಂಚಿ ಕೆ.ಬಿ.ಬೋರೇಗೌಡ, ಕಾರ್ಯದರ್ಶಿ ಸಿದ್ದೇಗೌಡ, ಬಸವೇಗೌಡ ಇದ್ದರು.

Translate »