ಮೈಸೂರು ತಾಪಂ ಅಧ್ಯಕ್ಷರು, ಸದಸ್ಯರ ನಡುವೆ ಮುಸುಕಿನ ಗುದ್ದಾಟ: ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ
ಮೈಸೂರು

ಮೈಸೂರು ತಾಪಂ ಅಧ್ಯಕ್ಷರು, ಸದಸ್ಯರ ನಡುವೆ ಮುಸುಕಿನ ಗುದ್ದಾಟ: ಕೋರಂ ಅಭಾವದಿಂದ ವಿಶೇಷ ಸಭೆ ಮುಂದೂಡಿಕೆ

September 30, 2018

ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಜೆಡಿಎಸ್‍ನಲ್ಲಿ ಅಧ್ಯ ಕ್ಷರು ಹಾಗೂ ಸದಸ್ಯರ ನಡುವೆ ಮುಸುಕಿನ ಗುದ್ದಾಟದಿಂದ ಶನಿವಾರ ನಿಗದಿಯಾಗಿದ್ದ ತಾಪಂ ವಿಶೇಷ ಸಭೆ ಕೋರಂ ಅಭಾವ ದಿಂದ ಮುಂದೂಡಲ್ಪಟ್ಟಿತು.

ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರು ತಮ್ಮ ಅಧಿಕಾರಾವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಉಪಾ ಧ್ಯಕ್ಷ ಮಂಜು ಹಾದಿಯಾಗಿ ಸ್ವಪಕ್ಷೀಯರೇ ಮುನಿಸಿಕೊಂಡು ಇಂದಿನ ಸಭೆಗೆ ಗೈರಾಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಮಿನಿ ವಿಧಾನಸೌಧದ ತಾಪಂ ಸಭಾಂಗಣದಲ್ಲಿ ಇಂದು ಬೆಳಿಗ್ಗೆ 11ಕ್ಕೆ ವಿಶೇಷ ಸಭೆ ನಿಗದಿ ಮಾಡಲಾಗಿತ್ತು. ಆದರೆ ಸದಸ್ಯ ರಿಗಾಗಿ ಕಾದು 40 ನಿಮಿಷ ತಡವಾಗಿ ಸಭೆ ಆರಂಭಿಸಲಾಯಿತು. ಈ ವೇಳೆ ಅಧ್ಯಕ್ಷರು ಸೇರಿದಂತೆ ಕೇವಲ 10 ಮಂದಿ ಸದಸ್ಯರು ಹಾಜರಿದ್ದರು. ಈ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಕೋರಂ ಅಭಾವ ಇರುವುದಾಗಿ ಸಭೆಗೆ ತಿಳಿಸಿ ಸಭೆ ಯನ್ನು ಮುಂದೂಡಿದರು.

ಇದಕ್ಕೂ ಮುನ್ನ ಸಭೆ ಉದ್ದೇಶಿಸಿ ಮಾತ ನಾಡಿದ ಕಾಳಮ್ಮ ಕೆಂಪರಾಮಯ್ಯ, ಎಲ್ಲಾ 38 ಮಂದಿ ಸದಸ್ಯರಿಗೂ ಕರೆ ಮಾಡಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿ ದ್ದೇನೆ. ಹೀಗಿದ್ದರೂ ಸಭೆಗೆ ಗೈರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿವೆ. ಸಭೆ ನಡೆಸಿ ಅವುಗಳಿಗೆ ಪರಿಹಾರ ಕಂಡು ಕೊಳ್ಳಬೇಕಿದೆ. ಸಭೆಗಳಿಗೆ ಈ ರೀತಿ ಗೈರು ಹಾಜರಿಯಾದರೆ ತಾಲೂಕಿನ ಅಭಿವೃದ್ಧಿ ಕೆಲಸಗಳು ಕುಂಠಿತವಾಗಲಿವೆ. ಗೈರಿರುವ ಸದ ಸ್ಯರ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಾಜರಿದ್ದ 8 ಮಂದಿ ಕಾಂಗ್ರೆಸ್ ಸದಸ್ಯರು ತಾಪಂ ಇಓ ಲಿಂಗ ರಾಜಯ್ಯ ಅವರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಓ ಲಿಂಗರಾಜಯ್ಯ, ಇಂದಿನ ಸಭೆ ನಡೆಯಲು ಕನಿಷ್ಠ 20 ಸದ ಸ್ಯರ ಹಾಜರಾತಿ ಅಗತ್ಯವಿದೆ. ನಿರಂತರವಾಗಿ ನಾಲ್ಕು ಸಭೆಗಳಿಗೆ ಗೈರು ಹಾಜರಾದರೆ ಸದಸ್ಯತ್ವ ರದ್ದು ಮಾಡಲು ಅವಕಾಶವಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗು ವುದು ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ: ಇಂದಿನ ಸಭೆಯಲ್ಲಿ ತಾಪಂನ ಮೂರು ಸ್ಥಾಯಿ ಸಮಿತಿ ಗಳಿಗೆ ಸದಸ್ಯರನ್ನು ಆಯ್ಕೆ ಮಾಡಬೇಕಿತ್ತು. ಕೋರಂ ಅಭಾವದಿಂದ ಸಭೆ ಮುಂದೂಡ ಲ್ಪಟ್ಟು ಹಣಕಾಸು ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತು. ತಾಪಂ ಸದಸ್ಯರಾದ ಸುರೇಶ್‍ಕುಮಾರ್, ಎಂ.ಎಸ್.ಕುಮಾರ್, ಸಿದ್ದರಾಮೇಗೌಡ, ಗೀತಾ, ಅಂಜಲಿ, ಭಾಗ್ಯ, ಮುದ್ದುರಾಮೇಗೌಡ, ನೇತ್ರಾವತಿ ವೆಂಕಟೇಶ್ ಸೇರಿದಂತೆ ಒಟ್ಟು 10 ಮಂದಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಪೈಕಿ ಕಾಂಗ್ರೆಸ್‍ನ 8 ಹಾಗೂ ಜೆಡಿಎಸ್‍ನ ಇಬ್ಬರು (ಅಧ್ಯಕ್ಷರು ಹಾಗೂ ನೇತ್ರಾವತಿ ವೆಂಕಟೇಶ್) ಸದಸ್ಯರು ಹಾಜರಿದ್ದರು.

ಈ ತಾರತಮ್ಯ ಏಕೆ…?
ಅಧ್ಯಕ್ಷೆಯಾಗಿ ನನಗೆ 2 ವರ್ಷ ಮತ್ತು ಉಪಾಧ್ಯಕ್ಷರಾಗಿ ಮಂಜು ಅವರಿಗೆ 1 ವರ್ಷ ಅಧಿಕಾರಾವಧಿ ಎಂದು ತೀರ್ಮಾನವಾಗಿತ್ತು. ಆದರೆ ಮಂಜು ಅವರು 2 ವರ್ಷವನ್ನೂ ಪೂರೈಸಿದ್ದು, ಐದು ವರ್ಷದ ಅವಧಿಗೂ ಅವರನ್ನೇ ಉಪಾಧ್ಯಕ್ಷರಾಗಿ ಮುಂದುವರೆಸಲು ಪಕ್ಷದ ಸದಸ್ಯರು ಸಮ್ಮತಿಸಿದ್ದಾರೆ. ಆದರೆ ನನಗೆ ಮಾತ್ರ ರಾಜೀನಾಮೆ ಕೊಡಲು ಒತ್ತಡ ಹಾಕಲು ಈ ರೀತಿ ಗೈರಾಗುವ ಮೂಲಕ ಅಸಹಕಾರ ನೀಡುತ್ತಿದ್ದಾರೆ. 30 ತಿಂಗಳಿಗೆ ಅಧಿಕಾರಾವಧಿ ಮುಂದು ವರೆಸಲು ಈಗಾಗಲೇ ಮನವಿ ಮಾಡಿ ದ್ದೇನೆ. ಮಾತುಕತೆ ಮೂಲಕ ಬಗೆ ಹರಿಸುವುದನ್ನು ಬಿಟ್ಟು ರಾಜೀನಾಮೆ ವಿಷಯವನ್ನು ಮುಂದಿಟ್ಟುಕೊಂಡು ಆಡಳಿತ ಸುಗಮವಾಗಿ ನಡೆಯದಂತೆ ಮಾಡುತ್ತಿರುವುದು ಎಷ್ಟು ಸರಿ. ಉಪಾ ಧ್ಯಕ್ಷರಾಗಿ 5 ವರ್ಷ ಮುಂದುವರೆಸಲು ಮಂಜು ಅವರಿಗೆ ಅವಕಾಶ ಕೊಟ್ಟು ನನ್ನ ವಿಷಯದಲ್ಲಿ ಏಕೆ ತಾರತಮ್ಯ.

Translate »