ಇಂದು ಪುಟ್ಟರಂಗಶೆಟ್ಟಿ ರೆಬೆಲ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಚಾಮರಾಜನಗರ

ಇಂದು ಪುಟ್ಟರಂಗಶೆಟ್ಟಿ ರೆಬೆಲ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

April 19, 2018

ಚಾಮರಾಜನಗರ:  ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಏಪ್ರಿಲ್ 19ರಂದು ನಾಮಪತ್ರ ಸಲ್ಲಿಸಿದ್ದೇನೆ ಎಂದು ವಕೀಲ ಹಾಗೂ ಉಪ್ಪಾರ ಜನಾಂಗದ ಮುಖಂಡ ರಂಗ ಸ್ವಾಮಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 14 ವರ್ಷಗಳಿಂದ ನಗರದ ಜಿಲ್ಲಾ ನ್ಯಾಯಾಲಯ ಗಳಲ್ಲಿ ವಕೀಲನಾಗಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲಾ ವಕೀಲರ ಸಂಘದಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ ಮತ್ತು ಇತರ ಸಂಘಸಂಸ್ಥೆಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ್ದೇನೆ. ನನ್ನ ಹಿರಿಯರು ಮತ್ತು ಸ್ನೇಹಿತರ ಸಲಹೆ ಮೇರೆಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು. ಜಿಲ್ಲೆಯಲ್ಲಿ ಉಪ್ಪಾರ ಜನಾಂಗ ಅತ್ಯಂತ ಮುಗ್ಧ ಸಮುದಾಯ ವಾಗಿದೆ. ಬಡತನ ಮತ್ತು ಅನ ರಕ್ಷತೆಯಿಂದ ನರಳುತ್ತಿದೆ. ಸಮುದಾಯದಲ್ಲಿ ಸ್ಪಷ್ಟ ನಾಯಕತ್ವ ಮತ್ತು ನಾಯಕರು ಇರಲಿಲ್ಲ. ಹೀಗಾಗಿ ಕಳೆದ 10 ವರ್ಷಗಳ ಹಿಂದೆ ಉಪ್ಪಾರ ಜನಾಂಗ ಮತ್ತು ಇತರ ಹಿಂದುಳಿದ ಜನಾಂಗದ ಹಿತ ದೃಷ್ಟಿಯನ್ನು ಇಟ್ಟುಕೊಂಡು ಸಮುದಾಯಕ್ಕೆ ನಾಯಕತ್ವ ಕೊಡಲು ಮುಂದಾದರೂ ನಾಯಕರು ಸಮುದಾಯ ವನ್ನು ಸಮಸ್ಯೆಯಿಂದ ವಿಮೋ ಚನೆಗೊಳಿಸ ಬಹುದು ಎಂದು ಕನಸು ಕಂಡೆವು. ಆದರೆ 10 ವರ್ಷ ದಿಂದ ನಮ್ಮ ಸಮುದಾಯ ಕಂಡಿದ್ದ ಕನಸು ನುಚ್ಚುನೂರು ಆಯಿತು ಎಂದು ರಂಗಸ್ವಾಮಿ ಶಾಸಕ ಸಿ.ಪುಟ್ಟರಂಗಶೆಟ್ಟಿ ವಿರುದ್ಧ ಕಿಡಿಕಾರಿದರು.

ವಕೀಲರಾದ .ರಮೇಶ್, ನಂದೀಶ್, ಮಹೇಶ್ ಕುಮಾರ್, ಸಹೋದರರಾದ ಶಿವಣ್ಣ, ನಾರಾ ಯಣ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

Translate »