ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಯುವತಿ ಅಲ್ಲಿಗೆ ಹೋಗ್ಬರ‍್ದಿತ್ತು…
ಮೈಸೂರು

ಕಾಂಗ್ರೆಸ್‌ನವರು ನನ್ನನ್ನು ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಯುವತಿ ಅಲ್ಲಿಗೆ ಹೋಗ್ಬರ‍್ದಿತ್ತು…

August 27, 2021

ಬೆಂಗಳೂರು, ಆ.೨೬- ಮೈಸೂರು ಚಾಮುಂಡೇಶ್ವರಿ ಬೆಟ್ಟದ ತಪ್ಪಲಿನಲ್ಲಿ ಎರಡು ದಿನಗಳ ಹಿಂದೆ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂ ಹಿಕ ಅತ್ಯಾಚಾರ ಪ್ರಕರಣ ಈಗ ರಾಜಕೀಯ ತಿರುವು ಪಡೆದು ಕೊಳ್ಳುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷ ನಾಯಕರು ಇದರ ಬಗ್ಗೆ ರಾಜಕೀಯವಾಗಿ ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದಾರೆ.
ಮೈಸೂರಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ, ಗೃಹ ಸಚಿವರು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್‌ನವರು ಈಗಾಗಲೇ ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಮಾಧ್ಯಮದವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಪ್ರತಿಕ್ರಿಯೆ ಕೇಳಿದಾಗ ಅವರು ಬೇಜವಾಬ್ದಾರಿ ರೀತಿಯ ಹೇಳಿಕೆ ನೀಡಿದ್ದಾರೆ. ಮೈಸೂರು ನಗರದ ಹೊರವಲಯದಲ್ಲಿ ಅತ್ಯಾಚಾರವಾಗಿದ್ದು, ಕಾಂಗ್ರೆಸ್‌ನವರು ಗೃಹ ಸಚಿವರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ರಾಜಕೀಯ ಲಾಭ ಪಡೆಯಲು ನೋಡುತ್ತಿದ್ದಾರೆ. ಇದು ಅಮಾನುಷ ಕೃತ್ಯ, ಎಲ್ಲೋ ಈ ರೀತಿಯ ಪ್ರಕರಣಗಳು ನಡೆದಾಗ ನಾವೆಲ್ಲರೂ ಒಟ್ಟಾಗಿ ಮಾನವೀಯದೃಷ್ಟಿಯಿಂದ ನೋಡಿ ಪತ್ತೆ ಹಚ್ಚುವುದು ಬಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ನೋಡುತ್ತಿರುವುದು ಸರಿಯಲ್ಲ ಎಂದರು. ಕಳೆದ ಮಂಗಳವಾರ ಸಾಯಂಕಾಲ ೭-೭.೩೦ ಹೊತ್ತಿನಲ್ಲಿ ಯುವಕ-ಯುವತಿ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿಗೆ ಅವರು ಹೋಗಬಾರದಾಗಿತ್ತು, ಯಾರನ್ನೂ ಹೋಗಬೇಡಿ ಎಂದು ಪೊಲೀಸರಿಗೆ ಪದೇ ಪದೆ ತಡೆಯಲು ಆಗುತ್ತದೆಯೇ, ನಾನು ಇಂದು ಮೈಸೂರಿಗೆ ಹೋಗಿ

ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಎಲ್ಲಿ ಕುಂದುಕೊರತೆಯಿದೆ ಎಂದು ನೋಡುತ್ತೇನೆ. ಮುಂದೆ ಈ ರೀತಿ ಆಗದಂತೆ ಎಚ್ಚರವಹಿಸುತ್ತೇವೆ ಎಂದರು,
ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ: ನಾನು ನನ್ನ ಮಾತನ್ನು ವಾಪಸ್ ಪಡೆಯುತ್ತೇನೆ ಎಂದು ಹೇಳುವ ಮೂಲಕ ಗೃಹ ಸಚಿವ ಅರಗ ಜ್ಞಾನೇಂದ್ರ ಕ್ಷಮೆಯಾಚಿಸಿದ್ದಾರೆ.
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬAಧ ಬೇಜವಾಬ್ದಾರಿ ಹೇಳಿಕೆ ಸಂಬAಧ ಪ್ರತಿಕ್ರಿಯಿಸಿದ ಅವರು, ನಾನು ಅವಳನ್ನು ನನ್ನ ಮಗಳ ಸ್ಥಾನದಲ್ಲಿ ನೋಡುತ್ತಿದ್ದೇನೆ. ಹೀಗಾಗಿ ನಾನು ಆತಂಕದಿAದ ಆ ಮಾತನ್ನು ಹೇಳಿದ್ದೇನೆ. ನಾನು ಆ ಮಾತನ್ನು ವಾಪಸ್ ಪಡೆದುಕೊಳ್ಳುತ್ತೇನೆ. ಅಲ್ಲದೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿಯೂ ಇಂತಹ ಒಂದು ಗಂಭೀರ ವಾದ ಪ್ರಕರಣ ನಡೆದಿದೆ. ಇದರ ಬಗ್ಗೆ ನಾನು ಹೆಚ್ಚು ಹೇಳಲು ಇಷ್ಟ ಪಡುವುದಿಲ್ಲ. ಯಾಕಂದ್ರೆ ಗೃಹ ಇಲಾಖೆ ನಿಭಾಯಿಸಿದ ಅನೇಕ ಹಿರಿಯರು ಇದ್ದಾರೆ. ಹೀಗಾಗಿ ಅವರು ಕೂಡ ಸ್ಪಷ್ಟಪಡಿಸಬಹುದು ಎಂದು ನಾನು ಅಂದುಕೊAಡಿದ್ದೇನೆ ಎಂದರು.

Translate »