ಮಲ್ಕುಂಡಿ, ಏ. 24(ಚನ್ನಪ್ಪ)-ನಂಜನಗೂಡು ತಾಲೂಕಿನ ಹೆಡಿಯಾಲ ಗ್ರಾಮದ ಕಾವೇರಿ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷರಾಗಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹೊಸವೀಡು ಮಹೇಶ್, ಉಪಾಧ್ಯಕ್ಷರಾಗಿ ಸಾಕಮ್ಮ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹೊಸವೀಡು ಮಹೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಸಾಕಮ್ಮ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಯನ್ನು ಚುನಾವಣೆ ಅಧಿಕಾರಿ ರಘು ಘೋಷಣೆ ಮಾಡಿದರು.
ನಿರ್ದೇಶಕರಾದ ಎಂ.ಬಿ.ಬಸವರಾಜ್, ಮಹದೇವಸ್ವಾಮಿ, ಚಿಕ್ಕಣ್ಣ, ಶಂಭಪ್ಪ, ಮಹದೇವಪ್ಪ, ಬಸವ ರಾಜಪ್ಪ, ರಮೇಶ್, ರಾಜಮ್ಮ, ಮಲ್ಲಪ್ಪ, ಪುಟ್ಟಸ್ವಾಮಿ, ಸಿದ್ದರಾಜು, ಪಿಎಸ್ಎಸ್ಸಿ ಅಧ್ಯಕ್ಷ ಹಾಡ್ಯ ಶಂಕರ್, ಮುಖಂಡರಾದ ಬಳ್ಳೂರು ಹುಂಡಿ ಶಿವನಾಗಪ್ಪ, ನಾಗೇಶ್, ಲೋಕೇಶ್, ಗುರುಸಿದ್ದಪ್ಪ, ಶಿವಪ್ರಸಾದ್, ಸಿಇಒ ರಾಚಯ್ಯ ಹಾಜರಿದ್ದರು.