ಕೋಮುವಾದಿ ಬಿಜೆಪಿಯನ್ನು ಅಪ್ಪಿ-ತಪ್ಪಿಯೂ ಬೆಂಬಲಿಸಬೇಡಿ
ಮೈಸೂರು

ಕೋಮುವಾದಿ ಬಿಜೆಪಿಯನ್ನು ಅಪ್ಪಿ-ತಪ್ಪಿಯೂ ಬೆಂಬಲಿಸಬೇಡಿ

December 12, 2021

ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣ ಅಭಿಯಾನಕ್ಕೆ ಚಾಲನೆ
ತಾವೂ ಸದಸ್ಯತ್ವ ಪಡೆದ ಸಿದ್ದರಾಮಯ್ಯ

ರಾಜಕೀಯ ಉದ್ದೇಶದಿಂದ ಕಾಂಗ್ರೆಸ್ ಸ್ಥಾಪನೆಯಾಗಿರಲಿಲ್ಲ

೫ ರೂ. ಕೊಟ್ಟು ಸದಸ್ಯತ್ವ ಪಡೆದುಕೊಳ್ಳಿ

ನಾನು ಹಿಂದೂ ವಿರೋಧಿಯಲ್ಲ

ದೇವಸ್ಥಾನಕ್ಕೂ ಹೋಗುತ್ತೇನೆ

ಮೈಸೂರು, ಡಿ.೧೧(ಎಂಟಿವೈ)- ಸಾಮಾಜಿಕ ನ್ಯಾಯ, ಧರ್ಮ ಸಹಿಷ್ಣುತೆ ಹಾಗೂ ಬಡವರ ಹಿತಕಾಯುವ ಬದ್ಧತೆ ಕಾಂಗ್ರೆಸ್‌ಗೆ ಮಾತ್ರ ಇದ್ದು, ದೇಶದಲ್ಲಿ ಸಾಮರಸ್ಯ ನೆಲೆಸಬೇಕಾದರೆ ಕೋಮು ವಾದಿ ಬಿಜೆಪಿಗೆ ಅಪ್ಪಿತಪ್ಪಿಯೂ ಬೆಂಬಲ ನೀಡ ಬಾರದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಮೈಸೂರು ಗ್ರಾಮಾಂತರ ಕಾಂಗ್ರೆಸ್ ಹಾಗೂ ವರುಣಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಕಾಂಗ್ರೆಸ್ ಸದಸ್ಯತ್ವ ನೋಂದಣ ಅಭಿಯಾನಕ್ಕೆ ಸ್ವತಃ ಕಾಂಗ್ರೆಸ್ ಪಕ್ಷದ ಸದಸ್ಯತ್ವನ್ನು ಪಡೆಯುವ ಮೂಲಕ ಚಾಲನೆ ನೀಡಿ, ಮಾತನಾಡುತ್ತಿದ್ದರು. ದೇಶಕ್ಕೆ ಸ್ವಾತಂತ್ರö್ಯ ದೊರಕಿಸಿಕೊಡುವುದರಲ್ಲಿ ಪ್ರಮುಖ ಪಾತ್ರವಹಿ ಸಿದ ಕಾಂಗ್ರೆಸ್ ಸದಸ್ಯತ್ವ ಪಡೆಯುವುದು ಹೆಮ್ಮೆಯ ಸಂಗತಿ. ರಾಷ್ಟçಪಿತ ಮಹಾತ್ಮಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ದೇಶಕ್ಕೆ ಬ್ರಿಟಿಷರಿಂದ ಸ್ವಾತಂತ್ರö್ಯ ದೊರಕಿಸಿಕೊಟ್ಟ ಹೆಮ್ಮೆಯ ಪಕ್ಷ. ದೇಶಕ್ಕೆ ನೀಡಿದ ಕೊಡುಗೆ ಅಪಾರ. ೧೩೬ ವರ್ಷಗಳ ಸುದೀರ್ಘ ಇತಿಹಾಸವುಳ್ಳ ಪಕ್ಷದ ಸದಸ್ಯರಾಗುವುದು ಗೌರವದ ಸಂಕೇತ. ಈ ಹಿನ್ನೆಲೆಯಲ್ಲಿ ಎಐಸಿಸಿ ಸೂಚನೆ ಮೇರೆಗೆ ದೇಶದಾದ್ಯಂತ ಸದಸ್ಯತ್ವ ನೋಂದಣ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಶನಿವಾರ (ಡಿ.೧೧)ರಂದು ಏಕಕಾಲದಲ್ಲಿ ಎಲ್ಲಾ ಕಡೆ ಈ ಅಭಿಯಾನ ನಡೆಯುತ್ತಿದ್ದು, ಕಾಂಗ್ರೆಸ್‌ನ ಎಲ್ಲಾ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರೂ, ಮಾಜಿ ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ತಮ್ಮ ಮತದಾನದ ಹಕ್ಕು ಇರುವ ಬೂತ್‌ನಿಂದಲೇ ಹಾಗೂ ಅವರವರ ಕ್ಷೇತ್ರದಿಂದಲೇ ಇಂದು ರಾಜ್ಯದಾ ದ್ಯಂತ ಸದಸ್ಯತ್ವ ನೋಂದಣ ಮಾಡಬೇಕಿದೆ ಎಂದ ಅವರು, ಮೈಸೂರು ಜಿಲ್ಲೆಯ ಸ್ವಗ್ರಾಮ ಸಿದ್ದರಾಮನಹುಂಡಿಯ ಬೂತ್ ನಂ.೮೬ರ ವ್ಯಾಪ್ತಿಯಲ್ಲಿ ನಾನು ಹಾಗೂ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಸದಸ್ಯತ್ವ ಪಡೆದಿದ್ದೇವೆ ಎಂದರು.

ನೊAದವರ ಧ್ವನಿಯಾಗಲು ಸ್ಥಾಪನೆ: ಕಾಂಗ್ರೆಸ್ ಪಕ್ಷವನ್ನು ನೊಂದವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಯಿತು. ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಸ್ಥಾಪನೆಯಾಗÀಲಿಲ್ಲ. ೧೮೮೫ರಲ್ಲಿ ಬ್ರಿಟಿಷ್ ಸರ್ಕಾರವಿದ್ದಾಗಲೇ ಕಾಂಗ್ರೆಸ್ ಉದಯ ವಾಯಿತು. ಬ್ರಿಟಿಷ್ ಪ್ರಜೆ ಡಾ. ಎ.ಓ.ಹ್ಯೂಮ್ ಎಂಬುವರು ಹಲವು ಭಾರತೀಯ ರೊಡಗೂಡಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಆ ಸಂದರ್ಭದಲ್ಲಿ ಬ್ರಿಟಿಷ್ ಸರ್ಕಾರದಿಂದ ಭಾರತೀಯ ನಾಗರಿಕರಿಗೆ ನ್ಯಾಯ ಕೊಡಿಸಲು, ವಿವಿಧ ಸಮಸ್ಯೆಗೆ ಪರಿಹಾರ ಕೊಡಿಸಲು, ಸರ್ಕಾರರಿಂದ ಸವಲತ್ತು ಕೊಡಿಸಲು ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದರು. ಮಹಾರಾಷ್ಟçದಲ್ಲಿ ಉದಯಗೊಂಡ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಡಾ.ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು ಎಂದು ಪಕ್ಷದ ಇತಿಹಾಸವನ್ನು ವಿವರಿಸಿದರು.

ಮಹಾನ್ ಚೇತನರ ಮುಂದಾಳತ್ವ: ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಲವು ಮಹಾನ್ ನಾಯಕರು ಸೇವೆ ಸಲ್ಲಿಸಿದ್ದಾರೆ. ಗೋಪಾಲಕೃಷ್ಣ ಗೋಖಲೆ, ಬಾಲ ಗಂಗಾಧರ ತಿಲಕ್, ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ನೆಹರು, ಸೋನಿಯಾ ಗಾಂಧಿವರೆಗೆ ಬಹಳಷ್ಟು ಜನರು ಪಕ್ಷದ ಅಧ್ಯಕ್ಷರಾಗಿದ್ದಾರೆ. ಕಾನೂನು ಶಿಕ್ಷಣ ಪಡೆಯಲು ದಕ್ಷಿಣ ಆಫ್ರಿಕಾಗೆ ಹೋಗಿದ್ದ ಮಹಾತ್ಮಗಾಂಧಿಜಿ ಅವರು, ಅಲ್ಲಿಯೇ ಅಸಮಾನತೆ, ವರ್ಣಭೇದದ ವಿರುದ್ಧ ಹೋರಾಡುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು. ಇಂತಹ ಸಂದರ್ಭದಲ್ಲಿ ಗೋಪಾಲಕೃಷ್ಣ ಗೋಖಲೆ ಅವರ ಆಹ್ವಾನದ ಮೇರೆಗೆ ದಕ್ಷಿಣ ಆಫ್ರಿಕಾದಿಂದ ೧೯೧೫ರಲ್ಲಿ ಭಾರತಕ್ಕೆ ಬಂದ ಮಹಾತ್ಮ ಗಾಂಧಿ ಬ್ರಿಟಿಷರ ದೌರ್ಜನ್ಯ, ದಬ್ಬಾಳಿಕೆ ನೋಡಿ, ಬ್ರಿಟಿಷರಿಂದ ದೇಶವನ್ನು ರಕ್ಷಿಸಬೇಕೆಂದು ನಿರ್ಧರಿಸಿ ಅನೇಕ ಹೋರಾಟದಲ್ಲಿ ಭಾಗಿಯಾದರು. ೧೯೪೭ರವರೆಗೂ ಅನೇಕ ಚಳವಳಿಗಳನ್ನು ನಡೆಸಿದರು. ಸ್ವಾತಂತ್ರ÷್ಯ ನಂತರ ದೇಶ ವಿಭಜನೆಯಾಗಿ ನೆಹರು ಅವರು ದೇಶದ ಪ್ರಥಮ ಪ್ರಧಾನಿಯಾದರು ಎಂದು ತಿಳಿಸಿದರು.

ಧರ್ಮ ಸಹಿಷ್ಣತೆ ಒಪ್ಪುತ್ತಾರಾ: ಸಂವಿಧಾನ, ಜಾತ್ಯತೀತ ತತ್ವದ ಮೇಲೆ ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡಿರುವ ಪಕ್ಷ. ಅಧಿಕಾರ ವಿಕೇಂದ್ರೀಕರಣ, ಸರ್ವ ಜನಾಂಗ ರಕ್ಷಣೆ, ಧರ್ಮ ಸಹಿಷ್ಣತೆ ನಮ್ಮ ದ್ಯೇಯೋದ್ದೇಶವಾಗಿದೆ. ದೇಶಭಕ್ತಿ ಎನ್ನುವ ಬಿಜೆಪಿ ಧರ್ಮಸಹಿಷ್ಣತೆ ಸಹಿಸುತ್ತಾ? ಆ ಪಕ್ಷದಲ್ಲಿ ಒಬ್ಬ ಮುಸ್ಲಿಂ ಸಮುದಾಯದ ಶಾಸಕ ಇದ್ದಾನಾ? ಕ್ರೆöÊಸ್ತರನ್ನು ಸಹಿಸುತ್ತಾರೆಯೇ? ಶೇ.೧೩ರಷ್ಟಿರುವ ಅಲ್ಪಸಂಖ್ಯಾತರಿಗೂ ಸಮಾನ ಅವಕಾಶ ನೀಡಬೇಕಲ್ವಾ? ಎಂದು ಪ್ರಶ್ನಿಸಿದರು.

ನಾನು ಹಿಂದು ವಿರೋಧಿಯಲ್ಲ: ಎಲ್ಲರಿಗೂ ಸಮಾನ ಅವಕಾಶ ಕೊಡಬೇಕು ಎಂದು ಪ್ರತಿಪಾದಿಸಿದಕ್ಕೆ ಸಿದ್ದರಾಮಯ್ಯ ಹಿಂದು ವಿರೋಧಿ ಎಂದು ಅಪಪ್ರಚಾರ ಮಾಡಿದರು. ಹಾಗಾದ್ರೆ ನಾನು ಹಿಂದು ಅಲ್ಲವೇ? ಸಿದ್ದರಾಮಯ್ಯ ದೇವರ ವಿರೋಧಿ ಎಂದರು. ನಾನು ಸಿದ್ರಾಮೇಶ್ವರ ದೇವಾಲಯಕ್ಕೆ ಹೋಗುವುದಿಲ್ಲವೇ? ಎಂದು ಪ್ರಶ್ನಿಸಿದರಲ್ಲದೆ, ಬಿಜೆಪಿ ನಾಯಕರು ಸುಮ್ಮನೆ ನನ್ನ ವಿರುದ್ಧ ಅಪಪ್ರಚಾರ ಮಾಡುವಲ್ಲಿ ಮಗ್ನರಾಗಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್ ಮನುಷ್ಯರನ್ನು ಪ್ರೀತಿಸುವ ಪಕ್ಷ, ಎಲ್ಲಾ ಧರ್ಮ, ಜಾತಿಯನ್ನು ಪ್ರೀತಿಸುತ್ತದೆ. ನಮ್ಮ ಧರ್ಮವನ್ನಲ್ಲದೆ ಇತರೆ ಧರ್ಮವನ್ನು ಗೌರವಿಸಬೇಕು. ಅದನ್ನೇ ಸಹಿಷ್ಣುತೆ ಅನ್ನುವುದು. ಡಾ.ಅಂಬೇಡ್ಕರ್ ಕೂಡ ಪರಧರ್ಮ ಸಹಿಷ್ಣುತೆ ಬಗ್ಗೆ ಸಂದೇಶ ಸಾರಿದ್ದರು. ದೇಶದಲ್ಲಿ ಎಲ್ಲಾ ಧರ್ಮ, ಜಾತಿಯವರೂ ಇದ್ದಾರೆ. ಹಿಂದೂಗಳು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗ, ಮಹಿಳೆ ಯರೂ ಬೆಳೆಯಬೇಕು. ಅದಕ್ಕಾಗಿ ಕಾಂಗ್ರೆಸ್ ಬೆಳೆಯಬೇಕು. ನೀವೆಲ್ಲಾ ಸದಸ್ಯರಾಗ ಬೇಕು. ಕಾಂಗ್ರೆಸ್ ತನ್ನದೇ ಆದ ಸಿದ್ಧಾಂತದ ಮೇಲೆ ಇರುವ ಪಕ್ಷ. ಸಿದ್ದರಾಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ ಕಂಡರೆ ಆಗಲ್ಲ ಎಂದು ಬೇರೆ ಪಕ್ಷಕ್ಕೆ ಹೋಗಬಾರದು. ಸಿದ್ಧಾಂತ ಇರಬೇಕು. ಅನುಕೂಲ ಸಿಂಧು ರಾಜಕಾರಣ ಮಾಡಬಾರದು ಎಂದರು.

೫ ರೂ.ಕೊಟ್ಟು ಸದಸ್ಯರಾಗಿ: ರಾಜ್ಯ, ದೇಶದಲ್ಲಿ ಸದಸ್ಯತ್ವ ನೋಂದಣ ಮುಗಿದ ಮೇಲೆ ಚುನಾವಣೆ ನಡೆಯುತ್ತ್ತಿದೆ. ಎಲ್ಲಾ ಅಭಿಯಾನ ಮುಗಿದ ನಂತರ ೨೦೨೨ರ ಸೆಪ್ಟೆಂಬರ್‌ನೊಳಗೆ ಪಕ್ಷದ ಎಲ್ಲಾ ಪದಾಧಿಕಾರಿಗಳ ನೇಮಕವಾಗಲಿದೆ. ಈ ಹಿನ್ನೆಲೆಯಲ್ಲಿ ೫ ರೂ. ಕೊಟ್ಟು ಸದಸ್ಯರಾಗಬೇಕು. ಒಂದು ಕಾಫಿಗೆ ನೀಡುವುದಕ್ಕಿಂತ ಕಡಿಮೆ ಹಣ ನೀಡಿ ಪಕ್ಷದ ಸದಸ್ಯತ್ವ ಪಡೆಯಬೇಕು. ಕಾಂಗ್ರೆಸ್‌ಗೆ ಸದಸ್ಯರಾದರೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ, ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ತಿಮ್ಮಯ್ಯ, ಜಿ.ಪಂ. ಮಾಜಿ ಅಧ್ಯಕ್ಷರಾದ ಎಸ್.ಸಿ. ಬಸವರಾಜು, ಬಿ.ಎಂ. ರಾಮು, ಮುಖಂಡರಾದ ಕೆಂಪೀರಯ್ಯ, ಸುಧಾಮಹದೇವಯ್ಯ, ಮಂಜುಳಾ ಮಂಜುನಾಥ್, ಆನಂದ್, ಮಹೇಂದ್ರ, ಹೆಬ್ಬಾಳು ವೆಂಕಟರಾಮು, ಎ.ಪಿ.ಎಂ.ಸಿ ಸದಸ್ಯ ಬಸವರಾಜು, ವಜ್ರೇಗೌಡ, ಭಾಗ್ಯ ಬೋರೇಗೌಡ, ಎಸ್. ಮಹದೇವ್ ಮತ್ತಿತರರು ಭಾಗವಹಿಸಿದ್ದರು.

Translate »