ಮೈಸೂರು ಐಶ್ವರ್ಯ ನಗರ ಮಳೆ ಬಂದಾಗ ಅಲ್ಲಿನ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರ!
ಮೈಸೂರು

ಮೈಸೂರು ಐಶ್ವರ್ಯ ನಗರ ಮಳೆ ಬಂದಾಗ ಅಲ್ಲಿನ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರ!

May 19, 2022

 ಪ್ರತಿ ಮಳೆಯಲ್ಲಿ ಮುಳುಗಡೆಯ ಭಾಗ್ಯ!

 ಯಾರಿಗೆ ಹೇಳಿದರೂ ಮಾಡ್ತೇವೆ… ಮಾಡ್ತೇವೆ..!?

ಮೈಸೂರು, ಮೇ ೧೮(ಎಂಕೆ)- ಮೈಸೂರಲ್ಲೊಂದು ದೌರ್ಭಾಗ್ಯ ನಗರ… ಇಲ್ಲಿಗೆ ಜನಪ್ರತಿನಿಧಿಗಳ ವಿಸಿಟಿಂಗ್ ಅಷ್ಟೇ… ನೋ ಪ್ಲಾನ್, ನೋ ಆಕ್ಷನ್…!
ಹೌದು! ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಗೆ ಹೊಂದಿಕೊAಡಿ ರುವ (ಆರ್‌ಎಂಪಿ ಕ್ವಾಟರ್ಸ್ ಹಿಂಭಾಗ) ವಾರ್ಡ್ ನಂ.೫೯ರ ವ್ಯಾಪ್ತಿಯ ಐಶ್ವರ್ಯ ನಗರ ಅಕ್ಷರಶಃ ಇಲ್ಲಿಯ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರವಾಗಿದೆ. ೮ ಎಕರೆ ವಿಸ್ತೀರ್ಣ, ೯೩ ನಿವೇಶನಗಳನ್ನೊಳ ಗೊಂಡ ಐಶ್ವರ್ಯ ನಗರಕ್ಕೆ ಶುಭ ಸೂಚಕ ಎನ್ನುವ ಮಳೆ ಅಶುಭವಾಗಿದೆ.

ಖಾಸಗಿ ಡೆವಲಪರ್ ಸಂಸ್ಥೆಯಿAದ ೨೦೦೯-೧೦ರಲ್ಲಿ ನಿರ್ಮಾಣವಾದ ಐಶ್ವರ್ಯ ನಗರ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಿದೆ. ಆದರೆ ಪ್ರತಿವರ್ಷದ ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿರುವ ಬಡಾವಣೆಯನ್ನು ಕಂಡರೂ ಕಾಣದಂತೆ ಇರುವ ನಗರಪಾಲಿಕೆಯ ಕಾರ್ಯವೈಖರಿ ಕಂಡು, ಕೋಟ್ಯಾಂತರ ರೂ. ಸಾಲ ಮಾಡಿ ಇಲ್ಲಿ ಮನೆ ಕಟ್ಟಿ ಎಡವಟ್ಟು ಮಾಡಿಕೊಂಡಿ ದ್ದೇವೆ ಎಂದು ನಿವಾಸಿಗಳು ಪರಿತಪಿಸುತ್ತಿದ್ದಾರೆ.

ಮಳೆ ನೀರಿನ ಚರಂಡಿಗಳಿಲ್ಲ:ಬಡಾವಣೆ ಯಲ್ಲಿ ಮಳೆ ನೀರು ಹರಿಯಲು ಇದ್ದ ಚರಂಡಿ ಗಳೆಲ್ಲವೂ ಸಂಪೂರ್ಣವಾಗಿ ಮುಚ್ಚಿ ಹೋಗಿವೆ. ಅಲ್ಲದೆ ಇಸ್ಕಾನ್ ಟೆಂಪಲ್ ನಿಂದ ಅರವಿಂದನಗರದ ಕಡೆಗೆ ಸಾಗುವ ದೊಡ್ಡ ಮೋರಿಯನ್ನು ಐಶ್ವರ್ಯ ನಗರದ ಬಳಿ ಅಭಿವೃದ್ಧಿ ಮಾಡದಿರುವುದು ಭಾರೀ ತೊಂದರೆಗೆ ಕಾರಣವಾಗಿದೆ. ದೊಡ್ಡ ಮೋರಿಯ ಮಳೆ ನೀರಲ್ಲಿ ಬರುವ ಕಸ ತ್ಯಾಜ್ಯ ಬಡಾವಣೆಯನ್ನು ಆವರಿಸುತ್ತಿದ್ದು, ನಿವಾಸಿಗಳಿಗೆ ನರಕ ದರ್ಶನ ಮಾಡಿಸು ತ್ತಿದೆ. ತಗ್ಗು ಪ್ರದೇಶದಲ್ಲಿರುವ ಐಶ್ವರ್ಯ ನಗರಕ್ಕೆ ಕುವೆಂಪುನಗರ, ರಾಮಕೃಷ್ಣ ನಗರ ಸೇರಿದಂತೆ ಸುತ್ತ-ಮುತ್ತಲಿನ ಬಡಾವಣೆಗಳಿಂದ ಮಳೆ ನೀರು ಹರಿದು ಬರಲಿದ್ದು, ದೊಡ್ಡ ಮೋರಿ ಇಲ್ಲದಿರು ವುದು ಇಡೀ ಐಶ್ವರ್ಯ ನಗರವೇ ಜಲಾವೃತಗೊಳ್ಳಲು ಕಾರಣವಾಗಿದೆ.

ವಿಸಿಟಿಂಗ್ ಅಷ್ಟೇ: ಸ್ಥಳೀಯ ಜನಪ್ರತಿನಿಧಿ ಗಳು, ಪಾಲಿಕೆ ಅಧಿಕಾರಿಗಳಿಗೆ ೨೦೧೨ರಿಂದಲೂ ನಿರಂತರ ಮನವಿಗಳನ್ನು ಮಾಡುತ್ತಲೇ ಇದ್ದೇವೆ. ಅದರಂತೆ ತಮ್ಮ ಅಧಿಕಾರ ಅವಧಿಯಲ್ಲಿ ಒಬ್ಬರೇ ಬಂದು ನೋಡುತ್ತಿದ್ದಾ ರೆಯೇ ಹೊರತು ಸಮಸ್ಯೆ ಬಗೆಹರಿಸುವ ಸಣ್ಣ ಕೆಲಸವೂ ಆಗಿಲ್ಲ. ಮಾಜಿ ಶಾಸಕರಾದ ಎಂ.ಕೆ.ಸೋಮಶೇಖರ್(ಶಾಸಕರಾಗಿದ್ದ ವೇಳೆ), ಹಾಲಿ ಶಾಸಕರಾದ ಎಸ್.ಎ. ರಾಮದಾಸ್, ಮುಡಾ ಅಧ್ಯಕ್ಷರು, ಆಯುಕ್ತರು ಸೇರಿದಂತೆ ಸಂಬAಧಪಟ್ಟ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಐಶ್ವರ್ಯನಗರಕ್ಕೆ ಬಂದು ನೋಡಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಾ ಗಿಯೂ ಹೇಳಿದ್ದಾರೆ. ಆದರೆ ಅವರೆಲ್ಲರ ಮಾತುಗಳು ಮಾತುಗಳಾಗಿಯೇ ಉಳಿದಿದೆಯೇ ಹೊರತು ಯಾವ ಕೆಲಸವೂ ಆಗಿಲ್ಲ ಎಂದು ಐಶ್ವರ್ಯನಗರ ನಿವಾಸಿಗಳು ‘ಮೈಸೂರು ಮಿತ್ರ’ನಲ್ಲಿ ದೂರಿದರು.ಇಲ್ಲಿನ ಒಂದೊAದು ಮನೆಯಿಂದಲೂ ಸರ್ಕಾರಕ್ಕೆ ೫-೧೦ ಲಕ್ಷ ರೂ.ವರೆಗೆ ವಿವಿಧ ಬಗೆಯ ತೆರಿಗೆ ಕಟ್ಟಿದ್ದೇವೆ. ಹಣ ಕಟ್ಟಿಸಿ ಕೊಳ್ಳುವವರಿಗೆ ಸಮಸ್ಯೆ ಬಗೆಹರಿಸಿ ಕೊಡಬೇಕು ಎನ್ನುವ ಪರಿಜ್ಞಾನವಿಲ್ಲ. ಜನಪ್ರತಿನಿಧಿಗಳಂತೂ ನಮ್ಮ ಮುಂದೆ ಬಂದು ನಿಂತು ಮಾತನಾಡುವುದಿಲ್ಲ. ಏಕೆಂದರೆ ಅವರಿಗೂ ಇಲ್ಲಿನ ಸಮಸ್ಯೆ ಬಗ್ಗೆ ಗೊತ್ತಿದೆ. ಜನಪರ ಕಾಳಜಿ ಅವರಲ್ಲಿ ಇದ್ದಿದ್ದರೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತಿದ್ದರು ಎಂದು ಕಿಡಿಕಾರಿದರು.

Translate »