ರಷ್ಯಾ-ಉಕ್ರೇನ್ ಯುದ್ಧ: ಮರಿಯಾಪೋಲ್, ವೋಲ್ವಾವಾಖಾನಲ್ಲಿ ೬ ಗಂಟೆ ಕಾಲ ಕದನ ವಿರಾಮ
ಮೈಸೂರು

ರಷ್ಯಾ-ಉಕ್ರೇನ್ ಯುದ್ಧ: ಮರಿಯಾಪೋಲ್, ವೋಲ್ವಾವಾಖಾನಲ್ಲಿ ೬ ಗಂಟೆ ಕಾಲ ಕದನ ವಿರಾಮ

March 6, 2022

ನಾಗರಿಕರು ನಗರ ತೊರೆಯಲು ಉಭಯ ದೇಶಗಳಿಂದ ಮಾನವೀಯ ಕಾರಿಡಾರ್ ನಿರ್ಮಾಣ

ಕದನ ವಿರಾಮದ ನಂತರ ಯುದ್ಧ ಆರಂಭಿಸಿದ ರಷ್ಯಾ

ರಷ್ಯಾದ ಮತ್ತೊಂದು ಯುದ್ಧ ವಿಮಾನ ಉಡೀಸ್ ಮಾಡಿದ ಉಕ್ರೇನ್ ಸೈನಿಕರು, ಪೈಲಟ್ ಸೆರೆ

ಕೀವ್, ಮಾ.೫-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹತ್ತನೇ ದಿನವಾದ ಶನಿವಾರ ಉಭಯ ದೇಶ ಗಳು ಎರಡು ನಗರಗಳಲ್ಲಿ ೬ ಗಂಟೆಗಳ ಕಾಲ ಕದನ ವಿರಾಮ ಘೋಷಿಸಿ, ಅನ್ಯ ದೇಶದ ಪ್ರಜೆಗಳು ಸ್ಥಳಾಂತರ ಗೊಳ್ಳಲು ಮಾನವೀಯ ಕಾರಿಡಾರ್ ನಿರ್ಮಿಸಿದ್ದರು.

ರಷ್ಯಾ ಮತ್ತು ಉಕ್ರೇನ್ ನಡುವೆ ಮಾ.೩ರಂದು ನಡೆದ ಮಾತುಕತೆಯಂತೆ ಭಾರತೀಯ ಕಾಲಮಾನ ಬೆಳಗ್ಗೆ ೧೧.೩೦ ರಿಂದ ೬ ಗಂಟೆಗಳ ಕಾಲ ಮರಿಯಾ ಪೋಲ್ ಮತ್ತು ವೋಲ್ವಾವಾಖಾ ನಗರಗಳಲ್ಲಿ ಕದನ ವಿರಾಮ ಘೋಷಿಸಿ ನಾಗರಿಕರ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಿಗದಿತ ೬ ಗಂಟೆ ಸಮಯ ದೊಳಗೆ ನಾಗರಿಕರು ಈ ನಗರಗಳಿಂದ ನಿರ್ಗಮಿಸ ಬೇಕೆಂದು ಘೋಷಿಸಿದ ಹಿನ್ನೆಲೆಯಲ್ಲಿ ಭಾರತ ಸೇರಿ ದಂತೆ ವಿದೇಶಿ ವಿದ್ಯಾರ್ಥಿಗಳ ಜೊತೆ ಸ್ಥಳೀಯರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಉಕ್ರೇನ್ ಗಡಿ ಭಾಗದ ದೇಶಗಳಿಗೆ ತೆರಳಿದರು. ನಾಗರಿಕರು ಈ ನಗರಗಳನ್ನು ತೊರೆಯಲು ಅನುಕೂಲವಾಗುವಂತೆ ವಾಹನ ಸಂಚಾರಕ್ಕೂ ಅವಕಾಶ ನೀಡಲಾಗಿತ್ತು. ಅಲ್ಲದೇ ಈ ನಗರಗಳಿಗೆ ಔಷಧ ಮತ್ತು ಆಹಾರ ಪೂರೈಕೆಗೂ ಅನುಮತಿಸಲಾಗಿತ್ತು. ಪ್ರತೀ ದಿನ ಉಕ್ರೇನ್‌ನ ಒಂದೊAದು ಪ್ರದೇಶದಲ್ಲಿ ನಾಗರಿಕರು ನಗರ ತೊರೆಯಲು ಅನು ವಾಗುವಂತೆ ಕದನ ವಿರಾಮ ಘೋಷಿಸಲಾಗುವುದು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಕೀವ್, ಖಾರ್ಕೀವ್ ಹಾಗೂ ಸುಮಿ ನಗರಗಳಲ್ಲಿ ಯುದ್ಧ ಮುಂದು ವರೆದಿತ್ತು. ಕದನ ವಿರಾಮದ ಸಮಯ ಅಂತ್ಯವಾಗುತ್ತಿ ದ್ದಂತೆಯೇ ರಷ್ಯಾ ಪಡೆಗಳು ಮತ್ತೆ ಈ ನಗರಗಳಲ್ಲಿ ಯುದ್ಧ ಪ್ರಾರಂಭಿಸಿದವು. ಉಕ್ರೇನ್‌ನ ಮನೋ ವೈದ್ಯಕೀಯ ಆಸ್ಪತ್ರೆಯನ್ನು ರಷ್ಯಾ ವಶಪಡಿಸಿಕೊಂಡಿದೆ. ಮೆಲಿಟಪೋಲ್ ಮತ್ತು ಕೀವ್ ನಗರಗಳಿಗೆ ರಷ್ಯಾ ಟ್ಯಾಂಕರ್ ಗಳು ಪ್ರವೇಶಿಸಿದ್ದು, ರಸ್ತೆಗಳಲ್ಲಿ ರಷ್ಯಾ ಟ್ಯಾಂಕರ್‌ಗಳು ಸಾಲು ಸಾಲಾಗಿ ತೆರಳುತ್ತಿದ್ದ ದೃಶ್ಯ ಕಂಡುಬAತು. ರಷ್ಯಾ ಸೈನಿಕರಿಗೆ ಉಕ್ರೇನ್ ಸೈನಿಕರು ಮತ್ತು ಸಾರ್ವಜನಿಕರು ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಕದನ ವಿರಾಮದ ನಂತರ ರಷ್ಯಾ ಉಕ್ರೇನ್‌ನಲ್ಲಿ ೨೪ ಕ್ಷಿಪಣ ಗಳನ್ನು ಹಾರಿಸಿ ಹಲವಾರು ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಈ ನಡುವೆ ಉಕ್ರೇನ್ ಸೈನಿಕರು ರಷ್ಯಾದ ಯುದ್ಧ ವಿಮಾನವೊಂದನ್ನು ಸ್ಫೋಟಿಸಿ, ವಿಮಾನದಿಂದ ಕೆಳಗೆ ಬಿದ್ದ ಪೈಲಟ್‌ನನ್ನು ಸೆರೆ ಹಿಡಿದಿದ್ದಾರೆ. ಉಕ್ರೇನ್‌ನಿಂದ ಈವರೆಗೂ ೧೦ ಲಕ್ಷಕ್ಕೂ ನಾಗರಿಕರು ವಲಸೆ ಹೋಗಿದ್ದಾರೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ರಷ್ಯಾ ಪಡೆಗಳು ಬಂದರು ನಗರವಾದ ಮರಿಯಾಪೋಲ್ ಅನ್ನು ದಿಗ್ಬಂಧನಗೊಳಿಸಿವೆ ಎಂದು ಅಲ್ಲಿನ ಮೇಯರ್ ವಾಡಿಮ್ ಬಾಯ್ಚೆಂಕೊ ತಿಳಿಸಿದ್ದಾರೆ. ಉಕ್ರೇನ್‌ನ ಬೇರ್ಪಟ್ಟ ಪ್ರದೇಶಗಳಾದ ಡೊನೆಟ್ಸ್÷್ಕ ಮತ್ತು ಲುಹಾನ್ಸ್÷್ಕ ನಗರಗಳನ್ನು ಸ್ವತಂತ್ರ ಘಟಕಗಳಾಗಿ ರಷ್ಯಾ ಗುರುತಿಸಿದೆ. ಮತ್ತೆ ಈ ವಾರ ಅಂತ್ಯದಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಕೀವ್‌ನ ಸಮಾಲೋಚಕರೊಬ್ಬರು ತಿಳಿಸಿದ್ದಾರೆ.
ನಾನಿಲ್ಲೇ ಇದ್ದೇನೆ: ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂಬ ರಷ್ಯಾ ಹೇಳಿಕೆಯನ್ನು ಮತ್ತೊಮ್ಮೆ ತಿರಸ್ಕರಿಸಿರುವ ಝೆಲೆನ್ಸಿ÷್ಕ, ತಾನು ಕೀವ್‌ನಲ್ಲಿಯೇ ಇದ್ದೇನೆ ಎಂದು ಇನ್‌ಸ್ಟಾçಗ್ರಾಂನಲ್ಲಿ ವೀಡಿಯೋ ಮೂಲಕ ತಿಳಿಸಿದ್ದಾರೆ.

Translate »