ಮತ್ತಿಬ್ಬರ ಮೃತದೇಹ ಹೊರ ತೆಗೆದ ರಕ್ಷಣಾ ತಂಡ
ಮೈಸೂರು

ಮತ್ತಿಬ್ಬರ ಮೃತದೇಹ ಹೊರ ತೆಗೆದ ರಕ್ಷಣಾ ತಂಡ

March 7, 2022

ಗುಂಡ್ಲುಪೇಟೆ, ಮಾ.6(ಸೋಮ್ ಜಿ)-ಗುಂಡ್ಲುಪೇಟೆ ಬಳಿ ಮರಹಳ್ಳಿ ಸಮೀಪ ಗಣಿಗಾರಿಕೆ ನಡೆಯು ತ್ತಿದ್ದ ಪ್ರದೇಶದಲ್ಲಿ ಶುಕ್ರವಾರ ಗುಡ್ಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ತಂಡ 14 ಗಂಟೆಗಳ ಸತತ ಕಾರ್ಯಾ ಚರಣೆ ನಡೆಸಿ ಹೊರ ತೆಗೆದಿದೆ.
ಅವಶೇಷಗಳಡಿ ಸಿಲುಕಿದ್ದ ಅಜೀಮುಲ್ಲಾ ಎಂಬ ಕಾರ್ಮಿಕನನ್ನು ಶನಿವಾರ ರಕ್ಷಣಾ ತಂಡ ಹೊರ ತೆಗೆದಿತ್ತು. ಕತ್ತಲಾವರಿಸಿದ್ದ ರಿಂದ ಕಾರ್ಯಾಚರಣೆಯನ್ನು ಮುಂದೂಡ ಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಎನ್‍ಡಿ ಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್‍ನ ತಲಾ 50 ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ 100 ಸಿಬ್ಬಂದಿ ಕಾರ್ಯಾಚರಣೆ ಆರಂ ಭಿಸಿದರು. ಹಿಟಾಚಿ ಮೇಲೆ ಭಾರೀ ಗಾತ್ರದ ಬಂಡೆ ಬಿದ್ದಿದ್ದರಿಂದ ಅದನ್ನು ತೆರವುಗೊಳಿಸಿ ಹಿಟಾಚಿಯಲ್ಲಿ ಸಿಲುಕಿದ್ದ ಮೃತದೇಹವನ್ನು ಹೊರ ತೆಗೆಯುವುದು ಅಸಾಧ್ಯವೆನಿಸಿದಾಗ ರಕ್ಷಣಾ ತಂಡವು ಸಂಬಂಧಪಟ್ಟ ಅಧಿಕಾರಿ ಗಳಿಂದ ಅನುಮತಿ ಪಡೆದು ಸಣ್ಣ ಪ್ರಮಾ ಣದ ಸ್ಫೋಟ ನಡೆಸಿ ಬಂಡೆಯನ್ನು ತೆರವು ಗೊಳಿಸಿ, ಸಂಜೆ 4.30ರ ಸುಮಾರಿಗೆ ಉತ್ತರಪ್ರದೇಶ ಮೂಲದ ಮೀರಜ್(27) ಎಂಬಾತನ ಮೃತದೇಹವನ್ನು ಹೊರ ತೆಗೆಯಿತು. ನಂತರ ಕಾರ್ಯಾ ಚರಣೆ ಮುಂದುವರಿಯಿತಾದರೂ ಭಾರೀ ಗಾತ್ರದ ಬಂಡೆಗಳು ಅಡ್ಡಿ ಉಂಟು ಮಾಡಿತು. ಸಂಜೆ 6 ಗಂಟೆ ಸುಮಾರಿನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ಸೋಮವಾರಕ್ಕೆ ಮುಂದೂಡುವ ಬಗ್ಗೆ ಚರ್ಚೆ ನಡೆ ಯಿತಾದರೂ, ಇನ್ನೂ ಸ್ವಲ್ಪ ಹೊತ್ತು ಪ್ರಯತ್ನಿ ಸೋಣ ಎಂದು ಅಧಿಕಾರಿಗಳು ನಿರ್ಧರಿಸಿ ಕಾರ್ಯಾಚರಣೆ ಮುಂದುವರೆಸಿದರು.

ರಾತ್ರಿ 8 ಗಂಟೆ ಸುಮಾರಿನಲ್ಲಿ ಮತ್ತೊಬ್ಬ ಕಾರ್ಮಿಕ ಸರ್ಫರಾಜ್‍ನ ಮೃತದೇಹವನ್ನೂ ರಕ್ಷಣಾ ತಂಡ ಹೊರ ತೆಗೆದು ಕಾರ್ಯಾ ಚರಣೆಯನ್ನು ಯಶಸ್ವಿಯಾಗಿ ಮುಗಿಸಿದೆ. ಶುಕ್ರವಾರ ಗುಡ್ಡ ಕುಸಿದ ವೇಳೆ ಇತರ ಕಾರ್ಮಿ ಕರು ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿ ಕೊಂಡರಾದರೂ, ಮೂವರು ಹಿಟಾಚಿ ಚಾಲಕರು ಸ್ಥಳದಿಂದ ಓಡಲಾಗದೇ ಅವಶೇಷ ಗಳಡಿ ಸಿಲುಕಿದ್ದರು. ಮೂರೂ ಮೃತದೇಹ ಗಳನ್ನು ಹೊರ ತೆಗೆಯುವ ಕಾರ್ಯಾಚರಣೆ ಯನ್ನು ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶನಿ ವಾರವೇ ಆರಂಭಿಸಿದರು.

ಮೊದಲ ದಿನ 11 ಗಂಟೆಗಳ ಕಾರ್ಯಾಚರಣೆಯಲ್ಲಿ 1 ಮೃತದೇಹವನ್ನು ಹೊರ ತೆಗೆದರೆ, ಇಂದು 14 ಗಂಟೆ ಕಾರ್ಯಾಚರಣೆಯಲ್ಲಿ ಮತ್ತೊಂದು ಮೃತದೇಹವನ್ನು ಹೊರ ತೆಗೆದಿದ್ದಾರೆ. ಕಾರ್ಯಾಚರಣೆ ವೇಳೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಎಸ್‍ಪಿ ಶಿವಕುಮಾರ್, ಡಿವೈಎಸ್‍ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಗುಂಡ್ಲುಪೇಟೆ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ತಹಸೀಲ್ದಾರ್ ರವಿಶಂಕರ್, ಮೈಸೂರು ವಲಯ ಅಗ್ನಿಶಾಮಕ ದಳದ ಅಧಿಕಾರಿ ಜಯ ರಾಮಯ್ಯ, ಚಾಮರಾಜ ನಗರ ವಲಯ ಅಗ್ನಿ ಶಾಮಕ ದಳದ ಅಧಿಕಾರಿ ನವೀನ್‍ಕುಮಾರ್ ಉಪ ಸ್ಥಿತರಿದ್ದರು. ಕಾರ್ಯಾ ಚರಣೆಯಲ್ಲಿ ಚಾಮರಾಜ ನಗರ, ನಂಜನಗೂಡು, ಮೈಸೂರು ಮತ್ತು ಬೆಂಗ ಳೂರಿನಿಂದ ಆಗಮಿಸಿದ್ದ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಸಿಬ್ಬಂದಿ ಭಾಗವಹಿಸಿದ್ದರು. ಇವರಿಗೆ ಜಿಲ್ಲಾ ಪೊಲೀಸರು ಸಹಕಾರ ನೀಡಿದರು.

ಈ ಪ್ರಕರಣದ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಗಣಿ ಮಾಲೀಕ ಮಹೇಂದ್ರಪ್ಪ, ಗಣಿಯನ್ನು ಉಪ ಗುತ್ತಿಗೆ ಪಡೆದಿದ್ದ ಹಕೀಂ, ಮ್ಯಾನೇಜರ್ ನವೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಶುಕ್ರವಾರದಂದೇ ನವೀದ್ ಬಂಧಿಸಲ್ಪಟ್ಟರಾದರೂ, ಮಹೇಂದ್ರಪ್ಪ ಮತ್ತು ಹಕೀಂ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಮೃತರ ಕುಟುಂಬಸ್ಥರು ಉತ್ತರಪ್ರದೇಶದಿಂದ ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »