ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪೋಸ್ಟರ್ ಬಿಡುಗಡೆ
ಮೈಸೂರು

ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪೋಸ್ಟರ್ ಬಿಡುಗಡೆ

November 13, 2021

ಮೈಸೂರು,ನ.೧೨(ಆರ್‌ಕೆ)-ನವೆಂಬರ್ ೨೦ರಂದು ಮೈಸೂ ರಿನ ಬೃಂದಾವನ ಬಡಾವಣೆಯಲ್ಲಿರುವ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ ಆಯೋಜಿಸಿರುವ ೬ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆ ಪೋಸ್ಟರ್‌ಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತಕುಮಾರ್ ಶುಕ್ರವಾರ ಕ್ರಾಫರ್ಡ್ ಹಾಲ್‌ನಲ್ಲಿ ಬಿಡುಗಡೆ ಮಾಡಿದರು.
ಆಯುರ್ವೇದ ದಿನಾಚರಣೆ ಅಂಗವಾಗಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನಲ್ಲಿ ಆಹಾರ ಮೇಳವನ್ನು ಆಯೋಜಿಸಿದ್ದು, ಪ್ರಖ್ಯಾತ ಆಹಾರ ವಿಜ್ಞಾನಿಗಳು ಕಾರ್ಯಾಗಾರದಲ್ಲಿ ಭಾಗವಹಿಸುವರು ಎಂದು ಸರ್ಕಾರಿ ಆರ್ಯುವೇದ ಸಂಶೋಧನಾ ಕೇಂದ್ರದ ಸಹಾ ಯಕ ನಿರ್ದೇಶಕ ಡಾ.ಲಕ್ಷಿö್ಮÃನಾರಾಯಣ ಶೆಣೈ ತಿಳಿಸಿದರು.

ಆಯುಷ್ ಇಲಾಖೆ, ಯುವರಾಜ ಕಾಲೇಜು, ಮೈಸೂರು ವಿಜ್ಞಾನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ೬ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆಯಲ್ಲಿ ಪ್ರೌಢಶಾಲೆ ಮತ್ತು ಪದವಿ ವಿದ್ಯಾರ್ಥಿಗಳಿಗಾಗಿ ‘ಸಾಂಪ್ರದಾಯಿಕ ಅಡುಗೆಗಳು’ ವಿಷಯ ಕುರಿತು ಪ್ರಬಂಧ ಸ್ಪರ್ಧೆ, ಬೆಂಕಿ ರಹಿತ ಆಹಾರ ತಯಾ ರಿಕೆ ಸ್ಪರ್ಧೆಯನ್ನು ಏರ್ಪಡಿಸಲಾಘಿದೆ ಎಂದು ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯ ದರ್ಶಿ ಎಂ.ಸುಬ್ರಹ್ಮಣ್ಯ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಯುವರಾಜ ಕಾಲೇಜು ಪ್ರಾಂಶುಪಾಲರಾದ ಡಾ.ಯಶೋಧ, ಪ್ರಾಧ್ಯಾಪಕ ಡಾ.ಶೇಖರ ನಾಯಕ, ಡಾ.ಎಂ.ಎಸ್.ಮಹೇಶ್, ಮೈಸೂರು ಸೈನ್ಸ್ ಫೌಂಡೇ ಷನ್‌ನ ಜಿ.ಬಿ.ಸಂತೋಷ್‌ಕುಮಾರ್, ವಿಶ್ವನಾಥ ಶೇಷಾಚಲ, ಡಾ.ಶಿಲ್ಪಾ ಪೋಸ್ಟರ್ ಬಿಡುಗಡೆ ವೇಳೆ ಉಪಸ್ಥಿತರಿದ್ದರು.

Translate »