ಗಾಲಿಗಳ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ
ಮೈಸೂರು

ಗಾಲಿಗಳ ಮೇಲೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

November 13, 2021

ಸರ್ಜರಿ, ಸ್ವೀಚರಿಂಗ್, ಲೆಪ್ರೋಸ್ಕೋಪಿ ಕುರಿತು ಮಾನಿಕ್ವಿನ್ ಮೂಲಕ ಸರ್ಜಿಕಲ್ ಇನ್‌ಸ್ಟಿಟ್ಯೂಟ್‌ನಿಂದ ಪ್ರಾತ್ಯಕ್ಷಿಕೆ

ಮೈಸೂರು, ನ. ೧೨(ಆರ್‌ಕೆ)- ಶಸ್ತç ಚಿಕಿತ್ಸೆ ಕುರಿತು ವೈದ್ಯಕೀಯ ಸ್ನಾತಕೋ ತ್ತರ ವಿದ್ಯಾರ್ಥಿಗಳಿಗೆ ಗಾಲಿಗಳ ಮೇಲೆ ಕೌಶಲ್ಯ ತರಬೇತಿ ನೀಡಲಾಗುತ್ತಿದೆ.ಜಾನ್ಸನ್ ಅಂಡ್ ಜಾನ್ಸನ್ ಇನ್‌ಸ್ಟಿ ಟ್ಯೂಟ್‌ನಿಂದ ಬಸ್ಸಿನಲ್ಲಿ ಮಾನಿಕ್ವಿನ್ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುತ್ತಿದ್ದು, ಇಂದು ಮೈಸೂರಿನ ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಮುಂದೆ ನಿಂತಿದ್ದ ಬಸ್ಸಿನಲ್ಲಿ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಸ್ತç ಚಿಕಿತ್ಸಾ ಪ್ರಕ್ರಿಯೆ, ಸ್ವೀಚರಿಂಗ್ ಮಾಡು ವುದು, ಲೆಪ್ರೋಸ್ಕೋಪಿ ಆಪರೇ ಷನ್ ಗಾಯ ವಾಸಿಯಾದ ನಂತರ ಹೊಲಿಗೆ ತೆರವುಗೊಳಿಸುವ ವಿಧಾನಗಳ ಬಗ್ಗೆ ತರಬೇತಿ ನೀಡಲಾಯಿತು.

ಈ ಕುರಿತು ಮಾಹಿತಿ ನೀಡಿದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಡೀನ್ ಅಂಡ್ ಡೈರೆಕ್ಟರ್ ಡಾ. ಸಿ.ಪಿ.ನಂಜರಾಜ್, ಪ್ರತೀ ವರ್ಷದಂತೆ ಈ ಬಾರಿಯೂ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆಯು ರಾಜ್ಯಾದ್ಯಂತ ಬಸ್ಸಿನಲ್ಲಿ ತೆರಳಿ ವೈದ್ಯಕೀಯ ಕಾಲೇಜುಗಳ ಸ್ನಾತಕೋ ತ್ತರ ವಿದ್ಯಾರ್ಥಿಗಳಿಗೆ ಸರ್ಜರಿ ಪ್ರಕ್ರಿಯೆಯಲ್ಲಿ ನೂತನ ತಂತ್ರಜ್ಞಾನ ಬಳಸಿ ನಿವ ಹಣೆ ಮಾಡುವ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ಕೌಶಲ್ಯ ತರಬೇತಿ ನೀಡುತ್ತಿದೆ ಎಂದರು.
ಬಸ್ಸಿನಲ್ಲಿ ಆಪರೇಷನ್ ಪ್ರಕ್ರಿಯೆ ನಡೆ ಸಲು ಅಗತ್ಯವಿರುವ ಸಲಕರಣೆಗಳು, ಅನೆಸ್ತೇಷಿಯಾ ಪ್ರೊಟೊಕಾಲ್, ಮುಂಜಾ ಗ್ರತಾ ಕ್ರಮ, ಸರ್ಜರಿ ನಂತರ ರೋಗಿಗೆ ಪ್ರಜ್ಞೆ ಬರುವ ಮುಂಚೆ ಅನುಸರಿಸ ಬೇಕಾದ ವಿಧಾನಗಳ ಕುರಿತಂತೆ ಪ್ರಾತ್ಯಕ್ಷಿಕೆ ನೀಡಿ, ಸಿಸಿ ಕ್ಯಾಮರಾಗಳ ಮೂಲಕ ಸೆರೆ ಯಾದ ದೃಶ್ಯಗಳನ್ನು ಮಾನಿಟರ್‌ನಲ್ಲಿ ಪ್ರದರ್ಶಿಸಲಾಗುತ್ತಿದೆ. ಆದರಿಂದ ವಿದ್ಯಾರ್ಥಿ ಗಳಿಗೆ ಸರ್ಜರಿಯಲ್ಲಿ ಕೌಶಲ್ಯಾಭಿವೃದ್ಧಿ (Skill Development) ಯಾಗಲಿದೆ ಎಂದು ಡಾ.ನಂಜರಾಜ್ ತಿಳಿಸಿದ್ದಾರೆ.

ಮುಂಬೈನಿAದ ಬಂದಿರುವ ಈ ಬಸ್ಸಿನಲ್ಲಿ ಶಸ್ತç ಚಿಕಿತ್ಸಾ ವಿಧಾನಗಳನ್ನು ಪ್ರದರ್ಶಿಸಲು ಸಕಲ ವ್ಯವಸ್ಥೆ ಕಲ್ಪಿಸಲಾ ಗಿದ್ದು, ನುರಿತ ವೈದ್ಯರು, ವೈದ್ಯಕೀಯ ವೃತ್ತಿಪರರು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ಸಂಬAಧ ಪ್ರತಿಕ್ರಿಯಿ ಸಿದ ಇಡೀ ವ್ಯವಸ್ಥೆ ನಿರ್ವಹಣೆ ಜೆ.ರವಿ ಚರಣ್, ಮೆಡಿಕಲ್ ಡಿವೈಸಸ್ ತಯಾ ರಿಸುತ್ತಿರುವ ಜಾನ್ಸನ್ ಅಂಡ್ ಜಾನ್ಸನ್ ಮೆಡಿಕಲ್ ಇಂಡಿಯಾ ಸಂಸ್ಥೆಯು ಈ ಬಸ್ಸನ್ನು ತಯಾರಿಸಿದೆ ಎಂದರು.

ಗಾಲಿಗಳ ಮೇಲಿನ ಈ ಮೊಬೈಲ್ ತರಬೇತಿ ಕೇಂದ್ರದಲ್ಲಿ ವೈದ್ಯರು, ನರ್ಸ್, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉನ್ನತೀ ಕರಣಗೊಂಡಿರುವ ಶಸ್ತçಚಿಕಿತ್ಸಾ ಪರಿ ಕ್ರಮದ ಕುರಿತಂತೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ದೇಶಾ ದ್ಯಂತ ೪೦೦ ಕಾಲೇಜುಗಳನ್ನು ತರಬೇತಿ ಗಾಗಿ ಆಯ್ಕೆ ಮಾಡಲಾಗಿದ್ದು, ಮೈಸೂರು ನಗರದ ಮೈಸೂರು ಮೆಡಿಕಲ್ ಕಾಲೇಜು ಮತ್ತು ಜೆಎಸ್‌ಎಸ್ ಮೆಡಿಕಲ್ ಕಾಲೇಜು ಗಳಲ್ಲಿ ಒಂದೊAದು ದಿನ ಕೌಶಲ್ಯ ತರಬೇತಿ ನೀಡಲಾಯಿತು ಎಂದರು.

ಕೇAದ್ರ ಸರ್ಕಾರದ ‘ಸ್ಕಿಲ್ ಇಂಡಿಯಾ’ ಅಭಿಯಾನದಡಿ ಸಂಸ್ಥೆಯು ದೇಶಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನರಲ್ ಸರ್ಜರಿ, ಲ್ಯಾಪ್ರೋಸ್ಕೋ ಪಿಕ್ ಸರ್ಜರಿ, ಗ್ಯಾಸ್ಟೋ ಇನ್‌ಟೆಸ್ಟಿನಲ್ ಸರ್ಜರಿ, ಕಾರ್ಡಿಯೋ ಥೊರಾಸಿಸ್ ಸರ್ಜರಿ, ಆರ್ಥೋಪೆಡಿಕ್ ಪ್ರೊಸೀಜರ್, ನ್ಯೂರಾಲಜಿ, ಗೈನಕಾಲಜಿ, ಕೊಲೊರೆಕ್ಟಲ್, ಹೆಡ್, ನೆಕ್, ಪೀಡಿಯಾಟ್ರಿಕ್, ಯೂರಾ ಲಜಿ, ಅಲರ್ಜಿ ತಡೆ ಹಾಗೂ ಆಪರೇಷನ್ ಥಿಯೇಟರ್ ನಿರ್ವಹಣೆ ಕುರಿತಂತೆ ವೈದ್ಯ ಕೀಯ ವೃತ್ತಿನಿರತರಿಗೆ ಮಾಹಿತಿ ನೀಡಿ ಅವರಲ್ಲಿ ಕೌಶಲ್ಯ ವೃದ್ಧಿಸಲಾಗುವುದು ಎಂದು ರವಿಚರಣ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಈ ಬಸ್ಸು ಇಂದು ಸಂಜೆ ಮಂಡ್ಯಗೆ ತೆರಳಿದ್ದು, ನಂತರ ಕೊಡಗು, ಮಂಗಳೂರು, ನಂತರ ಬೆಂಗಳೂರಿಗೆ ತೆರಳಲಿದೆ ಎಂದು ಹೇಳಿದರು.

Translate »