`ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಲೇಖಕಿ ರಂಜನಿ ಸೆಲ್ಫಿ
ಮೈಸೂರು

`ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಲೇಖಕಿ ರಂಜನಿ ಸೆಲ್ಫಿ

November 13, 2021

ಬಿಡುಗಡೆಗೊಂಡ ಮೂರೇ ತಿಂಗಳಲ್ಲಿ ನಾಲ್ಕನೇ ಮುದ್ರಣ ಕಂಡಿರುವ ಪುಸ್ತಕ

ಮೈಸೂರು, ನ.೧೨(ಎಸ್‌ಪಿಎನ್)-ಬಹು ರೂಪಿ ಪ್ರಕಾಶನ ಹೊರತಂದಿರುವ `ಕಥೆ ಡಬ್ಬಿ’ ಪುಸ್ತಕ ಖರೀದಿಸಿದವರೊಂದಿಗೆ ಕಿರುತೆರೆ ನಟಿ ಹಾಗೂ ಲೇಖಕಿ ರಂಜನಿ ರಾಘವನ್ ಸೆಲ್ಫಿ ಕ್ಲಿಕ್ಕಿಸಿಕೊಂಡು, ಪುಸ್ತಕ ಗಳಿಗೆ ಆಟೋಗ್ರಾಫ್ ಹಾಕಿದರು.
ಮೈಸೂರಿನ ಚಾಮರಾಜ ಜೋಡಿ ರಸ್ತೆ ರಾಮಸ್ವಾಮಿ ವೃತ್ತದಲ್ಲಿರುವ ನವ ಕರ್ನಾಟಕ ಪಬ್ಲಿಕೇಷನ್‌ನಲ್ಲಿ ಶುಕ್ರವಾರ ನಡೆದ `ಆಟೋ ಗ್ರಾಫ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಥೆ ಡಬ್ಬಿ ಪುಸ್ತಕ ಖರೀದಿಸಿದ ನೂರಕ್ಕೂ ಓದುಗ ರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಆ ಪುಸ್ತಕ ಗಳಿಗೆ ಆಟೋಗ್ರಾಫ್ ಹಾಕುವ ಮೂಲಕ ಪ್ರೋತ್ಸಾಹ ನೀಡಿದರು.

ನಂತರ ಮಾತನಾಡಿದ ರಂಜನಿ ರಾಘ ವನ್ `ಕಥೆ ಡಬ್ಬಿ’ ಹೊರ ತರುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಈ ಕಥೆಗಳನ್ನು ಪ್ರಕಟಿಸುತ್ತಿದ್ದೆ. ಆ ಸಂದರ್ಭದಲ್ಲಿ ಅನೇಕ ಓದು ಗರು ನನ್ನ ಕಥೆಗಳಿಗೆ ಉತ್ತಮ ವಿಮರ್ಶೆ ಮಾಡಿ, ಪುಸ್ತಕ ರೂಪದಲ್ಲಿ ಹೊರ ತರುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಹುರೂಪಿ ಪ್ರಕಾ ಶನದವರು ಈ ಪುಸ್ತಕವನ್ನು ಪ್ರಕಟಿಸಿ, ಸೆ.೨೯ ರಂದು ಬಿಡುಗಡೆಗೊಳಿಸಿದ್ದರು ಎಂದರು.
ಅAದಿನಿAದ ಇಂದಿನವರೆಗೆ ೪ ಮುದ್ರಣ ಗಳನ್ನು ಕಂಡಿದೆ. ಇದೀಗ ಇನ್ನೊಂದು ವಾರ ದಲ್ಲಿ ಐದನೇ ಮುದ್ರಣ ಹೊರಬರಲಿದೆ. ಈ ಪುಸ್ತಕ ಹೊರತಂದ ಮೊದಲ ಪ್ರಯತ್ನದಲ್ಲೇ ಓದುಗರು ನನ್ನ ಬರಹಗಳನ್ನು ಮೆಚ್ಚಿದ್ದಾರ ಲ್ಲದೆ, ನಾನು ನಟಿಸಿರುವ ಕನ್ನಡತಿ, ಮಂಗಳ ಗೌರಿ ಧಾರಾವಾಹಿಗಳನ್ನು ನೋಡಿ ಪ್ರೋತ್ಸಾ ಹಿಸಿದ್ದು. ಅವರ ಅಭಿಮಾನಕ್ಕೆ ನಾನು ಎಂದಿಗೂ ಚಿರಋಣ ಎಂದರು.

ನವ ಕರ್ನಾಟಕ ಪಬ್ಲಿಕೇಷನ್ ಮೈಸೂರು ಶಾಖಾ ವ್ಯವಸ್ಥಾಪಕ ಎನ್.ಕೆ.ಸತ್ಯನಾರಾ ಯಣ ಮಾತನಾಡಿ, ಕಥೆಗಾರ್ತಿ ರಂಜನಿ ರಾಘ ವನ್ `ಕಥೆ ಡಬ್ಬಿ’ ಪುಸ್ತಕ ಕಳೆದೊಂದು ವಾರ ದಲ್ಲಿ ನಮ್ಮ ಶಾಖೆಯಲ್ಲಿ ೧೫೦ಕ್ಕೂ ಹೆಚ್ಚು ಪ್ರತಿ ಗಳು ಮಾರಾಟವಾಗಿವೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹೊಸ ಲೇಖಕಿಯರ ಪುಸ್ತಕ ಗಳು ಇಷ್ಟೊಂದು ಸಂಖ್ಯೆಯಲ್ಲಿ ಮಾರಾಟ ವಾಗಿ, ಜಯಪ್ರಿಯತೆ ಹೊಂದುತ್ತಿರುವುದು ಪುಸ್ತಕೋದ್ಯಮದಲ್ಲಿ ಹೆಮ್ಮೆಯ ವಿಷಯ ಎಂದು ಹೇಳಿದರು.
ಈಗಾಗಲೇ ನಾಲ್ಕು ಮುದ್ರಣಗಳನ್ನು ಕಂಡಿ ರುವ ಈ ಪುಸ್ತಕ. ಮತ್ತೆ ಐದನೇ ಮುದ್ರಣ ಇನ್ನೊಂದು ವಾರದಲ್ಲಿ ಹೊರ ಬರಲಿದೆ. ಕನ್ನಡ ಲೇಖಕಿಯರ ಪುಸ್ತಕಗಳು ಇಷ್ಟು ಜಯಪ್ರಿಯತೆ ಹೊಂದುವುದು ಅಪರೂಪ. ಈ ಪುಸ್ತಕಕ್ಕೆ ಹೆಚ್ಚು ಕಾಲೇಜು ವಿದ್ಯಾರ್ಥಿ ನಿಯರು ಓದುರಾಗಿ ಖರೀದಿಸುತ್ತಿರುವುದು ಗಮನಾರ್ಹ ಎಂದರು.

೧೬೯ ಪುಟಗಳನ್ನು ಒಳಗೊಂಡಿರುವ ಈ ಪುಸ್ತಕದಲ್ಲಿ `ಕ್ಯಾಬ್ ತಿe meಣ’, `ಅಪ್ಪನ ಮನೆ ಮಾರಾಟಕ್ಕಿದೆ’, `ಚುಚ್ಚುಮದ್ದಿನ ಸೈಡ್ ಎಫೆಕ್ಟ್’, `ವೀಕೆಂಡ್ ಸತ್ಯಾಗ್ರಹ’, `ಉಪ್ಪಿಲ್ಲದ ಸತ್ಯಾಗ್ರಹ’ `ಮಾತುಗಾರರುರಿದ್ದಾರೆ ಎಚ್ಚರಿಕೆ’, `ಕಾಣೆಯಾದವರ ಬಗ್ಗೆ ಪ್ರಕಟಣೆ’, `ಕಾಣದ ಕಡಲಿಗೆ’, `ವೈರಾಗ್ಯದ ವ್ಯಾಲಿಡಿಟಿ’, ಇಂಗ್ಲಿಷ್ ಕೃಷ್ಣ’, `ಊuಟಿgಡಿಥಿ ಒಚಿಟಿ’, ನಂಜನಗೂಡು ಣo ನ್ಯೂಜರ್ಸಿ’, ಯಾರು?, `ದೇವರು ಕಾಣೆ ಯಾಗಿದ್ದಾರೆ’, ಶೀರ್ಷಿಕೆಯ ಸಣ್ಣ ಕಥೆ ಗಳನ್ನೊಳಗೊಂಡಿದೆ ಎಂದರು.

ಈ ವೇಳೆ ಕನ್ನಡ ಪರ ಹೋರಾಟಗಾರ ಕೊ.ಸು.ನರಸಿಂಹಮೂರ್ತಿ ಇದ್ದರು. `ಕಥೆ ಡಬ್ಬಿ’ ಪುಸ್ತಕವನ್ನು ಖರೀದಿಸಿ, ಪುಸ್ತಕ ಓದಿದ್ದ ಬೀದಿ ಬದಿ ವ್ಯಾಪಾರಿ ನಟರಾಜ್ ಅವರಿಗೆ ಲೇಖಕಿ ರಂಜನಿ ರಾಘವನ್ ಅವರು ಮೊದಲ ಆಟೋಗ್ರಾಫ್ ಹಾಕಿ, ಪ್ರೋತ್ಸಾಹಿಸಿದರು.

 

Translate »