ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಿ ಕನ್ನಡ ರಾಜ್ಯೋತ್ಸವ ಆಚರಣೆ

December 1, 2020

ಮೈಸೂರು, ನ.30 (ಎಂಟಿವೈ)- ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೈಸೂರಿನ ವಿವೇಕಾನಂದ ವೃತ್ತದ ಬಳಿ ಕರ್ನಾಟಕ ಸೇನಾಪಡೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈಯ್ದವರಿಗೆ ಸನ್ಮಾನಿಸಿ, ಕೊರೊನಾ ವಾರಿಯರ್ಸ್‍ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ವಿವೇಕಾನಂದ ವೃತ್ತದ ಬಳಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಬಳಿಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಸಿ. ಮಹೇ ಶ್ವರನ್, ಕೆಎಸ್‍ಆರ್‍ಟಿಸಿ ಭದ್ರತಾ ಅಧಿಕಾರಿ ಶಿವರಾಜೇಗೌಡ, ಸಮಾಜ ಸೇವಕ ಎನ್. ಎಂ.ನವೀನ್‍ಕುಮಾರ್, ವೈದೇಹಿ ಅಯ್ಯಂಗಾರ್(ಧಾರ್ಮಿಕ), ಪುಷ್ಪಾ ಎ ಅಯ್ಯಂಗಾರ್(ಸಾಹಿತ್ಯ), ಭಾರತೀಯ ಜೀವವಿಮಾದ ಕೊರೊನಾ ವಾರಿಯರ್ ಡಿ.ದಿವ್ಯಾನಂದ್(ಜನಸೇವೆ), ಡಾ.ಎಸ್.ಪಿ. ಯೋಗಣ್ಣ(ವೈದ್ಯಕೀಯ), ಜಿಲ್ಲಾ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕೃತ ವರದಿಗಾರ ಕೆ. ಪಿ.ನಾಗರಾಜ್(ಮಾಧ್ಯಮ), ನೃತ್ಯ ಕಲಾ ವಿದೆ ಪ್ರಸನ್ನ ಲಕ್ಷ್ಮೀ ಕಳಾಧರ್, ಹಿರಿಯ ಕನ್ನಡ ಆಟೋ ಚಾಲಕ ಕೊವಾ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ 40 ಮಂದಿ ಕೊರೊನಾ ವಾರಿಯರ್ಸ್‍ಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.

ಇದೇ ವೇಳೆ ಯುವ ಮುಖಂಡ ಎನ್. ಎಂ.ನವೀನ್‍ಕುಮಾರ್ ಮಾತನಾಡಿ, ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರ ದಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾ ನಿಸುವ ಮೂಲಕ ಪ್ರೋತ್ಸಾಹಿಸುತ್ತಿರು ವುದು ಶ್ಲಾಘನೀಯ. ಕೊರೊನಾ ವೈರಾಣು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೊಳಿ ಸಲಾದ ಲಾಕ್‍ಡೌನ್ ವೇಳೆ ವಿವಿಧ ಕ್ಷೇತ್ರ ಗಳಲ್ಲಿ ಕೊರೊನಾ ವಾರಿಯರ್ಸ್‍ಗಳು ಜನ ಸೇವೆ ಮಾಡಿದ್ದಾರೆ. ಅಂತಹವರನ್ನು ಗೌರ ವಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹಲವು ಮಹನೀ ಯರ ಕೊಡುಗೆಯಿಂದಾಗಿ ಕನ್ನಡ ನಾಡು ಹಾಗೂ ಭಾಷೆ ಸಮೃದ್ಧವಾಗಿದೆ. ಅದನ್ನು ಉಳಿಸಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಪಿ ಡಾ.ಎ. ಎನ್.ಪ್ರಕಾಶ್‍ಗೌಡ, ಕೇಂದ್ರ ಉಗ್ರಾಣ ನಿಗಮ ರಾಜ್ಯ ನಿರ್ದೇಶಕ ಜಿ.ರವಿ, ಅಖಿಲ ಕರ್ನಾ ಟಕ ಬ್ರಾಹ್ಮಣ ಮಹಾಸಭಾ ವಲಯ ಅಧ್ಯಕ್ಷ ಬಿ.ಆರ್.ನಟರಾಜ್ ಜೋಯಿಸ್, ಪಾಲಿಕೆ ಸದಸ್ಯ ಎಂ.ಸಿ.ರಮೇಶ್, ಸಮಾಜ ಸೇವಕ ಸಿ.ವೈ.ಶಿವೇಗೌಡ, ಯುವ ಮುಖಂಡ ಎಂ.ರಾಜೇಶ್, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »