ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..!? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು
ಮೈಸೂರು

ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..!? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು

January 8, 2021

ಚಿಕ್ಕಮಗಳೂರು : ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಡೂರಿನಲ್ಲಿ ವಾಗ್ಧಾಳಿ ನಡೆಸಿದ್ದಾರೆ.

ಬಿಜೆಪಿಯವರು ನನ್ನ ಮೇಲೆ ಬೀಳ್ತಾರೆ, ಜೆಡಿಎಸ್‍ನವರೂ ನನ್ನ ಮೇಲೆ ಬೀಳ್ತಾರೆ, ನನ್ನ ರಕ್ಷಣೆಗೆ ನೀವೇ ಬರಬೇಕು ಎಂದು ಮಾಧ್ಯಮಗಳನ್ನು ಕೇಳಿಕೊಂಡಿದ್ದಾರೆ. ಹಸು ವಯಸ್ಸಾದ ಮೇಲೆ ಸಾಕೋರು ಯಾರು? ಮಾರಾಟ ಮಾಡಬೇಡಿ ಎಂದು ನೀವು ಹೇಳಿದ್ರೆ ಸಾಕೋರು ಯಾರು..? ಗೋ ಮಾತೆ ಪೂಜೆ ಮಾಡೋರು ಹಸುಗಳನ್ನು ಸಾಕ್ತಾರಾ ಎಂದು ಪ್ರಶ್ನಿಸಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ, ತಿನ್ನಬೇಕು ಅನಿಸಿದ್ರೆ ತಿನ್ನುತ್ತೀನಿ ಅಂದೆ. ನನ್ನ ಇಷ್ಟ ನೀನು ಯಾವನ್ ಕೇಳೋಕೆ. ನಂಗಿಷ್ಟ ನಾನು ತಿಂತೀನಿ ಅಂದೆ. ಅದಕ್ಕೆ ನನ್ನ ಬಗ್ಗೆ ಭಾರೀ ಆರೋಪ, ಟೀಕೆಗಳು ಬರ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Translate »