ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ   ಅನುದಾನಕ್ಕೆ ಹಾಲುಮತ ಮಹಾಸಭಾ ಒತ್ತಾಯ
ಮೈಸೂರು

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ  ಅನುದಾನಕ್ಕೆ ಹಾಲುಮತ ಮಹಾಸಭಾ ಒತ್ತಾಯ

January 8, 2021

ಮೈಸೂರು,ಜ.7(ಎಂಟಿವೈ)-ಮೈಸೂರಿನ ಕುರುಬಾರ ಹಳ್ಳಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆ ನಿರ್ಮಾ ಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹಾಲುಮತ ಮಹಾಸಭಾ ಪದಾಧಿಕಾರಿಗಳು ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು.

`ಹಾಲುಮತ ಮಹಾಸಭಾ ಮೈಸೂರು ಜಿಲ್ಲಾ ಘಟಕ’ದ ಪದಾಧಿಕಾರಿಗಳು ಮುಡಾ ಸದಸ್ಯ ನವೀನ್‍ಕುಮಾರ್ ನೇತೃತ್ವದಲ್ಲಿ ಅಧ್ಯಕ್ಷರ ಕಚೇರಿಗೆ ಗುರುವಾರ ಬೆಳಗ್ಗೆ ಆಗಮಿಸಿ, ಅನುದಾನಕ್ಕಾಗಿ ಮನವಿ ಮಾಡಿದರು.

ಮುಡಾ ಸದಸ್ಯ ನವೀನ್‍ಕುಮಾರ್ ಹಾಗೂ ಹಾಲು ಮತ ಮಹಾಸಭಾ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತ ನಾಡಿ, ಕುರುಬಾರಹಳ್ಳಿ ವೃತ್ತಕ್ಕೆ ಈಗಾಗಲೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಲಾ ಗಿದೆ. ಹಿಂದೆ ಮುಡಾ ಅಧ್ಯಕ್ಷರಾಗಿದ್ದ ಡಿ.ಧ್ರುವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಮುಡಾ ಸಭೆಯಲ್ಲಿ ಅಂದು ಶಾಸಕ ರಾಗಿದ್ದ ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ ಅವರು ಕುರು ಬಾರಹಳ್ಳಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆ ಸ್ಥಾಪನೆಗೆ ಸಮ್ಮತಿಸಿ ದ್ದರು. ಅಲ್ಲದೆ ಮುಡಾ ವತಿಯಿಂದ 25 ಲಕ್ಷ ರೂ. ನೀಡಲು ಅಂದಿನ ಸಭೆ ಒಪ್ಪಿಗೆ ನೀಡಿತ್ತು ಎಂದು ನೆನಪಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಬ್ರಿಟಿಷರಿಂದ ನೇಣು ಶಿಕ್ಷೆಗೆ ಗುರಿಯಾದ ಅಪ್ರತಿಮ ದೇಶಭಕ್ತನಿಗೆ ಗೌರವ ಸಲ್ಲಿಸಲು ಕ್ರಮ ಕೈಗೊಳ್ಳುವಂತೆ ಕೋರಿದರು. ಮನವಿ ಸ್ವೀಕರಿಸಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ಅವರ ಮೇಲೆ ಅಪಾರ ಗೌರವವಿದೆ. ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ಹಿಂದೆ ಮುಡಾದಲ್ಲಿ ಕೈಗೊಂಡ ಕ್ರಮಕ್ಕೆ ಅನುಗುಣವಾಗಿಯೇ ಶೀಘ್ರವೇ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡು ವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹಾಲುಮತ ಮಹಾಸಭಾ ಉಪಾಧ್ಯಕ್ಷ ಸಮೃದ್ಧಿ ಸುರೇಶ್, ಪ್ರಧಾನ ಕಾರ್ಯದರ್ಶಿ ನಾಗೇಶ್‍ಗೌಡ, ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

 

 

 

Translate »