ಎಲ್ಲಾ ಜಾತಿ-ಧರ್ಮ, ಭಾಷಿಗರಿಗೂ ರಾಜಕೀಯ   ಅಧಿಕಾರ ನೀಡುವುದು ಬಿಜೆಪಿ ಸಂಸ್ಕøತಿ
ಮೈಸೂರು

ಎಲ್ಲಾ ಜಾತಿ-ಧರ್ಮ, ಭಾಷಿಗರಿಗೂ ರಾಜಕೀಯ  ಅಧಿಕಾರ ನೀಡುವುದು ಬಿಜೆಪಿ ಸಂಸ್ಕøತಿ

July 24, 2020

ಮೈಸೂರು, ಜು.23(ಪಿಎಂ)- ಎಲ್ಲಾ ಜಾತಿ-ಧರ್ಮ, ಭಾಷಿಗರಿಗೂ ರಾಜ ಕೀಯ ಅಧಿಕಾರ ನೀಡುವ ಸಂಸ್ಕøತಿ ಬಿಜೆಪಿಯಲ್ಲಿದೆ ಎಂದು ವಿಧಾನ ಪರಿ ಷತ್‍ಗೆ ಈಗಷ್ಟೇ ನೇಮಕಗೊಂಡಿರುವ ಎ.ಹೆಚ್.ವಿಶ್ವನಾಥ್ ಹೇಳಿದರು.

ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಚೇರಿ `ಸಚಿತ್ ರಾಜೇಂದ್ರ ಭವನ’ದಲ್ಲಿ ಗುರುವಾರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾತಿಗೆ ತಪ್ಪದ ಮಗ ಎಂದರೆ ಸಿಎಂ ಬಿ.ಎಸ್. ಯಡಿಯೂರಪ್ಪ ಎಂಬುದು ಇಂದು ಸಾಬೀತಾಗಿದೆ. ರಾಜ್ಯಸಭೆ ಹಾಗೂ ವಿಧಾನ ಪರಿಷತ್‍ಗೆ ಆಯ್ಕೆಯಲ್ಲಿ ಬಿಜೆಪಿ ಹೈಕಮಾಂಡ್ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ವರಿಷ್ಠರು ತೆಗೆದುಕೊಂಡ ತೀರ್ಮಾನ ಬಿಜೆಪಿಗೆ ಒಂದು ದೂರದರ್ಶಿತ್ವ ಇದೆ ಎಂಬುದನ್ನು ಖಚಿತಪಡಿಸುತ್ತದೆ ಎಂದು ವ್ಯಾಖ್ಯಾನಿಸಿದರು. `ಜನತಂತ್ರ ವ್ಯವಸ್ಥೆಯ ಭಾರತದಲ್ಲಿ ಎಲ್ಲಾ ಜಾತಿ-ಧರ್ಮ ಹಾಗೂ ಭಾಷಿಗರ ಭವಿಷ್ಯದ ಬೀಗದ ಕೈ ರಾಜ ಕೀಯ ಅಧಿಕಾರ’ ಎಂದು ಅಂಬೇಡ್ಕರ್ ಹೇಳಿದ್ದಾರೆ. ಅದನ್ನು ಅಕ್ಷರಶಃ ಜಾರಿಗೊಳಿ ಸಲು ಬಿಜೆಪಿ ಮುಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇವರಾಜ ಅರಸು ನನ್ನ ಇಡೀ ಮೈಮನದಲ್ಲಿ ಆವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ದೇವ ರಾಜ ಅರಸು ಅವರ ನಡುವೆ ಸಾಮ್ಯ ವಿದೆ. ಇಬ್ಬರೂ ಜಾತಿ ಹಿಂದೆ ಬಿದ್ದವರಲ್ಲ. ಮೋದಿಯವರು ಎಂದೂ ಹಿಂದೂ ಧರ್ಮ, ರಾಮಮಂದಿರ ನಿರ್ಮಾಣ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಿಲ್ಲ. ಅವರು ಹೇಳಿದ್ದು ಗುಜರಾತ್ ಮಾದರಿ ಅಷ್ಟೇ ಎಂದು ಬಣ್ಣಿಸಿದರು. ಗುಜರಾತ್ ರಾಜ ಕಾರಣವನ್ನು ತಮ್ಮ ಮುಷ್ಠಿಯಲ್ಲಿಟ್ಟು ಕೊಂಡಿದ್ದ ಪಟೇಲ್ ಸಮಾಜದವರಿಗೆ ಸೆಡ್ಡು ಹೊಡೆದವರು ನರೇಂದ್ರ ಮೋದಿ. ಆ ಸಮಾಜಕ್ಕೆ ವಿರುದ್ಧವಾಗಿ ಬಿಜೆಪಿ ಯನ್ನು ಗುಜರಾತಿನಲ್ಲಿ ಅಧಿಕಾರಕ್ಕೆ ತರು ವಲ್ಲಿ ಮೋದಿ ಯಶಸ್ವಿಯಾದರು. ಸತತ 13 ವರ್ಷ ಗುಜರಾತ್ ಮುಖ್ಯಮಂತ್ರಿ ಯಾಗಿದ್ದರು. ಈಗ ಪ್ರಧಾನಿಯಾಗಿ ಮುಂದುವರೆಯುತ್ತಿದ್ದಾರೆ. ಜಾತಿ-ಧರ್ಮದ ಆಧಾರದ ಮೇಲೆ ಮೋದಿಯ ವರು ರಾಜಕಾರಣವನ್ನೂ ಮಾಡಿಲ್ಲ, ಚುನಾ ವಣೆಗೂ ಹೋಗಿಲ್ಲ ಎಂದು ಹೇಳಿದರು.

ಬಿಜೆಪಿ ಕಾರ್ಯಕ್ರಮ ಹಾಗೂ ನಾಯ ಕತ್ವದ ಬಗ್ಗೆ ಕಾರ್ಯಕರ್ತರು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಆ ಮೂಲಕ ಸರಿಯಾದ ರೀತಿಯಲ್ಲಿ ಸಾರ್ವಜನಿಕರಲ್ಲಿ ನಾವು ಬಿಂಬಿತವಾಗಬೇಕು. ಹಿಂದಿನ ಮೈತ್ರಿ ಸರ್ಕಾರದಲ್ಲಿ ನಾವು 17 ಶಾಸಕರು ಆಡಳಿತ ಪಕ್ಷದಿಂದ ವಿರೋಧ ಪಕ್ಷದ ಕಡೆಗೆ ಬಂದಿದ್ದು ರಾಜಕೀಯ ಕ್ಷಿಪ್ರಕ್ರಾಂತಿ. ಆದರೆ ಅಂದು ಆಡಳಿತದಲ್ಲಿದ್ದವರು ಪಕ್ಷಾಂತರ ಕಾಯ್ದೆಯನ್ನು ಮುಷ್ಟಿ ಯಲ್ಲಿಟ್ಟುಕೊಂಡು ಪಾಳೇಗಾರರಂತೆ ವರ್ತಿಸಿದರು ಎಂದು ಕಿಡಿಕಾರಿದರು.

ನನ್ನನ್ನು ಕೆಲ ಸಾಹಿತಿಗಳು ಟೀಕಿಸಿ ದ್ದಾರೆ. ಆದರೆ ನಾನೇನು ಕಾಗಕ್ಕ ಗುಬ್ಬಕ್ಕನ ಕಥೆಗಳನ್ನು ಬರೆದಿಲ್ಲ. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ ಪುಸ್ತಕಗಳನ್ನು ಬರೆದಿದ್ದೇನೆ. ನನ್ನ ಅನು ಭವ ಗುರುತಿಸಿಯೇ ವಿಧಾನಪರಿಷತ್ ಸ್ಥಾನ ನೀಡಲಾಗಿದೆ ಎಂದು ಟೀಕಾಕಾರ ರಿಗೆ ತಿರುಗೇಟು ನೀಡಿದರು. ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಬಿಜೆಪಿ ಮುಖಂಡರಾದ ಗಿರಿಧರ್, ಜೋಗಿ ಮಂಜು, ವಿಕ್ರಂ ಅಯ್ಯಂಗಾರ್ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.

Translate »