ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ಗೆ ಮುಡಾ ನೋಟಿಸ್
ಮೈಸೂರು

ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ಗೆ ಮುಡಾ ನೋಟಿಸ್

April 28, 2022

ಮೈಸೂರಿನ ಪ್ರಧಾನ ಸ್ಥಳದಲ್ಲಿ ೩೮ ವರ್ಷದ ಹಿಂದೆ ೧೦.೨೬ ಎಕರೆ ಭೂಮಿ ಮಂಜೂರಾತಿಯಲ್ಲಿ ನಿಯಮ ಉಲ್ಲಂಘನೆÀ ಆರೋಪ
 ಮೂರು ದಿನದಲ್ಲಿ ಉತ್ತರಿಸಲು ಸೂಚನೆ: ಹೆಚ್ಚುವರಿ ಕಾಲಾವಕಾಶಕ್ಕೆ ಟ್ರಸ್ಟ್ ಕೋರಿಕೆ
 ೧೯೮೪ರಲ್ಲಿ ಕಲ್ಯಾಣ ಮಂಟಪ, ಧಾರ್ಮಿಕ ಚಟುವಟಿಕೆಗೆ ೧೦.೨೬ ಎಕರೆ ಜಾಗ ಮಂಜೂರು
 ಸದರಿ ಜಾಗ ಉದ್ಯಾನವನ, ತೋಟಗಾರಿಕೆಗೆ ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದ ಸರ್ಕಾರ
 ಹಾಲಿ ಸದರಿ ಜಾಗದಲ್ಲಿ ಕಲ್ಯಾಣ ಮಂಟಪವಿದ್ದು ಉಳಿದ ಜಾಗ ಖಾಲಿ……ಖಾಲಿ…. ಬಿದ್ದಿದೆ
 ಈ ಆಸ್ತಿ ಮೌಲ್ಯ ಬರೋಬ್ಬರಿ ೨೦೦ ಕೋಟಿಗೂ ಅಧಿಕ; ೩೮ ವರ್ಷದ ನಂತರ ಮುಡಾ ಗಮನ

ಮೈಸೂರು, ಏ.೨೭- ಸಾರ್ವಜನಿಕರಿಗೆ ಅನುಕೂಲಕಾರಿ ಸೌಕರ್ಯಕ್ಕಾಗಿ ಸಿಐಟಿಬಿ (ಸಿಟಿ ಇಂಪ್ರೂವ್‌ಮೆAಟ್ ಟ್ರಸ್ಟ್ ಬೋರ್ಡ್) ೩೮ ವರ್ಷದ ಹಿಂದೆ ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ಗೆ ಮಂಜೂರು ಮಾಡಿದ್ದ ೧೦.೨೬ ಎಕರೆ ಭೂಮಿ, ಮಂಜೂರಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಯಾಗಿದೆ ಎಂದು ಆರೋಪಿಸಿ ಈಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನೋಟಿಸ್ ಜಾರಿ ಮಾಡಿದೆ.

೨೦೨೨ರ ಏ.೧೩ರಂದು ಮೈಸೂರು ಯಾದವಗಿರಿಯ ಪರಮಹಂಸ ರಸ್ತೆ ೩ನೇ ಮುಖ್ಯ ರಸ್ತೆಯಲ್ಲಿರುವ ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷರಿಗೆ ವಿವರಣೆ ಕೋರಿ ನೋಟಿಸ್ ನೀಡಿರುವ ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಮೂರು ದಿನದೊಳಗಾಗಿ ಲಿಖಿತ ಸಮ ಜಾಯಿಷಿ ನೀಡುವಂತೆ ತಿಳಿಸಿದ್ದಾರೆ.

ಕಲ್ಯಾಣ ಮಂಟಪ, ವಸತಿಗೃಹ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮೈಸೂರು ತಾಲೂಕು, ಕಸಬಾ ಹೋಬಳಿ ಮಾರಗೌಡನಹಳ್ಳಿ ಗ್ರಾಮ (ಕೆಆರ್‌ಎಸ್ ರಸ್ತೆಯ ಇಎಸ್‌ಐ ಆಸ್ಪತ್ರೆ ಹಿಂಭಾಗ ಕಾಮಧೇನು ಕಲ್ಯಾಣ ಮಂಟಪ ಇರುವ ಜಾಗ)ದ ಸರ್ವೆ ನಂ. ೭, ೮ ಮತ್ತು ೯ರಲ್ಲಿ ಬರುವ ೧೧.೬ ಎಕರೆ ಭೂಮಿಯನ್ನು ಮಂಜೂರು ಮಾಡಿಕೊಡುವಂತೆ ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷರು ೧೯೮೪ರ ಜನವರಿ ೨೩ರಂದು ಅಂದಿನ ಸಿಐಟಿಬಿ (ಸಿಟಿ ಇಂಪ್ರೂವ್‌ಮೆAಟ್ ಟ್ರಸ್ಟ್ ಬೋರ್ಡ್) ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದರು.

ಕೇವಲ ೨.೨೬ ಲಕ್ಷ ರೂ.ಗಳಿಗೆ: ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷರ ಕೋರಿಕೆ ಯಂತೆ ಟ್ರಸ್ಟ್ಗೆ ಸದರಿ ಸರ್ವೆ ನಂಬರ್ ನಲ್ಲಿ ೧೦.೨೬ ಎಕರೆ ಜಾಗ ಮಂಜೂರು ಮಾಡಲು ೧೯೮೪ರ ಫೆಬ್ರವರಿ ೪ರಂದು ಸಿಐಟಿಬಿ ನಿರ್ಣಯಿಸಿ, ೨ ವರ್ಷದೊಳಗಾಗಿ ಉದ್ದೇಶಿತ ಕಟ್ಟಡ ನಿರ್ಮಿಸುವಂತೆ ಷರತ್ತು ವಿಧಿಸಲಾಗಿತ್ತು. ಆ ಜಾಗವನ್ನು ಕೇವಲ ೨,೨೬,೬೪೪ ರೂ.ಗಳಿಗೆ ಖರೀದಿಗೆ ಕೊಡಲಾ ಗುತ್ತದೆ ಎಂದು ಉಲ್ಲೇಖಿಸಿ ಸಿಐಟಿಬಿ ಅಧ್ಯಕ್ಷರು ಟ್ರಸ್ಟ್ಗೆ ಹಿಂಬರಹ ನೀಡಿರುವುದು ಕಡತದ ಮಾಹಿತಿಯಿಂದ ದೃಢಪಟ್ಟಿದೆ.

ನೋಂದಣ ಯಾಗದ ಕರಾರು ಪತ್ರ: ಸಿಐಟಿಬಿಯಲ್ಲಿ ‘ಮಂಜೂರು’ ಎಂದು ನಿರ್ಣಯವಾಗಿದ್ದರೂ ಅಧ್ಯಕ್ಷರು ‘ಖರೀದಿ’ ಎಂದು ಹಿಂಬರಹ ನೀಡಿರುವುದು ನಿಯಮ ಉಲ್ಲಂಘನೆ ಎಂದಿರುವ ಮುಡಾ ಆಯುಕ್ತರು ೧೯೮೪ರ ಜುಲೈ ೯ರಂದು ನೋಂದಣ ಯಾಗದ ಕರಾರು ಪತ್ರವನ್ನು ೨.೨೬ ಲಕ್ಷ ರೂ.ಗಳಿಗೆ ಟ್ರಸ್ಟ್ಗೆ ನೀಡಲಾಗಿದೆ. ಆ ಭೂಮಿಯನ್ನು ಕಲ್ಯಾಣ ಮಂಟಪ, ಶೈಕ್ಷಣ ಕ, ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂಬ ಷರತ್ತು ಪತ್ರಕ್ಕೆ ಅಂದಿನ ಸಿಐಟಿಬಿ ಅಧ್ಯಕ್ಷ ಬಿ.ಕೆ.ಪುಟ್ಟಯ್ಯ ಮತ್ತು ಟ್ರಸ್ಟ್ ಅಧ್ಯಕ್ಷರಾಗಿದ್ದ ಪ್ರೊ. ಪಿ.ಎಂ.ಚಿಕ್ಕಬೋರಯ್ಯ ಅವರು ಸಹಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಎಂಜಿಪಿ ರಿಟ್ ಪಿಟಿಷನ್: ಆ ಭೂಮಿ ಮಂಜೂರು ಸಂಬAಧ ಮೈಸೂರು ಗ್ರಾಹಕರ ಪರಿಷತ್(ಎಂಜಿಪಿ) ೨೦೦೫ರಲ್ಲಿ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ್ದ ರಿಟ್ ಪಿಟಿಷನ್‌ನಲ್ಲಿ ಪ್ರಾಧಿಕಾರದ ಆಯುಕ್ತರು ಸೂಕ್ತ ಕ್ರಮ ಕೈ ಗೊಳ್ಳುವಂತೆ ೨೦೦೬ರಲ್ಲಿ ಆದೇಶಿಸಲಾಗಿದೆ.

ಈ ಹಿಂದೆಯೂ ನೋಟಿಸ್: ನ್ಯಾಯಾ ಲಯದ ಆದೇಶದಂತೆ ಭೂಮಿ ಮಂಜೂರು ಷರತ್ತು ಉಲ್ಲಂಘನೆಯಾಗಿದ್ದು, ಸದರಿ ಭೂಮಿಯನ್ನು ಉದ್ದೇಶಕ್ಕೆ ಬಳಸದಿರುವು ದರಿಂದ ಭೂಮಿಯನ್ನು ಹಿಂಪಡೆಯಬಾರ ದೇಕೇ ಎಂಬ ಕಾರಣ ಕೇಳಿ ೨೦೦೭ರಲ್ಲಿ ಮುಡಾ ಆಯುಕ್ತರು ನೀಡಿದ್ದ ನೋಟಿಸ್‌ಗೆ ಸಮಜಾಯಿಷಿ ನೀಡಿದ್ದ ಟ್ರಸ್ಟ್ ಅಧ್ಯಕ್ಷರು, ಸದರಿ ಸ್ವತ್ತಿಗೆ ಟ್ರಸ್ಟ್ ಸಂಪೂರ್ಣ ಮಾಲೀಕ ರಾಗಿದ್ದು, ಪ್ರಶ್ನಿಸಲು ಪ್ರಾಧಿಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಉತ್ತರಿಸಿದ್ದರು.

ಜಾಗ ವಶಪಡಿಸಿಕೊಳ್ಳಬಹುದೆಂದು ಅಭಿಪ್ರಾಯ: ‘ಮಂಜೂರು’ ಎಂದು ನಿರ್ಣಯಿ ಸಿರುವುದನ್ನು ‘ಖರೀದಿ’ಗೆ ನೀಡಲಾಗಿದೆ ಎಂದಿರುವುದು ಮಂಡಳಿ ನಿರ್ಣಯಕ್ಕೆ ವಿರುದ್ಧವಾಗಿದ್ದು, ಉದ್ದೇಶವೂ ಉಲ್ಲಂಘನೆ ಯಾಗಿರುವುದರಿಂದ ನೋಟಿಸ್ ನೀಡಿ ಸದರಿ ಜಾಗವನ್ನು ಪ್ರಾಧಿಕಾರದ ಸುಪರ್ದಿಗೆ ಪಡೆಯಬಹುದೆಂದು ಮುಡಾ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಕ್ರಮವಿಲ್ಲ: ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿರುವುದು ದೃಢ ಪಟ್ಟಿದ್ದು, ಸರ್ಕಾರವೂ ಸಹ ೨೦೦೭ರಲ್ಲೇ ಸೂಕ್ತ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾಗ್ಯೂ ಮುಡಾ ಮೌನ ವಹಿಸಿದೆ. ಅಲ್ಲದೇ ಸರ್ಕಾರದ ಆದೇಶದ ವಿರುದ್ಧ ಟ್ರಸ್ಟ್ಗೆ ಃuಟಞ ಐಚಿಟಿಜ ಅನ್ನು ಮಂಜೂರು ಮಾಡ ಲಾಗಿದ್ದು, ಹಣವನ್ನೂ ಸರಿಯಾಗಿ ಲೆಕ್ಕ ಹಾಕಿ ಪಾವತಿಸದಿರುವುದು ಕಂಡು ಬಂದಿದೆ.

ಉದ್ಯಾನವನ, ತೋಟಗಾರಿಕೆಗೆ ಮೀಸಲು: ಸದರಿ ಭೂಮಿ ತಗ್ಗು ಪ್ರದೇಶವಾಗಿದ್ದು, ಇದನ್ನು ಉದ್ಯಾನವನ ಮತ್ತು ತೋಟ ಗಾರಿಕೆ ಉದ್ದೇಶಕ್ಕೆ ಕಾಯ್ದಿರಿಸುವಂತೆಯೂ ಯಾವುದೇ ಸಂಸ್ಥೆಗಳಿಗೆ ಹಂಚಿಕೆ ಮಾಡ ಬಾರದೆಂದು ೧೯೮೪ರಲ್ಲೇ ಸರ್ಕಾರದ ಕಾರ್ಯದರ್ಶಿಗಳು ಸಿಐಟಿಬಿಗೆ ನಿರ್ದೇಶನ ನೀಡಿದ್ದರು. ಅಲ್ಲದೇ ಎಕರೆಗೆ ೩೬,೦೦೦ ರೂ.ಗಳÀಂತೆ ೩,೮೪,೪೦೦ ರೂ. ಮೌಲೀ ಕರಣ ಮಾಡಬೇಕೆಂದು ನಿರ್ಧರಿಸಿದ್ದರೂ, ಕೇವಲ ೨,೨೬,೬೪೪ ರೂ. ಗಳಿಗೆ ಲೆಕ್ಕ ಹಾಕಿ ಟ್ರಸ್ಟ್ನಿಂದ ಹಣ ಪಾವತಿಸಿಕೊಂಡಿ ರುವುದು ಕಂಡು ಬಂದಿದೆ.

ಕರಾರು ಮಾತ್ರ, ನೋಂದಣ ಯಾಗಿಲ್ಲ: ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ಗೆ ಕರಾರು ಪತ್ರ ನೀಡಲಾಗಿದೆಯೇ ಹೊರತು, ಈವರೆಗೂ ನೋಂದಣ ಮಾಡದಿರುವುದು ಸಿಎ ನಿವೇಶನಗಳ ಹಂಚಿಕೆ ನಿಯಮ ಉಲ್ಲಂಘನೆಯಾಗಿ ರುವುದರಿಂದ ಸದರಿ ಸ್ವತ್ತು ಅಕ್ರಮವಾಗಿ ಟ್ರಸ್ಟ್ನ ಸ್ವಾಧೀನದಲ್ಲಿದೆ. ಈ ಬಗ್ಗೆ ೩ ದಿನದೊಳಗೆ ಲಿಖಿತ ಸಮಜಾಯಿಷಿ ನೀಡ ಬೇಕೆಂದು ಮುಡಾ ಆಯುಕ್ತರು ಏ.೧೩ರಂದು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

ನಿಯಮ ಉಲ್ಲಂಘಿಸಿಲ್ಲ, ಉತ್ತರ ನೀಡಲು ಕಾಲಾವಕಾಶ ಕೋರಿದ್ದೇನೆ
ಮೈಸೂರು, ಏ.೨೭- ನಾವು ಭೂಮಿ ಮಂಜೂರಾತಿ ನಿಯಮಾವಳಿ ಹಾಗೂ ಷರತ್ತು ಉಲ್ಲಂಘನೆ ಮಾಡಿಲ್ಲ. ಮುಡಾ ಆಯುಕ್ತರು ನಮೂದಿ ಸಿರುವ ಎಲ್ಲಾ ಅಂಶಗಳಿಗೆ ಉತ್ತರ ನೀಡಲು ಕಾಲಾವಕಾಶ ಕೋರಿ, ನೋಟಿಸ್‌ನಲ್ಲಿ ತಿಳಿಸಿರುವಂತೆ ಮೂರು ದಿನದೊಳಗೆ ತಾವು ಪತ್ರ ಸಲ್ಲಿಸಿರುವುದಾಗಿ ಗೋಕುಲಂ ಕಲ್ಯಾಣ ಮಂಟಪ ಟ್ರಸ್ಟ್ ಹಾಲಿ ಅಧ್ಯಕ್ಷ ಪಿ.ವಿಶ್ವನಾಥ್ ತಿಳಿಸಿದ್ದಾರೆ.

ಈ ಹಿಂದಿನ ಸಿಐಟಿಬಿಯಿಂದ ಅಂದಿನ ನಿಯಮಾವಳಿ ಪ್ರಕಾರವೇ ಜಾಗ ನೀಡಲಾಗಿದೆ. ಷರತ್ತಿಗೆ ಒಳಪಟ್ಟಂತೆಯೇ ಉದ್ದೇಶಕ್ಕೆ ಬಳಸುತ್ತಿದ್ದೇವೆ. ಶೈಕ್ಷಣ ಕ ಸಂಸ್ಥೆ, ಕಟ್ಟಡ ನಿರ್ಮಿಸಲು ನಕ್ಷೆ ಅನುಮೋದನೆ ಕೋರಿರುವುದರಿಂದ ಮುಡಾ ಆಯುಕ್ತರು ಈ ರೀತಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಯಾಗಿದ್ದರೆ ೩೮ ವರ್ಷಗಳಿಂದ ಏಕೆ ಕ್ರಮ ವಹಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಅವರು ೪ ಪುಟಗಳ ನೋಟಿಸ್‌ನಲ್ಲಿ ತಿಳಿಸಿರುವ ಅಂಶಗಳಿಗೆ ೩ ದಿನದಲ್ಲಿ ಉತ್ತರಿಸಲು ಸಾಧ್ಯವಿಲ್ಲದಿರುವುದರಿಂದ ಹೆಚ್ಚುವರಿ ಕಾಲಾವಕಾಶ ಕೋರಿದ್ದೇವೆ ಎಂದು ಪಿ.ವಿಶ್ವನಾಥ್ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದರು.

 

ಎಸ್.ಟಿ.ರವಿಕುಮಾರ್

Translate »