ಬಿಜಿಎಸ್ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳ ಕಲಾಂ-ಸಲಾಂ ವಸ್ತು ಪ್ರದರ್ಶನ
ಮೈಸೂರು

ಬಿಜಿಎಸ್ ಬಿಇಡಿ ಕಾಲೇಜಿನ ವಿದ್ಯಾರ್ಥಿಗಳ ಕಲಾಂ-ಸಲಾಂ ವಸ್ತು ಪ್ರದರ್ಶನ

April 28, 2022

ಗಮನ ಸೆಳೆದ `ಅಗ್ನಿಯ ರೆಕ್ಕೆಗಳು’ ನಾಟಕ ಪ್ರದರ್ಶನ

ಮೈಸೂರು, ಏ.೨೭(ಆರ್‌ಕೆಬಿ)- ವಿಶ್ವದ ವಿಶಿಷ್ಟ ವ್ಯಕ್ತಿಗಳ ಮಧ್ಯೆ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಈ ದೇಶ ಕಂಡ ವಜ್ರ. ತಮಿಳುನಾಡಿನ ರಾಮೇಶ್ವರದÀವರಾದ ಕಲಾಂ ಅವರು ಭಾರತದ ೧೧ನೇ ರಾಷ್ಟçಪತಿ ಯಾಗಿದ್ದು ವಿಸ್ಮಯಕಾರಿ. ದೇಶದ ಮಿಸೈಲ್ ಮ್ಯಾನ್ ಎಂದು ಕರೆಯಲ್ಪಟ್ಟ ಅವರು, ದೇಶದ ಪ್ರತಿಯೊಬ್ಬ ಪ್ರಜೆಗೂ ಸ್ಫೂರ್ತಿ ಯಾದರು. ಸಂಪೂರ್ಣ ನಾಗರಿಕ ಮತ್ತು ಮಾನವತಾವಾದಿಯಾಗಿದ್ದ ಅವರು ಇಡೀ ಜೀವನ ಸಾಧನೆಯ ಸಂಕೇತವಾಯಿತು.

ಮೈಸೂರಿನ ಆದಿಚುಂಚನಗಿರಿ ರಸ್ತೆಯ ಲ್ಲಿರುವ ಬಿಜಿಎಸ್ ಬಿಇಡಿ ಕಾಲೇಜಿನಲ್ಲಿ ಬುಧವಾರ `ಕಲಾಂ-ಸಲಾA’ ಕಾರ್ಯ ಕ್ರಮದ ಮೂಲಕ ಅವರನ್ನು ಸ್ಮರಿಸಲಾ ಯಿತು. ಇದರ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಕಲಾಂ ಅವರ ಬಾಲ್ಯ, ವಿದ್ಯಾರ್ಥಿ ಜೀವನ, ವಿಜ್ಞಾನಿ, ಮಾನ ವತಾವಾದಿ, ಮಾಸ್ಟರ್‌ಮೈಂಡ್, ರಾಷ್ಟçಪತಿ, ಶಿಕ್ಷಣ ತಜ್ಞ, ವಾಗ್ಮಿ ಹೀಗೆ ಅವರ ವ್ಯಕ್ತಿತ್ವ ವನ್ನು ತೆರೆದಿಡುವ ಪ್ರಯತ್ನವಾಗಿ ರೂಪಿಸಿದ್ದ ವಸ್ತು ಪ್ರದರ್ಶನ ಗಮನ ಸೆಳೆಯಿತು.

ಶಿಕ್ಷಕರಿಗೆ ಆದರ್ಶಪ್ರಾಯರಾಗಿರುವ ಕಲಾಂ ಅವರ ಸಾಹಸಗಾಥೆಯನ್ನು ಆಧರಿ ಸಿದ `ಅಗ್ನಿಯ ರೆಕ್ಕೆಗಳು’ ಒಂದು ಗಂಟೆ ಅವಧಿಯ ನಾಟಕವನ್ನು ಕಾಲೇಜಿನ ದ್ವಿತೀಯ ವರ್ಷದ ಬಿಇಡಿ ವಿದ್ಯಾರ್ಥಿ ಗಳು ಪ್ರಸ್ತುತ ಪಡಿಸಿದರು. ಬಿ.ಶ್ರೇಯಸ್ ನಿರ್ದೇಶನದಲ್ಲಿ ನಾಗೇಶ್ ಕಂದೇಗಾಲ ಸಂಗೀತ ನಿರ್ದೇಶನದಲ್ಲಿ ನಾಟಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಬಿಜಿಎಸ್ ವಿದ್ಯಾಪೀಠದ ಕಾರ್ಯ ದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಷ್ಟಿçÃಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್, ಕಾಲೇಜಿನ ಆಡಳಿತಾಧಿಕಾರಿ ಎಚ್.ಯಶೋಧಾ, ಪ್ರಾಂಶುಪಾಲ ಡಾ. ನಾಗರಾಜು ಇನ್ನಿತರರು ಉಪಸ್ಥಿತರಿದ್ದರು.

Translate »