ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ರಿಗೆ ಬೆಳಗಾವಿ ರಾಣ ಚನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು

ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್‌ರಿಗೆ ಬೆಳಗಾವಿ ರಾಣ ಚನ್ನಮ್ಮ ವಿವಿಯಿಂದ ಗೌರವ ಡಾಕ್ಟರೇಟ್ ಪ್ರದಾನ

April 28, 2022

ಮೈಸೂರು,ಏ.೨೭(ಎಂಟಿವೈ)-ಹೆಸರಾAತ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ಬುಧವಾರ ಬೆಳಗಾವಿಯ ರಾಣ ಚನ್ನಮ್ಮ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿತು.

ಮೈಸೂರಿನ ಕುವೆಂಪುನಗರದಲ್ಲಿರುವ ಪಂಡಿತ್ ತಾರಾನಾಥ್ ಅವರ ನಿವಾಸಕ್ಕೆ ಬುಧವಾರ ಬೆಳ ಗಾವಿಯ ರಾಣ ಚನ್ನಮ್ಮ ವಿವಿಯ ಕುಲಪತಿ, ಕುಲ ಸಚಿವರೂ ಸೇರಿದಂತೆ ಸಿಂಡಿಕೇಟ್ ಸದಸ್ಯರು ಆಗ ಮಿಸಿ ಪಂಡಿತ್ ತಾರಾನಾಥ್ ಅವರಿಗೆ `ಡಾಕ್ಟರ್ ಆಫ್ ಲೆರ‍್ಸ್ ಗೌರವ ಡಾಕ್ಟರೇಟ್’ ಪದವಿ ಪ್ರದಾನ ಮಾಡಿ ಸನ್ಮಾನಿಸಿದರು. ಕಳೆದ ತಿಂಗಳು ನಡೆದ ಬೆಳಗಾವಿಯ ರಾಣ ಚನ್ನಮ್ಮ ವಿಶ್ವವಿದ್ಯಾನಿಲಯದ ೯ನೇ ಘಟಿಕೋ ತ್ಸವದಲ್ಲಿ ರಾಜೀವ ತಾರಾನಾಥ ಅವರನ್ನು ಗೌರವ ಡಾಕ್ಟರೇಟ್ ಪದವಿ ಪ್ರದಾನಕ್ಕೆ ಆಯ್ಕೆ ಮಾಡಲಾಗಿತ್ತು. ಕೆಲ ಕಾರಣದಿಂದ ಘಟಿಕೋತ್ಸವ ಸಮಾರಂಭದಲ್ಲಿ ತಾರಾನಾಥರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಇಂದು ವಿವಿಯ ಅಧಿಕಾರಿಗಳು ತಾರಾನಾಥ್ ಅವರ ನಿವಾಸಕ್ಕೆ ಬಂದು ಪದವಿ ಪ್ರದಾನ ಮಾಡಿ ಗೌರವಿಸಿದರು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಬಳಿಕ ಪಂ.ರಾಜೀವ ತಾರಾನಾಥ್ ಮಾತನಾಡಿ, ಬೆಳಗಾವಿಯ ರಾಣ ಚೆನ್ನಮ್ಮ ವಿವಿ ಪ್ರೀತಿಯಿಂದ ತಮ್ಮನ್ನು ನೆನಪಿಸಿ ಕೊಂಡಿದೆ. ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ದ್ದಾರೆ. ನೀವು ಕೊಟ್ಟ ಪ್ರೀತಿಯನ್ನು ಏಕೆ ಮರಳಿ ಕೊಡಲಿ, ಇದಕ್ಕಾಗಿ ನಾನು ಬಹಳ ಅಭಾರಿಯಾಗಿ ದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಗೀತದಲ್ಲಿ ನಾನೊಬ್ಬ ಶಿಷ್ಯ. ನನ್ನ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್. ಅವರೇ ನನ್ನ ದೇವರು ಹಾಗೂ ಗುರುಗಳು. ಕೆಲವರು ದೇವರು ಹೃದಯ ಲ್ಲಿದ್ದಾನೆ ಎನ್ನುತ್ತಾರೆ. ಆದರೆ ಯಾವಾಗಲೂ ನನ್ನ ೩ ಬೆರಳಿನ ತುದಿಯಲ್ಲಿ ದೇವರು ಕುಳಿತಿರುತ್ತಾರೆ. ಉತ್ತಮವಾಗಿ ಸರೋದ್ ನುಡಿಸಿದರೆ ನನ್ನ ಬೆರಳಲ್ಲೇ ಇವರು ಇರುತ್ತಾರೆ. ಇಲ್ಲದಿದ್ದರೆ ಹೊರಟು ಹೋಗು ತ್ತಾರೆ ಎಂದು ಗುರುಗಳನ್ನು ಸ್ಮರಿಸಿದರು.

ಕರ್ನಾಟಕ ಬಹಳಷ್ಟು ಪ್ರೀತಿ ಕೊಟ್ಟಿದೆ. ಟೀಕೆ, ಬೈಯು ವುದನ್ನು ಹೊಟ್ಟೆಗೆ ಹಾಕಿಕೊಂಡು ಹೂವಿನ ಹಾರ ಹಾಕಿ ಸನ್ಮಾನಿಸಿದ್ದಾರೆ. ಸರೋದ್ ಸಂಗೀತವನ್ನು ಪ್ರೀತಿ ಸಿದ್ದಾರೆ. ಇಂದು ನನ್ನ ಮನೆಗೆ ಬೆಳಗಾವಿಯ ರಾಣ ಚನ್ನಮ್ಮ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಿಲರ್ ಹಾಗೂ ಇನ್ನಿತರರು ಬಂದಿದ್ದಾರೆ. ನಾನು ಕುಲಪತಿ ಎನ್ನುವು ದಿಲ್ಲ. ಕುಲಪತಿ ಅನ್ನುವುದು ಕನ್ನಡ ಪದವಲ್ಲ. ಹಾಗಾ ಗಿಯೇ ನಾನು ವೈಸ್ ಛಾನ್ಸಲರ್ ಅನ್ನುತ್ತೇನೆ. ಕನ್ನಡ ವಲ್ಲದ ಭಾಷೆ ಬಳಸಬೇಕೆ? ರಾಣ ಚನ್ನಮ್ಮ ಅನ್ನು ವುದು ಕನ್ನಡ. ಶುದ್ಧ ಕನ್ನಡ ಎಂದು ಕನ್ನಡಾಭಿ ಮಾನ ಪ್ರದರ್ಶಿಸಿದರು.

ರಾಣ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ರಾಮಚAದ್ರ ಗೌಡ ಮಾತನಾಡಿ, ೯ನೇ ಘಟಿಕೋತ್ಸವದಲ್ಲಿ ರಾಜೀವ ತಾರಾನಾಥ್ ಅವರಿಗೆ ಗೌರವ ಡಾಕ್ಟರೇಟ್ ಕೊಡುವ ಮೂಲಕ ವಿವಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ವಿಶ್ವವಿದ್ಯಾ ನಿಲ ಯದ ಇತಿಹಾಸದಲ್ಲಿ ಗೌರವ ಡಾಕ್ಟರೇಟ್‌ಗೆ ಶಿಫಾರಸ್ಸು ಮಾಡಿದ ಮೂವರು ಹೆಸರುಗಳಿಗೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಮೊದಲು. ಘಟಿಕೋತ್ಸವಕ್ಕೆ ಬರಲಾಗದ ಹಿನ್ನೆಲೆಯಲ್ಲಿ ರಾಜೀವ ತಾರಾನಾಥರ ಮನೆಗೆ ಬಂದು ಸನ್ಮಾನಿಸುತ್ತಿದ್ದೇವೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪಂಡಿತ್ ಇಂದೂಧರ ನಿರೋಡಿ, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಾಗೇಶ್ ವಿ.ಬೆಟ್ಟ ಕೋಟೆ, ಕುಲಸಚಿವ ಡಾ. ದೇವರಾಜ್, ರಾಣ ಚನ್ನಮ್ಮ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಮೌಲ್ಯಮಾಪನ ಕುಲ ಸಚಿವ ಪ್ರೊ. ವೀರನಗೌಡ ಬಿ.ಪಾಟೀಲ, ಸಿಂಡಿಕೇಟ್ ಸದಸ್ಯ ಶ್ರೀನಿವಾಸ ಶಾಸ್ತಿç, ಪ್ರೊ. ಶ್ರೀನಾಥ್, ಧ್ವನ್ಯಲೋಕದ ನಿರ್ದೇಶಕ ಪ್ರೊ. ಶ್ರೀನಾಥ್, ಲೇಖಕ ಪ್ರೊ. ಕೃಷ್ಣಮೂರ್ತಿ ಚಂದರ್, ಪ್ರೊ. ಕೃಷ್ಣಾ ಮನವಳ್ಳಿ, ಪತ್ರಕರ್ತ ಗಣೇಶ ಅಮೀನಗಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

 

Translate »