ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆ: T ಸೂತ್ರ ಪಾಲಿಸಿ
ಮೈಸೂರು

ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆ: T ಸೂತ್ರ ಪಾಲಿಸಿ

April 28, 2022

ಬೆಂಗಳೂರು, ಏ.೨೭(ಕೆಎಂಶಿ)- ಕೋವಿಡ್ ನಾಲ್ಕನೇ ಅಲೆ ಹಿನ್ನೆಲೆಯಲ್ಲಿ ಅನಗತ್ಯ ನಿರ್ಬಂಧಗಳನ್ನು ಹೇರದೆ ಆರ್ಥಿಕ ಚಟುವಟಿಕೆ ಸಹಜ ಸ್ಥಿತಿ ಯಲ್ಲಿರುವಂತೆ ನೋಡಿ ಕೊಳ್ಳಬೇಕು. ಮೇಲಾಗಿ ಟೆಸ್ಟಿಂಗ್, ಟ್ರಾö್ಯಕಿಂಗ್, ಟ್ರೀಟ್‌ಮೆಂಟ್-`ಖಿ’ ಸೂತ್ರ ಪಾಲಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.

ಬುಧವಾರ ವಿಡಿಯೊ ಸಂವಾದದ ಮೂಲಕ ಕೋವಿಡ್ ೪ನೇ ಅಲೆಗೆ ಸಂಬA ಧಿಸಿದಂತೆ ಕೈಗೊಳ್ಳಬೇಕಾದ ಕ್ರಮ ಮತ್ತು ಎಚ್ಚರಿಕೆಗಳ ಬಗ್ಗೆ ವಿವರ ನೀಡಿದ ಪ್ರಧಾನಿ ಅವರು, ಮೂರು ಅಲೆಯನ್ನು ಗೆದ್ದಿದ್ದೇವೆ, ೪ನೇ ಅಲೆಯನ್ನೂ ಗೆಲ್ಲೋಣ, ಇದಕ್ಕೆ ಜನರ ಸಹಕಾರ ಮುಖ್ಯ ಎಂದಿದ್ದಾರೆ. ಪ್ರಧಾನಿ ಜೊತೆಗಿನ ಸಂವಾದದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಲ್ಲದೆ, ಕೇಂದ್ರ ಜಾರಿಗೊಳಿಸಿರುವ ಕೋವಿಡ್ ನಿಯಮಾವಳಿ ಗಳನ್ನು ತಪ್ಪದೇ ಪಾಲಿಸಬೇಕು ಎಂದಿದ್ದಾರೆ.

ನಿಮಗೆ ತುಂಬಾ ಅಗತ್ಯ ಕಂಡುಬAದಲ್ಲಿ ಮಾತ್ರ ಸಾಮಾನ್ಯ ಜನಜೀವನಕ್ಕೆ ತೊಂದರೆ ಯಾಗದಂತೆ ಕಠಿಣ ತೀರ್ಮಾನ ಕೈಗೊಳ್ಳಿ ಅನಗತ್ಯ ನಿರ್ಬಂಧಗಳನ್ನು ಹೇರಬೇಡಿ ಎಂದು ಪ್ರಧಾನಿ ಸೂಚಿಸಿದ್ದಾರೆ. ಅಲೆಯ ಪ್ರಾರಂಭದಲ್ಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ, ನಿಮಗೆ ಹಿಂದಿನ ಮೂರು ಅಲೆಗಳ ಅನುಭವವಿದೆ. ವ್ಯಾಪಕ ವಾಗಿ ಲಸಿಕೆ ನೀಡಿದ್ದರಿಂದ ಮೂರನೇ ಅಲೆಯನ್ನು ಸಮರ್ಪಕ ವಾಗಿ ಎದುರಿಸಿದ್ದೇವೆ ಎಂದಿದ್ದಾರೆ. ಈಗಲೂ ೬ರಿಂದ ೧೨ ವರ್ಷದ ಮಕ್ಕಳಿಗೆ ಶಾಲೆಯಲ್ಲೇ ಲಸಿಕೆ ಕೊಡಿಸಿ, ೧೫ರಿಂದ ೧೮ ಮತ್ತು ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದಿ ದ್ದಾರೆ. ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳ ಮೂಲಸೌಲಭ್ಯಗಳ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ, ಈ ಹಿಂದಿನ ಟಿ-ತ್ರೀ ಸೂತ್ರವನ್ನು ಮುಂದುವರೆಸಿ ಎಂದಿದ್ದಾರೆ. ಪ್ರಧಾನಿ ಅವರ ಸಲಹೆಯನ್ನು ರಾಜ್ಯ ಸರ್ಕಾರ ಪಾಲಿಸುವುದಾಗಿ ತಿಳಿಸಿದ ಬೊಮ್ಮಾಯಿ, ನಾಲ್ಕನೇ ಅಲೆ ಎದುರಿಸಲು ರಾಜ್ಯ ಏನು ಸಿದ್ಧತೆ ಮಾಡಿ ಕೊಂಡಿದೆ ಎಂಬುದನ್ನು ತಿಳಿಸಿದ್ದೇವೆ ಎಂದರು. ಪ್ರಧಾನಮಂತ್ರಿಗಳಿಗೆ ರಾಜ್ಯದ ಸ್ಥಿತಿಗತಿಗಳ ವಿವರ ನೀಡಿದ್ದೇವೆ, ೪ನೇ ಅಲೆಯ ಸೋಂಕು ಬೆಂಗಳೂರಿನಲ್ಲಿ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೇವೆ. ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲಾಗುವುದು, ಬೆಂಗಳೂರಿನಲ್ಲಿ ಪ್ರತಿದಿನ ೧೦,೦೦೦ ರಾಜ್ಯದ ಉಳಿದೆಡೆ ೨೦,೦೦೦ ಮಂದಿಗೆ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಎಲ್ಲಾ ಮುನ್ನೆಚ್ಚರಿಕೆಗಳ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ೫೦,೦೦೦ ಬೆಡ್‌ಗಳಿವೆ, ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ಬೆಡ್‌ಗಳಿವೆ ಮತ್ತು ೬೦,೦೦೦ ಟನ್ ಆಕ್ಸಿಜನ್ ಸಂಗ್ರಹ ಇದೆ. ಇನ್ನೂ ಹೆಚ್ಚುವರಿಯಾಗಿ ರಾಜ್ಯದಲ್ಲಿ ೧೧೦೦ ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಎಲ್ಲ ಹಂತದ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು, ಖಾಸಗಿ ಆಸ್ಪತ್ರೆಗಳ ಆಡಿಟ್ ಮಾಡಿಸಬೇಕು ಎಂಬ ಪ್ರಧಾನಿಗಳ ಸೂಚನೆ ಪಾಲಿಸಲಾಗುತ್ತಿದೆ. ಮೂರು ಅಲೆಗಳ ನಂತರ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ, ಇದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳ ಬೇಕಿದೆ, ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವ ಅಗತ್ಯವಿದೆ ಎಂದರು. ಮುಖ್ಯಮಂತ್ರಿ ಬೊಮ್ಮಾಯಿ ಇಂದು ಮಂಗಳೂರಿಗೆ ಪ್ರಯಾಣ ಸಬೇಕಿದ್ದ ವಿಮಾನ ಹಾರಾಟ ತಡವಾದ್ದರಿಂದ ಮಂಗಳೂರು ಭೇಟಿ ರದ್ದಾಗಿದ್ದು, ಕೋವಿಡ್‌ಗೆ ಸಂಬAಧಿಸಿದAತೆ ಪ್ರಧಾನಿ ಮೋದಿ ಅವರೊಂದಿಗೆ ಬೆಂಗಳೂರಿನಿAದಲೇ ವಿಡಿಯೊ ಸಂವಾದದಲ್ಲಿ ಭಾಗಿಯಾದರು. ಈ ಮೊದಲು ಮುಖ್ಯಮಂತ್ರಿ ಅವರು, ಪ್ರಧಾನಿಗಳ ವಿಡಿಯೊ ಸಂವಾದದಲ್ಲಿ ಮಂಗಳೂರಿನಿAದಲೇ ಪಾಲ್ಗೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು.

ಪಡಿತರದಲ್ಲಿ ಸಿರಿಧಾನ್ಯ
ಬೆಂಗಳೂರು,ಏ.೨೭(ಕೆಎAಶಿ)-ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆಯಡಿ ಅಕ್ಕಿಯ ಜತೆ ಸಿರಿಧಾನ್ಯ, ಜೋಳ ಮತ್ತು ರಾಗಿ ಯನ್ನು ಸಮ ಪ್ರಮಾಣದಲ್ಲಿ ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಉಚಿತವಾಗಿ ನೀಡುವ ಆಹಾರ ಧಾನ್ಯಗಳಲ್ಲಿ ಶೇ.೫೦ರಷ್ಟು ಅಕ್ಕಿ, ಉಳಿದ ಶೇ.೫೦ ರಷ್ಟು ರಾಗಿ ಅಥವಾ ಜೋಳನೀಡಲು ಮುಂದಾಗಿದೆ. ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಸೇರಿದಂತೆ ಪ್ರತಿ ಯೂನಿಟ್‌ಗೆ ೬ ಕೆ.ಜಿ. ಆಹಾರ ಧಾನ್ಯವನ್ನು ಮಾಸಿಕವಾಗಿ ನೀಡುತ್ತಿದೆ. ಇದರೊಂದಿಗೆ ಪ್ರಧಾನಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಮಾಸಿಕ ಪ್ರತಿ ಯೂನಿಟ್‌ಗೆ ೫ ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ಹಾಗೂ ತಜ್ಞರ ಸಲಹೆಯಂತೆ ಕೇಂದ್ರ ನೀಡುವ ಪಡಿತರ ಕೋಟಾದಲ್ಲಿ ಪೂರ್ಣವಾಗಿ ಅಕ್ಕಿ ನೀಡಿ ರಾಜ್ಯದ ಕೋಟಾದಲ್ಲಿ ಸಿರಿಧಾನ್ಯಗಳನ್ನು ನೀಡಲು ಉದ್ದೇಶಿಸಲಾಗಿದೆ. ಕೋವಿಡ್ ಸಂಕಷ್ಟದಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂದು ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿ ಗಾಗಿ ಪ್ರಧಾನಿ ಅವರು ಗರೀಬ್ ಕಲ್ಯಾಣ ಯೋಜನೆ ಜಾರಿಗೆ ತಂದರು. ಕೋವಿಡ್ ಹತೋಟಿಗೆ ಬಂದ ನಂತರವೂ ಯೋಜನೆಯನ್ನು ಪ್ರಧಾನಿ ಅವರು ಮುಂದುವರೆಸಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಅಕ್ಕಿ ಜೊತೆ ರಾಗಿ ಮಾತ್ರವಲ್ಲದೆ ಸಜ್ಜೆ, ನವಣೆ ಸೇರಿದಂತೆ ಸಿರಿಧಾನ್ಯಗಳನ್ನು ನೀಡುವುದು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ, ಗೋಧಿ ಜೊತೆ ಜೋಳವನ್ನು ಒದಗಿಸುವುದು ಸೂಕ್ತ ಎಂಬುದು ತಜ್ಞರ ವಾದ. ಈ ಮಧ್ಯೆ ದೇಶದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಆಹಾರಧಾನ್ಯಗಳ ಬಂಪರ್ ಉತ್ಪಾದನೆಯಾಗಿದ್ದು ಗೋದಾಮುಗಳಲ್ಲಿ ದಾಸ್ತಾನು ಮಾಡಲೂ ಕಷ್ಟಪಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಂಗ್ರಹ ಸಾಮರ್ಥ್ಯಕ್ಕೂ ಹೆಚ್ಚಿನ ಆಹಾರಧಾನ್ಯಗಳನ್ನು ದೇಶೀಯವಾಗಿ ಜನರಿಗೆ ಒದಗಿಸುವುದು ಸೂಕ್ತ ಮತ್ತು ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮಗಳ ಅಳವಡಿಕೆಯೂ ಸೂಕ್ತ ಎಂದು ತಜ್ಞರು ವರದಿ ನೀಡಿದ್ದಾರೆ.

ಅಕ್ಕಿ ಜೊತೆಗೆ ರಾಗಿ, ಜೋಳ ಮತ್ತು ಸಿರಿಧಾನ್ಯಗಳನ್ನು ಸಮಪ್ರಮಾಣದಲ್ಲಿ ನೀಡುವ ಕಾರ್ಯಕ್ರಮವನ್ನು ಪ್ರತಿಪಕ್ಷ ಕಾಂಗ್ರೆಸ್ ರಾಜಕೀಯ ಲಾಭಕ್ಕೆ ಬಳಸಿಕೊಂಡರೆ ಸರ್ಕಾರಕ್ಕೆ ಅನಗತ್ಯ ಕಿರಿಕಿರಿ ಎದುರಾಗುವ ಸಾಧ್ಯತೆ ಇದೆ ಎಂದು ಬಸಬರಾಜ ಬೊಮ್ಮಾಯಿ ಆತಂಕ ವ್ಯಕ್ತಪಡಿಸಿದ್ದು, ತಜ್ಞರ ವರದಿಯನ್ನು ಪರಿಶೀಲಿಸುವ ಭರವಸೆ ನೀಡಿದ್ದಾರೆ.

Translate »