ಬಾಲಕನಿಗೆ ಯಶಸ್ವಿ ಲಿವರ್ ಟ್ರಾನ್ಸ್ ಪ್ಲಾಂಟೇಶನ್
ಮೈಸೂರು

ಬಾಲಕನಿಗೆ ಯಶಸ್ವಿ ಲಿವರ್ ಟ್ರಾನ್ಸ್ ಪ್ಲಾಂಟೇಶನ್

April 29, 2022

ಯಶಸ್ವಿ ೫೦ ಶಸ್ತçಚಿಕಿತ್ಸೆ: ಅಪೋಲೊ ಬಿಜಿಎಸ್ ಆಸ್ಪತ್ರೆ ಹೆಗ್ಗಳಿಕೆ

ಯಶಸ್ವಿ ಶಸ್ತçಚಿಕಿತ್ಸೆ ನಂತರ ಕೇಕ್ ಕತ್ತರಿಸಿ ಸಂಭ್ರಮಿಸಿದ ವೈದ್ಯರು, ಸಿಬ್ಬಂದಿವರ್ಗ
ಮೈಸೂರು, ಏ.೨೮- ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆ, ಮೊದಲ ಪೀಡಿಯಾ ಟ್ರಿಕ್ ಮತ್ತು ಸ್ಪಿ÷್ಲಟ್ ಲಿವರ್ ಟ್ರಾನ್ಸ್ಪ್ಲಾಂಟೇ ಶನ್ ಅನ್ನು ಯಶಸ್ವಿಯಾಗಿ ನೆರವೇರಿಸಿದೆ.

ನಗರದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಯಕೃತ್ತಿನ ಕಸಿ ಚಿಕಿತ್ಸೆಯನ್ನು ಯಶಸ್ವಿ ಯಾಗಿ ನಡೆಸಿ ಸಾಧಿಸಿರುವ ಕೀರ್ತಿಗೆ ಅಪೋಲೊ ಬಿಜಿಎಸ್ ಆಸ್ಪತ್ರೆಯ ಶಸ್ತçಚಿಕಿತ್ಸಾ ಕಸಿ ತಂಡ ಪಾತ್ರವಾಗಿದೆ. ಪೂರ್ಣ ಪ್ರಮಾಣದ ಯಕೃತ್ತು ವೈಫಲ್ಯದಿಂದ ಬಳಲುತ್ತಿದ್ದ ೯ ವರ್ಷದ ಬಾಲಕನಿಗೆ ಯಶಸ್ವೀ ಕಸಿ ಚಿಕಿತ್ಸೆ ನೀಡುವ ಮೂಲಕ ಬಾಲಕನಿಗೆ ಮರುಜೀವ ನೀಡಿರುವ ತಂಡ, ಈ ಮೂಲಕ ದೀರ್ಘಕಾಲೀನ ಯಕೃತ್ತಿನ ಕಾಯಿಲೆ ರೋಗಿಗಳಿಗೆ ಭರವಸೆಯ ಕಿರಣ ಮೂಡಿಸಿದೆ.

ಮಕ್ಕಳ ಮೊದಲ ಯಕೃತ್ತು ಕಸಿ ಮಾತ್ರವಲ್ಲದೆ ತೀವ್ರವಾದ ಪಿತ್ತಜನಕಾಂಗದ ವೈಫಲ್ಯಕ್ಕೆ ನಡೆಸಿದ ಹಾಗೂ ಒಬ್ಬರೇ ದಾನಿಯಿಂದ ಎರಡು ಜೀವಗಳನ್ನು ಉಳಿಸಿದ ಮೊದಲ ವಿಭಜಿತ ಯಕೃತ್ತಿನ ಕಸಿ ಎನ್ನುವುದು ವಿಶೇಷ. ಈ ಹೆಗ್ಗ ಳಿಕೆಯೊಂದಿಗೆ ಅಪೋಲೊ ಬಿಜಿಎಸ್ ಆಸ್ಪತ್ರೆ, ಈವರೆಗೆ ೫೦ ಯಕೃತ್ತು ಕಸಿಯನ್ನು ಯಶಸ್ವಿಯಾಗಿ ಪೂರೈಸಿದೆ. ಮಕ್ಕಳ ಗ್ಯಾಸ್ಟೊçÃಎಂಟರಾಲಜಿಸ್ಟ್ ಡಾ.ಅತಿರಾ ರವೀಂದ್ರನಾಥ್, ಲಿವರ್ ಕಸಿ ಶಸ್ತçಚಿಕಿತ್ಸಕ ರಾದ ಡಾ.ಯಶವಂತ್ ಕುಮಾರ್, ಡಾ.ಸುರೇಶ್ ರಾಘವಯ್ಯ, ಡಾ.ಜಯಂತ್ ರೆಡ್ಡಿ, ಡಾ.ರಾಜೇಗೌಡ, ಡಾ.ಸಂಜಯ್ ಗೋವಿಲ್, ಕಸಿ ಅರಿವಳಿಕೆ ತಜ್ಞರಾದ ಡಾ.ನಾಗೇಶ್ ಡಾ.ಅನಿಂದಿತಾ ತಂಡ, ಬಾಲಕನಿಗೆ ಪುನರ್ಜನ್ಮ ನೀಡಿದೆ.

ಯಕೃತ್ತು ಕಸಿಗೊಳಗಾದ ಬಾಲಕ ಕೆಲ ದಿನಗಳ ಹಿಂದೆ ಜಾಂಡೀಸ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಆತನಿಗೆ ಯಕೃತ್ತು ವೈಫಲ್ಯವಿರುವುದು ಕಂಡು ಬಂದಿತ್ತಲ್ಲದೆ ತುರ್ತು ಯಕೃತ್ತಿನ ಕಸಿ ಅಗತ್ಯವಿತ್ತು. ಈ ವಿಚಾರವನ್ನು ಕುಟುಂಬದವರಿಗೆ ತಿಳಿಸಿ ಬಾಲಕನನ್ನು ರಾಜ್ಯ ಕಸಿ ಕಾರ್ಯಕ್ರಮ ಸುಪ್ರಾ-ತುರ್ತು ವಿಭಾಗದ ಅಡಿಯಲ್ಲಿ ನೋಂದಾಯಿಸ ಲಾಯಿತು. ಈ ನಡುವೆ ಆತನ ಸ್ಥಿತಿ ಮತ್ತಷ್ಟು ಗಂಭೀರವಾಗಿ ಕೋಮಾಕ್ಕೆ ಜಾರಿದ್ದ. ಜೀವನ್ಮರಣ ಸ್ಥಿತಿಯಲ್ಲಿದ್ದ ಬಾಲಕನಿಗೆ ಅದೃಷ್ಟವಶಾತ್ ಆತನಿಗೆ ಹೊಂದಾಣ ಕೆಯಾಗುವ ಅಂಗಾAಗ ಸಿಕ್ಕಿತು. ಕೂಡಲೇ ಕ್ರಮ ವಹಿಸಿ ಮಗುವಿಗೆ ಯಕೃತ್ತಿನ ಒಂದು ಭಾಗವಷ್ಟೇ ಸಾಕಾಗಿ ತ್ತಾದ್ದರಿಂದ ವಿಭಜಿತ ಯಕೃತ್ತಿನ ಕಸಿ ಮಾಡಲಾಯಿತು. ಉಳಿದರ್ಧ ಯಕೃತ್ತನ್ನು ಮತ್ತೋರ್ವ ವಯಸ್ಕ ರೋಗಿಗೆ ಕಸಿ ಮಾಡಲಾಯಿತು. ಶಸ್ತçಚಿಕಿತ್ಸೆ ನಂತರ ಬಾಲಕನು ಕೋಮಾದಿಂದ ಹೊರಬಂದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಆಸ್ಪತ್ರೆಯ ಉಪಾಧ್ಯಕ್ಷರೂ ಆದ ಘಟಕದ ಮುಖ್ಯಸ್ಥ ಭರತೀಶ ರೆಡ್ಡಿ ಮಾತನಾಡಿ, ನಾವು ಪ್ರಪಂಚದ ಹೆಸರಾಂತ ಸಂಸ್ಥೆಗಳಿAದ ಅನುಭವ ಗಳನ್ನು ಪಡೆದ ಹೆಚ್ಚು ನುರಿತ ಕಸಿ ತಜ್ಞರ ತಂಡವನ್ನು ಹೊಂದಿದ್ದು, ಪ್ರತಿದಿನ ಶಸ್ತçಚಿಕಿತ್ಸೆಗಳನ್ನು ನಡೆಸಿ ಉತ್ತಮ ಫಲಿತಾಂಶ ನೀಡಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಅಂಗಾAಗ ಕಸಿಯಲ್ಲಿ ಗಮನಾರ್ಹ ಸುಧಾರಣೆಗೆ ಕಾರಣ ವಾಗಿರುವ ಈ ಎಲ್ಲ ವೈದ್ಯರ ಸಮರ್ಪಣೆ ಮತ್ತು ಸಮಯೋಚಿತ ಸಮನ್ವಯವನ್ನು ಶ್ಲಾಘಿಸುತ್ತೇನೆ ಎಂದಿದ್ದಾರೆ. ಆಸ್ಪತ್ರೆಯ ಗ್ಯಾಸ್ಟೊçÃಎಂಟರಾಲಜಿಸ್ಟ್ ಮತ್ತು ಇನ್ಸಿ÷್ಟ ಟ್ಯೂಟ್ ಆಫ್ ಗ್ಯಾಸ್ಟೊçÃಸೈನ್ಸ÷್ನನ ಮುಖ್ಯಸ್ಥ ಡಾ.ರಾಜ್‌ಕುಮಾರ್ ಪಿ.ವಾಧ್ವಾ ಅವರೂ ವೈದ್ಯ ತಂಡದ ಸಾಧನೆಯನ್ನು ಪ್ರಶಂಸಿಸಿದ್ದಾರೆ.

ಮೈಸೂರಿನ ಅಪೋಲೊ ಬಿಜಿಎಸ್ ಆಸ್ಪತ್ರೆಗೆ ೨೦೧೭ರಲ್ಲಿ ಲಿವರ್ ಟ್ರಾನ್ಸ್ಪ್ಲಾಂಟ್ ಪರವಾನಗಿ ಹಾಗೂ ೨೦೨೦ರಲ್ಲಿ ಮಲ್ಟಿ ಆರ್ಗನ್ ಟ್ರಾನ್ಸ್ಪ್ಲಾಂಟ್ ಪರವಾನಗಿ ಸಿಕ್ಕಿದ್ದು, ಈ ಭಾಗದಲ್ಲಿ ಅಂಗ ಕಸಿ ಕೇಂದ್ರ (ಔಖಿಅ) ಪರವಾನಗಿ ಪಡೆದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ.

 

Translate »