ಮೇಕೆದಾಟು ಯಾತ್ರೆ ಡಿಕೆಶಿ ಬ್ರದರ್ಸ್ ವಾಕಿಂಗ್ ಅಷ್ಟೇ
ಮೈಸೂರು

ಮೇಕೆದಾಟು ಯಾತ್ರೆ ಡಿಕೆಶಿ ಬ್ರದರ್ಸ್ ವಾಕಿಂಗ್ ಅಷ್ಟೇ

March 2, 2022

ಬೆಂಗಳೂರು, ಫೆ. ೨೮(ಕೆಎಂಶಿ)-ಕಾAಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ರಾಜಕೀಯ ಲಾಭದ ಯಾತ್ರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪಾದಯಾತ್ರೆಗೆ ಬಹಳ ಮಹತ್ವ ನೀಡುವ ಅವಶ್ಯಕತೆ ಇಲ್ಲ. ಮೇಕೆದಾಟು ಯೋಜನೆ ವಸ್ತುಸ್ಥಿತಿಯ ಅರಿವಿದ್ದರೂ ರಾಜಕೀಯ ಲಾಭಕ್ಕಾಗಿ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ, ಕಾಂಗ್ರೆಸ್ ಆಡಳಿತವಿದ್ದ ಸಂದರ್ಭದಲ್ಲಿ ಯೋಜನೆಗೆ ಡಿಪಿಆರ್ ಕೂಡ ಸಿದ್ಧಪಡಿಸಲು ಸಾಧ್ಯವಾಗಲಿಲ್ಲ. ಈ ಯೋಜನೆಗೆ ಕಾಂಗ್ರೆಸ್ ಕೊಡುಗೆ ಏನು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ ಎಂದರು.

ಮೇಕೆದಾಟು ಯೋಜನೆ ಹಾಗೂ ಕಳಸಾ ಬಂಡೂರಿ ಯೋಜನೆಗಳಿಂದ ರಾಜ್ಯದ ಜನತೆಗೆ ನೀರು ದೊರೆಯುವಂತಾಗಬೇಕು. ಇದಕ್ಕೆ ಸರ್ಕಾರ ಪೂರಕ ನಿರ್ಣಯಗಳನ್ನು ಕೈಗೊಳ್ಳಲಿದೆ. ಈ ವಿಷಯದಲ್ಲಿ ರಾಜಕಾರಣ ಬೇಡ ಎಂದು ಮುಖ್ಯ ಮಂತ್ರಿ ತಿಳಿಸಿದರು.

ರಾಮನಗರ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಪಾದ ಯಾತ್ರೆ ಕುರಿತು ಪ್ರತಿಕ್ರಿಯಿಸಿ, ಹೇಗಾದರೂ ಮಾಡಿ ರಾಜ್ಯದ ಮುಖ್ಯಮಂತ್ರಿ ಯಾಗ ಬೇಕೆಂಬ ಹುಚ್ಚು ಡಿ.ಕೆ.ಶಿವ ಕುಮಾರ್ ಅವರನ್ನು ಆವರಿಸಿಕೊಂಡಿದೆ. ಇದಕ್ಕಾಗಿ ಅವರು ಸಿದ್ದರಾಮಯ್ಯ ಅವರನ್ನು ಬದಿಗೊತ್ತಲು ಮೇಕೆ ದಾಟು ಯೋಜನೆಯ ಹೆಸರಿನಲ್ಲಿ ಪಾದ ಯಾತ್ರೆಯ ಕಪಟ ನಾಟಕ ಆಡುತ್ತಿದ್ದಾರೆ ಎಂದರು.

ಅವರ ಪಾದಯಾತ್ರೆಯಿಂದ ಕೊನೆಗೆ ಬಿಜೆಪಿಗೇ ಲಾಭವಾಗುತ್ತದೆ, ಶಿವಕುಮಾರ್ ಏಳು ಬಾರಿ ಶಾಸಕರಾಗಿದ್ದಾರೆ ಅವರ ಸಹೋ ದರ ಅನೇಕ ಬಾರಿ ಸಂಸದರಾಗಿದ್ದಾರೆ, ಈಗ ಮೇಕೆದಾಟು ಜಪ ಮಾಡುತ್ತಿ ರುವ ಇವರಿಬ್ಬರೂ ಇಷ್ಟು ವರ್ಷ ಏನನ್ನು ಕಡಿದು ಕಟ್ಟೆ ಹಾಕು ತ್ತಿದ್ದರು ಎಂದು ಪ್ರಶ್ನಿಸಿದರು.

ಜನಪರವಾಗಿ ಕಾಂಗ್ರೆಸ್ ಯಾವತ್ತೂ ಯೋಚಿ ಸುವುದಿಲ್ಲ, ಮೇಕೆದಾಟು ಯೋಜನೆ ಯನ್ನು ಬಿಜೆಪಿ ಸರಕಾರ ಸಮರೋಪಾದಿ ಯಲ್ಲಿ ಕೈಗೆತ್ತಿಕೊಂಡಿದೆ, ಇದನ್ನು ಕಂಡು ಶಿವಕುಮಾರ್ ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಆತಂಕವಾಗಿದೆ. ಅವರ ಪಾದಯಾತ್ರೆ ಕೇವಲ ವಾಕಿಂಗ್ ಆಗಬಹುದೇ ಹೊರತು ಜರ‍್ಯಾರೂ ಅವರೊಂದಿಗೆ ಹೋಗುತ್ತಿಲ್ಲ. ಪಾದ ಯಾತ್ರೆಯಲ್ಲಿ ಅವರೊಂದಿಗೆ ಕಾಣ ಸಿ ಕೊಳ್ಳುತ್ತಿರುವವರು ಕೇವಲ ಭಟ್ಟಂಗಿಗಳು ಎಂದು ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷ ನೀರಿನ ವಿಚಾರದಲ್ಲಿ ರಾಜಕೀಯ ದೊಂಬರಾಟ ಆಡುತ್ತಿದ್ದು, ರಾಜ್ಯದ ಜನರಿಗೆ ದ್ರೋಹವೆಸಗುತ್ತಿದೆ, ನೆಲ-ಜಲದ ವಿಚಾರಗಳಲ್ಲಿ ರಾಜಕೀಯ ಪ್ರೇರಿತ ಹೋರಾಟ ಖಂಡನೀಯ, ೬೦ ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ಗೆ ಮೇಕೆದಾಟು ಯೋಜನೆಗೆ ಕನಿಷ್ಠ ಒಂದು ಡಿಪಿಆರ್ ಸಿದ್ಧಪಡಿಸಲಾಗಲಿಲ್ಲ.
ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರಗಳು ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿವೆ, ತಮಿಳುನಾಡಿನಲ್ಲಿ ಡಿಎಂಕೆ ಜತೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಆ ರಾಜ್ಯ ದಲ್ಲಿ ಸಂಪೂರ್ಣ ಬಹುಮತ ಬಂದು ಯಾವುದೋ ಕಾಲವಾಗಿದೆ. ಇಂತಹ ದುರವಸ್ಥೆಯಲ್ಲಿರುವ ಪಕ್ಷದ ಅಧ್ಯಕ್ಷರು ಮೇಕೆದಾಟು ಯೋಜನೆ ಬಗ್ಗೆ ಮಾತ ನಾಡುತ್ತಿರುವುದು ಹಾಸ್ಯಾಸ್ಪದ ಎಂದರು.
ಉಕ್ರೇನ್‌ನಿAದ ವಾಪಸಾದವರ ಶಿಕ್ಷಣಕ್ಕೆ ನೆರವು: ಉಕ್ರೇನ್‌ನಿಂದ ರಾಜ್ಯಕ್ಕೆ ವಾಪಸಾಗುತ್ತಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಲು ರಾಜ್ಯ ಮತ್ತು ಕೇಂದ್ರ ಸರಕಾರಗಳ ಮಟ್ಟದಲ್ಲಿ ಮಾತು ಕತೆ ನಡೆಸಿ, ಸೂಕ್ತ ವ್ಯವಸ್ಥೆಗೆ ಪ್ರಯತ್ನಿ ಸಲಾಗುವುದು ಎಂದು ಅವರು ಭರವಸೆ ನೀಡಿದರು. ಉಕ್ರೇನ್‌ನಿಂದ ವಾಪಸಾಗಿ ರುವ ವಿದ್ಯಾರ್ಥಿಗಳಿಗೆ ಎಂಜಿನಿಯರಿAಗ್ ಮತ್ತು ಪದವಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲು ಅದೇ ವ್ಯವಸ್ಥೆ ಕಲ್ಪಿಸಲು ಕೆಲವು ಮಿತಿಗಳಿವೆ.

ಈ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ, ಇದ ಕ್ಕಾಗಿ ಇನ್ನು ಕೆಲವೇ ದಿನಗಳಲ್ಲಿ ಮಾತುಕತೆ ಪ್ರಕ್ರಿಯೆ ಆರಂಭಿಸಲಾಗುವುದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಾ ಈ ಮಕ್ಕಳ ಬಗ್ಗೆ ಕಳಕಳಿ ಹೊಂದಿದ್ದಾರೆ ಎಂದರು.

 

Translate »