ಬೆಳ್ತಂಗಡಿ ದಿನೇಶ್ ನಾಯಕ್ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ
ಮೈಸೂರು

ಬೆಳ್ತಂಗಡಿ ದಿನೇಶ್ ನಾಯಕ್ ಹತ್ಯೆ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

March 2, 2022

ಮೈಸೂರು,ಫೆ.೨೮(ಎಂಟಿವೈ)- ಧರ್ಮ ಸ್ಥಳದ ಬೆಳ್ತಂಗಡಿ ಬಳಿ ಕನ್ಯಾಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಿನೇಶ್ ನಾಯಕ್ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕರ್ನಾ ಟಕ ದಲಿತ ಸಂಘರ್ಷ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ ದಸಂಸ ಸದ ಸ್ಯರು, ಭಜರಂಗದಳದ ಮುಖಂಡ ಭಾಸ್ಕರ್ ಸಹೋದರ ಕೃಷ್ಣ ಎಂಬುವನು ಕ್ಷುಲ್ಲಕ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಆರೋಪಿಗೆ ಜೀವಾ ವಧಿ ಶಿಕ್ಷೆ ವಿಧಿಸಬೇಕು. ಮೃತನ ಕುಟುಂಬ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗದಲ್ಲಿ ನಡೆದ ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆಗೆ ವೈಯಕ್ತಿಕ ಕಾರಣಗಳು ಮುಖ್ಯವಾಗಿತ್ತೇ ಹೊರತು ಧಾರ್ಮಿಕ ವಿಚಾರಗಳಾಗಲೀ, ಧರ್ಮದ ವಿಚಾರಗಳಾಗಲೀ ಕಾರಣ ವಲ್ಲವೆಂದು ಮೃತನ ಸಂಬAಧಿಯೊಬ್ಬರು ತಿಳಿಸಿದ್ದಾರೆ. ಆದರೆ ಮೃತನ ಶವಯಾತ್ರೆ ಯಲ್ಲಿ ಸಚಿವರು, ಸಂಸದರು ಭಾಗವಹಿಸಿ ಕಾನೂನು ಉಲ್ಲಂಘಿಸಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗವನ್ನುAಟು ಮಾಡಿ ದರು. ಉತ್ತರ ಭಾರತದ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಹೋರಾಟಗಾರರು ಮತ್ತು ಬರಹಗಾರರ ಧ್ವನಿ ಅಡಗಿಸಲು ದೇಶ ದ್ರೋಹದ ಸುಮೊಟೊ, ಕಾಯಿದೆಗಳನ್ನು ದುರುಪಯೋಗಪಡಿಸಿಕೊಂಡ ಪೊಲೀ ಸರು ಸರ್ಕಾರದ ಏಜೆಂಟರAತೆ ವರ್ತಿಸುತ್ತಾ ಪ್ರಕರಣಗಳನ್ನು ದಾಖಲಿಸಿ, ಬಂಧಿಸು ತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಚೋದನಕಾರಿ ಹೇಳಿಕೆಗಳ ಮೂಲಕ ಸಮಾಜದ ಸ್ವಾಸ್ಥ÷್ಯವನ್ನು ಹದಗೆಡಿ ಸುತ್ತಿರುವ ಕೆ.ಎಸ್.ಈಶ್ವರಪ್ಪ, ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್ ಅವ ರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ನಟ ಚೇತನ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೈಬಿಡ ಬೇಕು. ಶಿವಮೊಗ್ಗದಲ್ಲಿ ಹಿಂದೂಪರ ಸಂಘ ಟನೆಗಳಿಂದ ನಷ್ಟಕ್ಕೊಳಗಾಗಿರುವ ಮುಸ್ಲಿಂ ರಿಗೆ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಚೋರನಹಳ್ಳಿ ಶಿವಣ್ಣ, ಬನ್ನಹಳ್ಳಿ ಸೋಮಣ್ಣ, ದೊಡ್ಡಸಿದ್ದು ಹಾದ ನೂರು, ಪುಟ್ಟಲಕ್ಷ÷್ಮಮ್ಮ, ವಸಂತ ಹೊನ್ನೇ ನಹಳ್ಳಿ, ಡಾ.ಶಿವಕುಮಾರ್, ಕಳ್ಳಿಮುದ್ದನ ಹಳ್ಳಿ ಚಂದ್ರು, ಚಾಮರಾಜು ಇಲವಾಲ, ಬಸವರಾಜು ದೇವರಸಹಳ್ಳಿ, ಗಂಗಾಧರ್ ಹೈವೇ, ನಾಗರಾಜು ವಾಟಾಳ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

 

Translate »