ರಾಜಕೀಯ ಅಕಾಡೆಮಿ ಸ್ಥಾಪಿಸಿ: ವಿಶ್ವನಾಥ್ ಸಲಹೆ
ಮೈಸೂರು

ರಾಜಕೀಯ ಅಕಾಡೆಮಿ ಸ್ಥಾಪಿಸಿ: ವಿಶ್ವನಾಥ್ ಸಲಹೆ

March 2, 2022

ಮೈಸೂರು, ಫೆ.೨೮(ಎಸ್‌ಪಿಎನ್)- ಹಿರಿಯ ಲೇಖಕ ಪ್ರೊ.ಎ.ರಂಗಸ್ವಾಮಿ ವಿರಚಿತ `ಲೌಕಿಕ ಶಾಸ್ತç ಸಾಹಿತ್ಯ’, `ಸಮದರ್ಶಿ’, `ವಿನ್ಯಾಸ’, `ಚಾವುಂಡರಾಯನ ಲೋಕೋಪಕಾರ ಮತ್ತು `ದೂರ ಶಿಕ್ಷಣ’ ಸೇರಿದಂತೆ ಐದು ಕೃತಿಗಳನ್ನು ಮೈಸೂರು -ಹುಣಸೂರು ರಸ್ತೆಯ ರಾಣ ಬಹ ದ್ದೂರ್ ಸಭಾಂಗಣದಲ್ಲಿ ಮಂಡ್ಯದ ಕರ್ನಾಟಕ ಸಂಘ, ಮೈಸೂರಿನ ಸಂವ ಹನ ಪ್ರಕಾಶನ ಹಾಗೂ ದರ್ಶನಕೀರ್ತಿ ಪ್ರಕಾಶನ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಭಾನುವಾರ ಬಿಡುಗಡೆಗೊಳಿಸಿದರು.

ರಾಜಕೀಯ ಅಕಾಡೆಮಿ ಸ್ಥಾಪಿಸಿ: ನಂತರ ಮಾತನಾಡಿದ ಎ.ಎಚ್.ವಿಶ್ವನಾಥ್, ಸಾಹಿತ್ಯ ಕ್ಷೇತ್ರದಲ್ಲಿ ರಾಜಕಾರಣವನ್ನು ಗಂಭೀರವಾಗಿ ಯಾರೂ ಪರಿಗಣ ಸಿಲ್ಲ. ಬೇರೆ ದೇಶಗಳಲ್ಲಿ ರಾಜಕೀಯ ಕ್ಷೇತ್ರವನ್ನು ಗಂಭೀರವಾಗಿ ಪರಿಗಣ ಸಿ ಅಲ್ಲಿನ ಸರ್ಕಾರ ಗಳು ಅಕಾಡೆಮಿಗಳನ್ನು ಸ್ಥಾಪಿಸಿವೆ. ಈ ಮುಖಾಂತರ ರಾಜಕಾರಣವನ್ನು ವಿದೇಶ ಗಳು ಗಂಭೀರವಾಗಿ ಪರಿಗಣ ಸಿವೆ. ಆದರೆ, ನಮ್ಮ ದೇಶದಲ್ಲಿ ರಾಜಕಾರಣ ವನ್ನು ಜನಪ್ರತಿನಿಧಿಗಳು, ಸಾರ್ವಜನಿಕರು ಗಂಭೀರವಾಗಿ ಪರಿಗಣ ಸುವುದು ಯಾವಾಗ? ಎಂದು ಪ್ರಶ್ನಿಸಿದರಲ್ಲದೆ, ನಮ್ಮ ರಾಜ್ಯದಲ್ಲೂ ರಾಜಕಾರಣ ಅಧ್ಯಯನಕ್ಕೆ ಅಕಾಡೆಮಿ ಸ್ಥಾಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಾನು ಇಲ್ಲಿಯವರೆಗೆ `ಹಳ್ಳಿಹಕ್ಕಿ’, `ಮತಸಂತೆ’ ಸೇರಿದಂತೆ ೭ ಪುಸ್ತಕಗಳನ್ನು ಬರೆದಿದ್ದೇನೆ. `ಮತಸಂತೆ’ ಪುಸ್ತಕದಲ್ಲಿ ಯಾವ ಯಾವ ದೇಶದಲ್ಲಿ ಯಾವಾಗ ಚುನಾವಣೆ ವ್ಯವಸ್ಥೆ ಆರಂಭವಾದವು ಎಂಬುದರ ಕುರಿತು ಉಲ್ಲೇಖ ಮಾಡಿದ್ದೇನೆ. ಆದರೆ, ಇಂದಿನ ಜನಪ್ರತಿನಿಧಿಗಳಲ್ಲಿ ಬಹುತೇಕರಿಗೆ ನಾವು ಯಾವ ವ್ಯವಸ್ಥೆಯಡಿ ಜನಪ್ರತಿ ಗಳಾಗಿದ್ದೇವೆ ಎಂಬುದು ಗೊತ್ತಿಲ್ಲ. ಓರ್ವ ಜನಪ್ರತಿನಿಧಿಗೆ ಬರೆಯುವ ಹವ್ಯಾಸ ಇರಬೇಕು. ಇದರಿಂದ ರಾಜಕಾರಣದ ಬಗ್ಗೆ ಮುಂದಿನ ಪೀಳಿಗೆಗೆ ಮಾಹಿತಿ ದೊರಕಿದ ಂತಾಗುತ್ತದೆ ಎಂದು ಕಿವಿಮಾತು ಹೇಳಿದರು.

ಜಾತಿ ಬಗ್ಗೆ ಕೇಳಿ: ನಾನು ಸಂಸದ ನಾಗಿದ್ದ ಸಂದರ್ಭದಲ್ಲಿ ಖಾಸಗಿ ಸಂಸ್ಥೆ ಯೊಂದು ಇಲ್ಲಿನ ರಾಜಕಾರಣಗಳಲ್ಲಿ ಯರ‍್ಯಾರು ಸಾಹಿತ್ಯ, ಕಲೆ, ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದರ ಕುರಿತು ಸಮೀಕ್ಷೆ ನಡೆಸಿತ್ತು. ಕರ್ನಾಟಕ ದಲ್ಲಿ ನಾನು, ಬಿ.ಜಯಶ್ರೀ ಹಾಗೂ ಮಾಜಿ ಸಿಎಂ ಎಂ.ವೀರಪ್ಪಮೊಯ್ಲಿ ಮಾತ್ರ ಇತರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೆವು ಎಂಬ ಮಾಹಿತಿ ಬಹಿರಂಗಗೊAಡಿತು. ಈಗಿನ ಜನಪ್ರತಿನಿಧಿಗಳಿಗೆ ನೀನು ಯಾವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಯಾಗಿರುವೆ ಎಂದು ಪ್ರಶ್ನಿಸಿದರೆ, ಇದರ ಬಗ್ಗೆ ಅವರಿಗೆ ಅರಿವಿಲ್ಲ. ಬದಲಾಗಿ ತಮ್ಮ ಜಾತಿ ಬಗ್ಗೆ ಕೇಳಿ ಥಟ್ಟನೆ ಹೇಳುತ್ತಾರೆ. ಇದು ಈ ದೇಶದ ದುರಂತ. ಹಾಗಾಗಿ ಜನರು ಎಲ್ಲಿ ಯವರೆಗೆ ರಾಜಕಾರಣವನ್ನು ಗಂಭೀರವಾಗಿ ಪರಿಗಣ ಸುವುದಿಲ್ಲವೋ ಅಲ್ಲಿಯವರೆಗೆ ಈ ಸಮಸ್ಯೆ ಇರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಪ್ರೊ.ಎನ್.ಎಸ್. ತಾರಾನಾಥ ಅವರು, ಕೃತಿಗಳ ಬಗ್ಗೆ ಪರಿಚಯಿಸುವಾಗ, ಆ ಕ್ಷೇತ್ರದ ಬಗ್ಗೆ ಅವರು ಎಷ್ಟೊಂದು ಅಧ್ಯಯನ ನಡೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುತ್ತದೆ. ಅಂತಹ ಸಭೆಗಳಲ್ಲಿ ರಾಜಕಾರಣ ಗಳು ಭಾಗವಹಿಸ ಬೇಕಾದರೆ, ಇದರ ಕುರಿತು ಸ್ವಲ್ಪವಾದರೂ ತಿಳಿದುಕೊಳ್ಳಬೇಕಲ್ಲವೇ?. ಹಾಗಾಗಿ ಜನಪ್ರತಿನಿಧಿಗಳಿಗೆ ಸಾಹಿತ್ಯ, ಕಲೆ ಹಾಗೂ ಸಾಮಾಜಿಕ ವ್ಯವಸ್ಥೆ ಬಗ್ಗೆ ಅರಿವು ಮೂಡಿ ಸುವ ಅನಿವಾರ್ಯತೆ ಇದೆ ಎಂದರು.

ಲೇಖಕ ಪ್ರೊ.ಎ.ರಂಗಸ್ವಾಮಿ ಅವರು `ಲೌಕಿಕ ಶಾಸ್ತç ಸಾಹಿತ್ಯ, ಸಮದರ್ಶಿ, ವಿನ್ಯಾಸ, ಚಾವುಂಡರಾಯನ ಲೋಕೋಪಕಾರ, `ದೂರ ಶಿಕ್ಷಣ’ ವಿಷಯ ಕುರಿತು ಕೃತಿಗಳನ್ನು ಬರೆದಿದ್ದಾರೆ. ಇದರ ಹಿಂದೆ ಅವರ ಶ್ರಮವಿದೆ. ಸಾಕಷ್ಟು ಅಧ್ಯಯನ ನಡೆಸಿ ಈ ಕೃತಿಗಳನ್ನು ಹೊರತಂದಿದ್ದಾರೆ. ಹಾಗಾಗಿ ಪ್ರೊ.ಎ.ರಂಗಸ್ವಾಮಿ ಅವರು, ಮುಕ್ತ ವಿವಿಯಲ್ಲಿ ಅಧಿಕಾರಕ್ಕೆ ಅಂಟಿ ಕೊಂಡವರಲ್ಲ. ಅವರು ಜ್ಞಾನಕ್ಕೆ, ಅಧ್ಯಯನಕ್ಕೆ ಅಂಟಿಕೊAಡಿದ್ದರಿAದಲೇ ಇಂತಹ ಉತ್ತಮ ಕೃತಿಗಳನ್ನು ಹೊರತರಲು ಸಾಧ್ಯವಾಗಿದೆ ಎಂದರು.
ಪ್ರೊ.ಜಯಪ್ರಕಾಶಗೌಡ ಅವರು ಮಾಹಿತಿ ನೀಡಿದಂತೆ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಒಂದು ಕೋಟಿ ಅನುದಾನವನ್ನು ಮುಕ್ತ ವಿವಿ ಕನ್ನಡ ವಿಭಾಗಕ್ಕೆ ಬಿಡುಗಡೆಗೊಳಿಸಿದ್ದರು. ಆ ಸಮಯದಲ್ಲಿ ಪ್ರಕಟಿಸಬೇಕಿದ್ದ ಪುಸ್ತಕಗಳು ಇನ್ನೂ ಬಿಡುಗಡೆಗೊಂಡಿಲ್ಲ ಎಂಬುದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಶೀಲಿಸುವಂತೆ ಸಂಬAಧಪಟ್ಟರಿಗೆ ತಿಳಿಸುತ್ತೇನೆ ಎಂದು ಭರವಸೆ ನೀಡಿದರು.

ಬಾಂಬೆ ಡೇಸ್ ಪುಸ್ತಕ ಸದ್ಯದಲ್ಲೇ: ಕೆಲವರು ಬಾಂಬೆ ಡೇಸ್ ಪುಸ್ತಕ ಯಾವಾಗ ಬಿಡುಗಡೆಗೊಳಿಸುತ್ತೀರಿ ಎಂದು ಕೇಳುತ್ತಿ ದ್ದಾರೆ. ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಆದರೆ, ಮೂರೂ ರಾಜಕೀಯ ಪಕ್ಷದ ನೇತಾರರು ೨೦೨೩ರ ಚುನಾವಣೆವರೆಗೂ ಪುಸ್ತಕ ಬಿಡುಗಡೆಗೊಳಿಸದಂತೆ ಮನವಿ ಮಾಡಿದ್ದಾರೆ. ಅದರ ಬಗ್ಗೆಯೂ ಚಿಂತಿಸು ತ್ತಿದ್ದೇನೆ. ಆದರೆ, ಪುಸ್ತಕ ಬಿಡುಗಡೆ ಗೊಂಡರೆ ನಮ್ಮ ರಾಜಕೀಯ ಮೇಲಾಟಗಳ ಬಗ್ಗೆ ಹಾಗೂ ಮೂರು ಜನ ಮುಖ್ಯ ಮಂತ್ರಿಗಳ ಬಗ್ಗೆಯೂ ಉಲ್ಲೇಖ ಮಾಡಿ ದ್ದೇನೆ ಎಂದು ಚುಟುಕಾಗಿ ತಿಳಿಸಿದರು.
ಬಿಎಸ್‌ವೈ ಅವಧಿ ಸುಭಿಕ್ಷ ಕಾಲ: ಇದಕ್ಕೂ ಮುನ್ನ ನಿವೃತ್ತ ಪ್ರಾಧ್ಯಾಪಕ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ೨೦೦೮ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಎಲ್ಲಾ ವಿವಿಗಳ ಕನ್ನಡ ವಿಭಾಗಕ್ಕೆ ಒಂದೊAದು ಕೋಟಿ ಅನುದಾನ ನೀಡಿದ್ದರು. ಅದರಂತೆ ಮುಕ್ತ ವಿವಿ ಕನ್ನಡ ವಿಭಾಗಕ್ಕೂ ಅನುದಾನ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಕಟಗೊಳ್ಳಬೇಕಾದ ಪುಸ್ತಕಗಳು ಇಂದಿಗೂ ಬಿಡುಗಡೆಗೊಂಡಿಲ್ಲ. ಇದಕ್ಕೆ ಸಂಬAಧ ಪಟ್ಟ ಅಧಿಕಾರಿಗಳು ಕ್ರಮವಹಿಸಬೇಕು. ಅಲ್ಲದೆ, ಬಿ.ಎಸ್.ಯಡಿಯೂರಪ್ಪ ಅವರು ಮೊದಲ ಬಾರಿಗೆ ಸಿಎಂ ಆಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಕನ್ನಡ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದರು. ಅವರ ಅಧಿಕಾರಾವಧಿಯಲ್ಲಿ ಕನ್ನಡಕ್ಕೆ ಸುಭಿಕ್ಷ ಕಾಲ ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.

ಈ ವೇಳೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ದಕ್ಷಿಣ ಭಾರತೀಯ ಸ್ವಯಂಸೇವಕ ಸಂಘದ ಸಂಚಾಲಕ ಮ.ವೆಂಕಟರಾಮು, ಮಾಜಿ ಶಾಸಕ ವಾಸು, ಪ್ರೊ.ರಾಮೇಗೌಡ, ಕರ್ನಾಟಕ ರಾಜ್ಯ ಮುಕ್ತ ವಿವಿ ವಿಶ್ರಾಂತ ಕುಲಪತಿ ಪ್ರೊ.ರಾಮೇಗೌಡ ಉಪಸ್ಥಿತರಿದ್ದರು.

Translate »