ಶಿವನ ಆರಾಧನೆಗೆ ಸಜ್ಜಾದ ಭಕ್ತರು
ಮೈಸೂರು

ಶಿವನ ಆರಾಧನೆಗೆ ಸಜ್ಜಾದ ಭಕ್ತರು

March 2, 2022

ಮೈಸೂರು,ಫೆ.೨೮(ಎಂಟಿವೈ)-ಮಹಾ ಶಿವರಾತ್ರಿಗೆ ಮೈಸೂರು ಸಜ್ಜಾಗಿದ್ದು, ನಗರದ ನೂರಾರು ಶಿವನ ದೇವಾ ಲಯಗಳÀಲ್ಲಿ ಪೂಜಾ ಮಹೋತ್ಸವಕ್ಕೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ೨ ವರ್ಷದಿಂದ ಸರಳ ಆಚರಣೆಗಷ್ಟೇ ಸೀಮಿತಗೊಂಡಿದ್ದ ಶಿವರಾತ್ರಿ ಹಬ್ಬವನ್ನು ಈ ಬಾರಿ ಸಂಭ್ರಮದಿAದ ಆಚರಿಸ ಲಾಗುತ್ತಿದೆ. ವಿವಿಧ ಬಡಾವಣೆಗಳಲ್ಲಿರುವ ಶಿವ ದೇವಾ ಲಯದಲ್ಲಿ ವಿಶೇಷ ಪೂಜೆಗಾಗಿ ಶಿವಲಿಂಗಕ್ಕೆ ವಿಶೇಷ ಅಲಂಕಾರ, ಅಭಿಷೇಕ, ಶಿವಮಂತ್ರ, ಶಿವ ಪಾರಾಯಣ ಸೇರಿದಂತೆ ನಾನಾ ಧಾರ್ಮಿಕ ಉತ್ಸವಗಳಿಗಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಜಾಗರಣೆ ಅಂಗವಾಗಿ ಶಿವಮಂತ್ರ ಹಾಗೂ ಶಿವನ ಕುರಿತಾದ ಭಕ್ತಿ ಗೀತೆ ಪ್ರಸ್ತುತ ಪಡಿಸಲಾಗು ತ್ತಿದೆ. ಕೆಲವು ಕಡೆ ವಿಶೇಷ ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಭಕ್ತ ಸಾಗರ ದೇವಾಲಯಗಳಿಗೆ ಹರಿದು ಬರುವ ಸಾಧ್ಯತೆ ಇದೆ. ರಾಮಾ ನುಜ ರಸ್ತೆಯಲ್ಲಿರುವ ಗುರುಕುಲ, ಶ್ರೀ ಕಾಮಕಾಮೇ ಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಸೇರಿ ದಂತೆ ಸುದೀರ್ಘ ಪೂಜಾ ಕಾರ್ಯಕ್ರಮ ನಡೆಯಲಿದೆ.

ಅಶೋಕ ರಸ್ತೆಯಲ್ಲಿರುವ ಶ್ರೀ ಮುಕ್ಕಣ್ಣೇಶ್ವರ ಸ್ವಾಮಿ ದೇವಾಲಯ, ಲಷ್ಕರ್ ಮೊಹಲ್ಲಾದ ಗರಡಿಕೇರಿಯ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಾಲಯ, ಮೈಸೂರು ಡೈರಿ ಬಳಿ ಯಿರುವ ಮಹದೇಶ್ವರ ದೇವಾಲಯ, ಕುಂಬಾರಕೊಪ್ಪಲು, ಪಡುವಾರಹಳ್ಳಿ, ಸುಣ್ಣದಕೇರಿ, ಕೆ.ಟಿ.ಸ್ಟಿçÃಟ್‌ನಲ್ಲಿರುವ ಮಹದೇ ಶ್ವರ ದೇವಾಲಯ, ಹಳೆ ಸಂತೆಪೇಟೆಯ ಶ್ರೀ ಪ್ರಸನ್ನ ನಂಜುA ಡೇಶ್ವರಸ್ವಾಮಿ ದೇವಸ್ಥಾನ, ವಿ.ವಿ.ಮೊಹಲ್ಲಾ ಹಾಗೂ ಕೆ.ಜಿ. ಕೊಪ್ಪಲಿನ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನ, ನಂಜರಾಜ ಬಹದ್ದೂರ್ ಛತ್ರ ಬಳಿಯ ಅಮೃತೇಶ್ವರ, ಗಂಗೋತ್ರಿ ಬಡಾವಣೆಯ ಮಾರುತಿ ದೇವಸ್ಥಾನ, ಖಿಲ್ಲೆ ಮೊಹಲ್ಲಾ ಭೈರವೇಶ್ವರಸ್ವಾಮಿ ದೇವಸ್ಥಾನ, ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನ, ನಾಗಲಿಂಗೇಶ್ವರ ಮಠ, ವಿಜಯನಗರದ ಯೋಗ ನರಸಿಂಹಸ್ವಾಮಿ ದೇವಾಲಯ, ದೇವರಾಜ ಮೊಹಲ್ಲಾ ದಿವಾನ್ಸ್ ರಸ್ತೆ ಅಮೃತೇಶ್ವರ ದೇವಾ ಲಯ, ಕುರುಬಾರಹಳ್ಳಿ ಮಲೆ ಮಹದೇಶ್ವರಸ್ವಾಮಿ ದೇವಾ ಲಯ, ಗಣಪತಿ ಸಚ್ಚಿದಾನಂದ ಆಶ್ರಮ, ಚಾಮುಂಡಿ ಬೆಟ್ಟದ ಮಹಾಬಲೇಶ್ವರಸ್ವಾಮಿ ದೇವಸ್ಥಾನಗಳಲ್ಲೂ ಹಬ್ಬಕ್ಕಾಗಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಮಾರುಕಟ್ಟೆ ವ್ಯಾಪಾರ ಬಿರುಸು: ಹಬ್ಬದ ಆಚರಣೆಗಾಗಿ ಪೂಜೆ ಸಾಮಗ್ರಿ ಮತ್ತು ಹಣ್ಣು, ಹಂಪಲು ಖರೀದಿ ಭರಾಟೆ ಜೋರಾಗಿತ್ತು. ಶಿವರಾತ್ರಿಯಂದು ಬಹುತೇಕರು ಜಾಗರಣೆ ಗಾಗಿ ಭೋಜನ ತ್ಯಜಿಸಿ ಫಲಹಾರ ಸೇವಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಹಣ್ಣುಗಳ ಮಾರಾಟ ಜೋರಾಗಿತ್ತು. ಹಣ ್ಣನ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಶಿವನ ಅಲಂಕಾರ ಮತ್ತು ಪೂಜೆಗೆ ನಾನಾ ರೀತಿಯ ಹೂವು ಖರೀದಿಗೂ ಗ್ರಾಹಕರು ಮುಗಿಬಿದ್ದರು. ಕೆ.ಆರ್.ಮಾರುಕಟ್ಟೆ ಯಲ್ಲಿ ಕನಕಾಂಬರ, ಮಲ್ಲಿಗೆ, ಸೇವಂತಿಗೆ ಮಾರು ಒಂದಕ್ಕೆ ೪೦ರಿಂದ ೫೦ ರೂ. ಇತ್ತು. ಕುಂಕುಮ, ವಿಭೂತಿ, ಬಿಲ್ವಪತ್ರೆ ಇತರೆ ಪೂಜಾಸಾಮಾನುಗಳ ವ್ಯಾಪಾರವು ಜೋರಾಗಿತ್ತು.

Translate »