ಮೈಸೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋಗೆ ಚಾಲನೆ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋಗೆ ಚಾಲನೆ

February 28, 2022

ಮೈಸೂರು,ಫೆ.27(ಆರ್‍ಕೆಬಿ)- ಭಾರತ ವನ್ನು ಪೋಲಿಯೋದಿಂದ ಸಂಪೂರ್ಣ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಮ್ಮಿ ಕೊಂಡಿದ್ದ ಈ ವರ್ಷದ ಮೊದಲನೆಯ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೆÇೀಲಿಯೋ ಲಸಿಕೆ ಹಾಕುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.

ಮೈಸೂರಿನ ಸೇಠ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆ (ಎಸ್‍ಎಂಟಿ ಆಸ್ಪತ್ರೆ) ಯಲ್ಲಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಎಂ.ಆರ್. ಉದಯಶಂಕರ್ ಹಾಗೂ ಡಿಎಚ್‍ಓ ಡಾ. ಕೆ.ಎಚ್.ಪ್ರಸಾದ್ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಡಾ.ಉದಯ ಶಂಕರ್, 1994ರ ಅ.2ರಂದು ದೇಶದಲ್ಲಿ ಪಲ್ಸ್ ಪೆÇೀಲಿಯೋ ಲಸಿಕೆ ಹಾಕುವ ಕಾರ್ಯ ಕ್ರಮವನ್ನು ಜಾರಿಗೆ ತರಲಾಯಿತು. ಪ್ರತಿ ವರ್ಷ ಈ ಅಭಿಯಾನ ನಡೆಸಲಾಗುತ್ತಿದೆ. ದೇಶವನ್ನು ಪೋಲಿಯೋ ಮುಕ್ತಗೊಳಿಸಲು ಇದರಿಂದ ಸಾಧ್ಯವಾಗಿದೆ. ಪಲ್ಸ್ ಪೆÇೀಲಿಯೋ ಶೇ.100ರಷ್ಟು ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದ್ದು, ಐದು ವರ್ಷಕ್ಕಿಂತ ಕಡಿಮೆ ಇರುವ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.

ಭಾರತ ಬಹುತೇಕ ಪೊಲಿಯೋ ಮುಕ್ತ ದೇಶ ಎನ್ನಲಾಗಿದ್ದರೂ ನೆರೆಯ ದೇಶ ಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿ ಸ್ತಾನ ಇನ್ನಿತರೆ ದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಪೋಲಿಯೋ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಪಲ್ಸ್ ಪೋಲಿಯೊ ಮುಂದುವರಿಸಿ, ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಂದಿನ 2 ವರ್ಷಗಳಲ್ಲಿ ಭಾರತವನ್ನು ಸಂಪೂರ್ಣ ಪೆÇೀಲಿಯೋ ಮುಕ್ತ ದೇಶ ಎಂದು ಘೋಷಿಸಲಾಗುವುದು ಎಂದು ಹೇಳಿದ ಅವರು, ಮಕ್ಕಳ ಬಾಯಿಗೆ ಹನಿ ಹಾಕುವ ಅಭಿಯಾನದ ಮೂಲಕ ನಮ್ಮ ಮಕ್ಕಳನ್ನು ರೋಗದಿಂದ ರಕ್ಷಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.

ಡಿಎಚ್‍ಓ ಡಾ.ಕೆ.ಎಚ್.ಪ್ರಸಾದ್ ಮಾತ ನಾಡಿ, ಇಂದು ಜಿಲ್ಲೆಯಾದ್ಯಂತ ನಿಗದಿತ ಕೇಂದ್ರಗಳಲ್ಲಿ ಮಾತ್ರ ಪೆÇೀಲಿಯೋ ಹನಿ ಹಾಕಲಾಗುತ್ತಿದ್ದು, ಇದಕ್ಕಾಗಿ ಒಟ್ಟು 1,620 ಬೂತ್‍ಗಳನ್ನು ಸ್ಥಾಪಿಸಲಾಗಿದೆ. ಅದಕ್ಕಾಗಿ ಒಟ್ಟು 332 ಮೇಲ್ವಿಚಾರಕರು ಮತ್ತು 9,636 ಸ್ವಯಂಸೇವಕರನ್ನು ಒಳಗೊಂಡ ಮೊಬೈಲ್ ತಂಡಗಳು ಮುಂದಿನ 3 ರಿಂದ 5 ದಿನಗಳಲ್ಲಿ ರಾಷ್ಟ್ರೀಯ ಪ್ರತಿ ರಕ್ಷಣಾ ಅಭಿಯಾನದ (ಎನ್‍ಐಡಿ) ಭಾಗ ವಾಗಿ ಜಿಲ್ಲೆಯ 7,23,173 ಮನೆಗಳಿಗೆ ತೆರಳಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ನೀಡುತ್ತಿ ದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,46,191 ಮಕ್ಕಳಿಗೆ ಹನಿ ಹಾಕುವ ಗುರಿ ಹೊಂದ ಲಾಗಿದೆ ಎಂದು ತಿಳಿಸಿದರು.

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಜಿಲ್ಲೆಯ ಎಲ್ಲಾ ಪೋಷಕರು ಸಹಕಾರ ನೀಡಬೇಕು. ದೇಶವನ್ನು ಪೋಲಿಯೋ ಮುಕ್ತ ದೇಶ ಎಂದು ಘೋಷಿಸಲು ಸಹ ಕರಿಸುವಂತೆ ಡಿಎಚ್‍ಓ ಮನವಿ ಮಾಡಿ ದರು. ಈ ಹಿಂದೆ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿದ್ದರೂ, ಪ್ರಸ್ತುತ ಚಾಲನೆ ಯಲ್ಲಿ ಮತ್ತೊಮ್ಮೆ ಪೋಲಿಯೋ ಹನಿ ಹಾಕಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ, ಜಿಲ್ಲಾ ಯೋಜನಾಧಿ ಕಾರಿ ಧನುಷ್, ಕಣ್ಗಾವಲು ಅಧಿಕಾರಿ ಸುಧೀರ್ ನಾಯಕ್, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಜಯಂತ್, ಮೈಸೂರು ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ, ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ವಸಂತ್‍ಕುಮಾರ್, ವೈದ್ಯಾಧಿಕಾರಿ ಡಾ. ಶ್ರೀವತ್ಸ, ಆರೋಗ್ಯ ಸಿಬ್ಬಂದಿ ವಿ.ಉದಯ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Translate »