ಮೈಸೂರು ಜಿಲ್ಲೆಯಲ್ಲಿ ಸೋಂಕು ಇಳಿಮುಖ; ಮಂಗಳವಾರ 15 ಮಂದಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಸೋಂಕು ಇಳಿಮುಖ; ಮಂಗಳವಾರ 15 ಮಂದಿಗೆ ಸೋಂಕು

March 3, 2021

ಮೈಸೂರು,ಮಾ.2(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಮಂಗಳವಾರ 15 ಮಂದಿಗೆ ಸೋಂಕು ತಗುಲಿದ್ದು, 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,126 ಮಂದಿಗೆ ಸೋಂಕು ತಗುಲಿದ್ದು, 52,905 ಸೋಂಕಿತರು ಗುಣಮುಖರಾಗಿದ್ದಾರೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 1,032 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿನ್ನೂ 188 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ 50 ಮಂದಿ ಮನೆಯಲ್ಲೇ ಶುಶ್ರೂಷೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ-ನಿಗಾ ಕೇಂದ್ರಗಳಲ್ಲಿ 43, ಖಾಸಗಿ ಆಸ್ಪತ್ರೆಗಳು-ನಿಗಾ ಕೇಂದ್ರಗಳಲ್ಲಿ 95 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ವಿವರ: ಬಾಗಲಕೋಟೆ, ಗದಗ್ ಜಿಲ್ಲೆಗಳಲ್ಲಿ ಒಂದೂ ಪ್ರಕರಣಗಳು ವರದಿಯಾಗಿಲ್ಲ. ಬಳ್ಳಾರಿ 5, ಬೆಳಗಾವಿ 9, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 282, ಬೀದರ್ 16, ಚಾಮರಾಜನಗರ 2, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 11, ದಕ್ಷಿಣಕನ್ನಡ 19, ದಾವಣಗೆರೆ 3, ಧಾರವಾಡ 1, ಹಾಸನ 6, ಹಾವೇರಿ 1, ಕಲಬುರಗಿ 8, ಕೊಡಗು 1, ಕೋಲಾರ 1, ಕೊಪ್ಪಳ 1, ಮಂಡ್ಯ 5, ಮೈಸೂರು 15, ರಾಯಚೂರು 2, ಶಿವಮೊಗ್ಗ 6, ತುಮಕೂರು 15, ಉಡುಪಿ 6, ಉತ್ತರ ಕನ್ನಡ 2, ವಿಜಯಪುರ 4, ಯಾದಗಿರಿ 3 ಮಂದಿ ಸೇರಿ ರಾಜ್ಯದಲ್ಲಿ ಮಂಗಳ ವಾರ 437 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 309 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿ ತರ ಸಂಖ್ಯೆ 9,52,037ಕ್ಕೆ ಏರಿಕೆಯಾಗಿದ್ದು, 9,33,730 ಸೋಂಕಿತರು ಗುಣಮುಖ ರಾದಂತಾಗಿದೆ. ಇಂದು ವರದಿಯಾದ 7 ಸಾವಿನ ಪ್ರಕರಣ ಸೇರಿ ಇದುವರೆಗೆ 12,343 ಮಂದಿ ಮೃತಪಟ್ಟಂತಾಗಿದೆ. ಇನ್ನು 5,945 ಸಕ್ರಿಯ ಪ್ರಕರಣಗಳಿವೆ.

Translate »