ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ರ್ಯಾಲಿ
ಮೈಸೂರು

ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರ ರ್ಯಾಲಿ

March 3, 2021

ಮೈಸೂರು, ಮಾ. 2(ಆರ್‍ಕೆ)- ಖಾಯಂ ಪಿಂಚಣಿಗಾಗಿ ಇಡುಗಂಟು ಅನುದಾನ ಬಿಡುಗಡೆ, ವೇತನ ಹೆಚ್ಚಳ ಹಾಗೂ ಇನ್ನಿತರ ಸರ್ಕಾರಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆ ಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯ ಕರ್ತೆಯರು ಮಂಗಳವಾರ ಬೆಂಗಳೂರಲ್ಲಿ ಭಾರೀ ಪ್ರತಿ ಭಟನಾ ರ್ಯಾಲಿ ನಡೆಸಿದರು. ಎಐಟಿಯುಸಿ, ಎಐಯು ಟಿಯುಸಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ರ್ಯಾಲಿಯಲ್ಲಿ ಮೈಸೂರು ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಟೆಂಪೋ, ಕಾರುಗಳಲ್ಲಿ ಬೆಂಗಳೂರಿಗೆ ತೆರಳಿದ ಅವರು, ರೈಲು ನಿಲ್ದಾಣದಿಂದ ಮೆರವಣಿಗೆಯಲ್ಲಿ ಫ್ರೀಡಂ ಪಾರ್ಕ್ ತಲುಪಿ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಬಂದಿದ್ದವ ರೊಂದಿಗೆ ಸೇರಿ ಪ್ರತಿಭಟನಾ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭ ವಾರಿಯರ್‍ಗಳಾಗಿ ಕೆಲಸ ಮಾಡಿದ ಅಂಗನವಾಡಿ ಕಾರ್ಯಕರ್ತೆಯರ ಪೈಕಿ ರಾಜ್ಯದಲ್ಲಿ ಮೃತ ಪಟ್ಟ 28 ಮಂದಿ ಪೈಕಿ ಒಬ್ಬರಿಗೆ ಮಾತ್ರ ಪರಿಹಾರ ಧನ ನೀಡಿದ್ದು, ಉಳಿದವರ ಕುಟುಂಬಗಳಿಗೂ ಪರಿಹಾರ ಮಂಜೂರು ಮಾಡಬೇಕು, ಸೇವಾ ಜೇಷ್ಠತೆ ಪರಿಗಣಿಸಿ ವೇತನ ನೀಡ ಬೇಕು, ಮಿನಿ ಅಂಗನವಾಡಿ ಕೇಂದ್ರಗಳಿಗೂ ಪೂರ್ಣಾವಧಿ ಕಾರ್ಯಕರ್ತರ ನೇಮಕ, ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಳ, ಸಹಾ ಯಕರು, ಕಾರ್ಯಕರ್ತೆಯರು ಸೇವೆಯಲ್ಲಿರುವಾಗ ಮೃತಪಟ್ಟರೆ ಅವರ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕೆಂ ಬುದು ಸೇರಿದಂತೆ ಬಾಕಿ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆಯೂ ಪ್ರತಿಭಟನಾ ನಿರತರು ಒತ್ತಾಯಿಸಿದರು.

ಅIಖಿUಯಿಂದ ರ್ಯಾಲಿ: ಮಾರ್ಚ್ 4 ಮತ್ತು 5 ರಂದು ಸಿಐಟಿಯು ಸಹಯೋಗದಲ್ಲಿ ಮತ್ತೆ ಅಂಗನವಾಡಿ ಕಾರ್ಯ ಕರ್ತೆಯರು ಬೆಂಗಳೂರಲ್ಲಿ ಭಾರೀ ಪ್ರತಿಭಟನೆ ನಡೆಸುವರು. ಮೈಸೂರಿನಿಂದ ನಾಳೆ (ಮಾ.3) ಸಂಜೆಯೇ ಸುಮಾರು 2,000 ಮಂದಿ ಬೆಂಗಳೂರಿಗೆ ತೆರಳುವರು ಎಂದು ಸಿಐಟಿಯು ಜಿಲ್ಲಾಧ್ಯಕ್ಷೆ ಸುನಂದ ತಿಳಿಸಿದರು.

ಮಾರ್ಚ್ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ನಡೆಯಲಿರುವ ಪ್ರತಿಭಟನಾ ರ್ಯಾಲಿಯಂದೇ ಸರ್ಕಾರ ನಮ್ಮ ಬೇಡಿಕೆಗಳ ಪರಿಹರಿಸದಿದ್ದಲ್ಲಿ ಮಾರ್ಚ್ 5 ರಂದು ರ್ಯಾಲಿಯನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು. ರ್ಯಾಲಿಗೆ ತೆರಳಲು ಬಸ್ಸು, ಕಾರುಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ಸಂಜೆ ಮೈಸೂರಿನಿಂದ ಪ್ರಯಾಣ ಬೆಳೆಸುವರು ಎಂದು ಸುನಂದ ತಿಳಿಸಿದರು.

Translate »