ರೈತನ ಜೆಸಿಬಿ ಜಪ್ತಿ ಆರೋಪ; ಖಾಸಗಿ ಫೈನಾನ್ಸ್ ಎದುರು ರೈತ ಸಂಘ ಪ್ರತಿಭಟನೆ
ಮೈಸೂರು

ರೈತನ ಜೆಸಿಬಿ ಜಪ್ತಿ ಆರೋಪ; ಖಾಸಗಿ ಫೈನಾನ್ಸ್ ಎದುರು ರೈತ ಸಂಘ ಪ್ರತಿಭಟನೆ

March 3, 2021

ಮೈಸೂರು,ಮಾ.2(ಪಿಎಂ)- ಸಾಲದ ಕಂತು ವಸೂಲಾತಿಯ ಕಾನೂನು ಕ್ರಮ ಗಳನ್ನು ಗಾಳಿಗೆ ತೂರಿ ಹೆಚ್‍ಡಿಬಿ ಫೈನಾನ್ಸ್, ರೈತರೊಬ್ಬರಿಂದ ಜೆಸಿಬಿ ಜಪ್ತಿ ಮಾಡಿದೆ. ಜಪ್ತಿ ಮಾಡಿರುವ ವಾಹನವನ್ನು ವಾಪಸ್ಸು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಮೈಸೂರಿನ ವಿಜಯನಗರದಲ್ಲಿರುವ ಸದರಿ ಖಾಸಗಿ ಫೈನಾನ್ಸ್ ಎದುರು ಮಂಗಳವಾರ ಪ್ರತಿ ಭಟನೆ ನಡೆಸಲಾಯಿತು.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂ ಕಿನ ಡಿಂಕಾ ಗ್ರಾಮದ ಡಿ.ಎಸ್.ಸತೀಶ್ ಕುಮಾರ್ ಎಂಬುವವರು ಜೆಸಿಬಿ ಖರೀದಿ ಸಲು ಸದರಿ ಫೈನಾನ್ಸ್‍ನಿಂದ 22 ಲಕ್ಷ ರೂ. ಸಾಲ ಪಡೆದು ಈಗಾಗಲೇ 18 ಲಕ್ಷ ರೂ. ಪಾವತಿ ಮಾಡಿದ್ದಾರೆ. ಕೊರೊನಾ ಸಂಕಷ್ಟ ದಿಂದ 7 ಕಂತುಗಳ ಬಾಕಿ ಉಳಿಸಿಕೊಂಡಿ ದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಾಲಾ ವಕಾಶ ನೀಡಲು ಅವಕಾಶವಿದ್ದರೂ ಜಪ್ತಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಫೆ.22ರಂದು ಕೆಆರ್ ಪೇಟೆ ತಾಲೂಕಿನ ಐಪನಹಳ್ಳಿಯಲ್ಲಿ ಕೆಲಸದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಜೆಸಿಬಿಯನ್ನು ಯಾವುದೇ ಮಾಹಿತಿ ನೀಡದೇ ಜಪ್ತಿ ಮಾಡಿ ಮೈಸೂರಿಗೆ ತಂದಿದ್ದಾರೆ. ಕಳ್ಳತನವಾಗಿ ರಬಹುದು ಎಂದು ಸತೀಶ್‍ಕುಮಾರ್ ಸಂಬಂ ಧಿಸಿದ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಜೊತೆಗೆ ಸದರಿ ಫೈನಾನ್ಸ್ ನವರಿಗೂ ವಾಹನ ಕಳ್ಳತನವಾಗಿದೆ ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ. ಆದರೂ ಜೆಸಿಬಿ ಜಪ್ತಿ ವಿಚಾರವನ್ನು ಫೈನಾನ್ಸ್ ನವರು ತಿಳಿಸದೇ ಮುಚ್ಚಿಟ್ಟಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಫೈನಾನ್ಸ್‍ನವರ ಗೋಡೌನ್‍ನಲ್ಲಿ ಜೆಸಿಬಿ ಇರಿಸಿರುವುದನ್ನು ತಿಳಿದು ವಿಚಾರಿಸಿದ ರೈತ ಸತೀಶ್‍ಕುಮಾರ್ ಅವರ ಮೇಲೆ ಗಲಾಟೆ ಮಾಡಲಾಗಿದೆ. ಸಾಲ ಪೂರ್ಣ ಪ್ರಮಾಣ ದಲ್ಲಿ ಮರು ಪಾವತಿ ಮಾಡದಿದ್ದರೆ ವಾಹನ ಹರಾಜು ಹಾಕುತ್ತೇವೆ ಎಂದು ಜೋರು ಮಾಡಿದ್ದಾರೆ ಎಂದು ಆರೋಪಿಸಿದರು. `ಹಣ ಕಟ್ಟಲು ಸಾಧ್ಯವಾಗದಿದ್ದರೆ ವಿಷ ಕುಡಿದು ಸಾಯಿ’ ಎಂದು ಸತೀಶ್‍ಕುಮಾರ್ ಅವರಿಗೆ ಅವಮಾನ ಮಾಡಿದ್ದಾರೆ. ಆ ಮೂಲಕ ಸದರಿ ಫೈನಾನ್ಸ್‍ನವರು ದುಂಡಾ ವರ್ತನೆ ತೋರಿದ್ದಾರೆ ಎಂದು ದೂರಿದರು.
ಈ ಸಂಬಂಧ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಸಂಘದ ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂ ಕಯ್ಯ, ಸದರಿ ಫೈನಾನ್ಸ್‍ನವರು ಇಂದು ಬಾಗಿಲು ತೆರೆಯಲಿಲ್ಲ. ಜೊತೆಗೆ ನಮ್ಮ ಬೇಡಿಕೆ ಸಂಬಂಧ ಯಾವುದೇ ಮಾತು ಕತೆ ನಡೆಸಿಲ್ಲ. ಸಂಜೆ 5ರವರೆಗೆ ಪ್ರತಿಭಟನೆ ನಡೆಸಿ ಬಳಿಕ ಫೈನಾನ್ಸ್‍ಗೆ ನಾವೂ ಬೀಗ ಹಾಕಿದ್ದೇವೆ. ನಾಳೆಯೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ತಿಳಿಸಿದರು. ರೈತ ಸಂಘದ ಮುಖಂಡರಾದ ಹೊಸೂರು ಕುಮಾರ್, ಹೊಸಕೋಟೆ ಬಸವರಾಜು, ಪ್ರಸನ್ನಗೌಡ, ನೇತ್ರಾವತಿ, ಚಂದ್ರೇಗೌಡ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »