ಮೈಸೂರು ವಿವಿ ನೌಕರರ ವೇದಿಕೆ ಕಾರ್ಯಕರ್ತರಿಂದ  ಮೌನ ಪ್ರತಿಭಟನೆ, ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ
ಮೈಸೂರು

ಮೈಸೂರು ವಿವಿ ನೌಕರರ ವೇದಿಕೆ ಕಾರ್ಯಕರ್ತರಿಂದ ಮೌನ ಪ್ರತಿಭಟನೆ, ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹ

February 7, 2022

ಮೈಸೂರು,ಫೆ.6(ಆರ್‍ಕೆಬಿ)-ಗಣ ರಾಜ್ಯೋತ್ಸವ ದಿನದಂದು ರಾಯಚೂರಿ ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ ಅಲ್ಲಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿ ಕಾರ್ಜುನಗೌಡ ಅವರ ಧೋರಣೆಯನ್ನು ಖಂಡಿಸಿ, ವಿಶ್ವಮಾನವ ವಿವಿ ನೌಕರರ ವೇದಿಕೆ ಆಶ್ರಯದಲ್ಲಿ ಭಾನುವಾರ ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆ ಎದು ರಿನಲ್ಲಿರುವ ಡಾ.ಅಂಬೇಡ್ಕರ್ ಪುತ್ಥಳಿ ಬಳಿ ಮೌನ ಪ್ರತಿಭಟನೆ ನಡೆಸಲಾಯಿತು.

ಡಾ.ಅಂಬೇಡ್ಕರ್ ಫೋಟೋ ತೆಗೆದರೆ ಮಾತ್ರ ನಾನು ಧ್ವಜಾರೋಹಣ ನಡೆಸುವು ದಾಗಿ ಹೇಳಿ ಫೋಟೋ ತೆಗೆಸಿದರೆಂದು ಹೇಳಲಾದ ಘಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಆ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ.ಎಸ್.ಶಿವರಾಜಪ್ಪ, ಸಂವಿಧಾನವನ್ನು ರಕ್ಷಣೆ ಮಾಡಬೇಕಾದ ಜಿಲ್ಲಾ ಮುಖ್ಯ ನ್ಯಾಯಾಧೀಶರೇ ಈ ರೀತಿ ವರ್ತಿಸಿದ್ದು ಸರಿಯಲ್ಲ. ಸಂವಿಧಾನ ದಿನೋ ತ್ಸವದಂದೇ ಭಾವಚಿತ್ರ ತೆಗೆಸುವ ಅವಶ್ಯ ಕತೆ ಇರಲಿಲ್ಲ. ಈ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿಸಿದ ಪ್ರಸಂಗ ಪ್ರಜ್ಞಾವಂತ ನಾಗ ರಿಕರೆಲ್ಲರೂ ತಲೆಬಾಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನ್ಯಾಯಾಧೀಶರಾಗಲೀ, ರಾಜಕಾರಣಿ ಗಳಾಗಲೀ, ಅಧಿಕಾರಿಗಳಾಗಲೀ ಪ್ರತಿಯೊ ಬ್ಬರೂ ಸಂವಿಧಾನದ ಚೌಕಟ್ಟಿನಲ್ಲಿಯೇ ಕೆಲಸ ನಿರ್ವಹಿಸಬೇಕು. ಆದರೆ ನ್ಯಾಯಾಧೀಶರೇ ಸಂವಿಧಾನ ಶಿಲ್ಪಿಗೆ ಅಪಮಾನ ಮಾಡಿ ರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ನ್ಯಾಯಾಂಗ ಇಲಾಖೆ ತಲೆತಗ್ಗಿಸು ವಂತಹ ನಡೆಯಾಗಿದೆ. ತಪ್ಪು ಮಾಡಿ ದ್ದರೂ ಕ್ಷಮಾಪಣೆ ಕೇಳುವ ಸೌಜನ್ಯವೂ ಅವರಿಗೆ ಬಂದಿಲ್ಲವೆಂದರೆ ಇದು ಉದ್ದೇಶ ಪೂರ್ವಕವಾಗಿ ಮಾಡಿದಂತಾಗಿದೆ. ಇದರ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನಿಂದ ವರದಿ ತರಿಸಿಕೊಂಡು ತಪ್ಪಿತಸ್ಥ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೌನ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಮಾಜಿ ಮೇಯರ್ ಪುರುಷೋತ್ತಮ್, ಪ್ರೊ.ಜಗ ದೀಶ್, ಪಾಲಿಕೆ ಸದಸ್ಯೆ ಭುವನೇಶ್ವರಿ ಪ್ರಭು ಸ್ವಾಮಿ, ವಿಶ್ವಮಾನವ ವಿವಿ ನೌಕರರ ವೇದಿಕೆ ಅಧ್ಯಕ್ಷ ವಾಸುದೇವ್, ಪದಾಧಿ ಕಾರಿಗಳಾದ ಭಾಸ್ಕರ್, ವಿನೋದ್, ದಿನ ಮಣಿ ಇನ್ನಿತರರು ಉಪಸ್ಥಿತರಿದ್ದರು.

Translate »