ರಾಜನಾಥ್‌ಸಿಂಗ್ ಸಂದೇಶ: ಸಿಎಂ ಬೊಮ್ಮಾಯಿ ಅಲರ್ಟ್!
ಮೈಸೂರು

ರಾಜನಾಥ್‌ಸಿಂಗ್ ಸಂದೇಶ: ಸಿಎಂ ಬೊಮ್ಮಾಯಿ ಅಲರ್ಟ್!

April 23, 2022

 ರಾಜ್ಯ ಬಿಜೆಪಿ ವಲಯದಲ್ಲಿ ತಲ್ಲಣ ಉಂಟು ಮಾಡಿರುವ ಸಿಎಂಗೆ ರಕ್ಷಣಾ ಸಚಿವರ ಸಂದೇಶ!?
 ತ್ವರಿತ ಕಡತ ವಿಲೇವಾರಿಗೆ ತಮ್ಮ ಸಚಿವಾಲಯಕ್ಕೆ ಸೂಚಿಸಿದ ಸಿಎಂ ಬಸವರಾಜ ಬೊಮ್ಮಾಯಿ
 ಬ್ರಿಟನ್ ಪ್ರಧಾನಿ ವಾಪಸಾಗುತ್ತಿದ್ದಂತೆ ಏ.೨೭ಕ್ಕೆ ದೆಹಲಿಗೆ ಮುಖ್ಯಮಂತ್ರಿ ಭೇಟಿ ನಿಗದಿ
 ಕಟೀಲ್ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಇಲ್ಲವೇ ಡಾ.ಅಶ್ವತ್ಥನಾರಾಯಣ ನೇಮಕ ಸಾಧ್ಯತೆ

ಬೆಂಗಳೂರು, ಏ.೨೨ (ಕೆಎಂಶಿ)- ಪ್ರವಾಸದಲ್ಲಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೂರವಾಣ ಮೂಲಕ ಸಂಪರ್ಕಿಸಿ, ನೀಡಿರುವ ಸಂದೇಶ ರಾಜ್ಯ ಬಿಜೆಪಿಯಲ್ಲಿ ವ್ಯಾಪಕ ಚರ್ಚೆಗೆ ಎಡೆಮಾಡಿದೆ. ರಾಜನಾಥ್‌ಸಿಂಗ್ ಅವರಿಂದ ಸಂದೇಶ ದೊರೆಯುತ್ತಿದ್ದಂತೆ ಮುಖ್ಯಮಂತ್ರಿಯವರು ನಾಳೆಯಿಂದ ತಮ್ಮ ಸಚಿವಾಲಯದಲ್ಲಿ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸಂಬAಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲ, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಷ್ಟçಕ್ಕೆ ಭೇಟಿ ನೀಡಿದ್ದು, ಅವರು ಹಿಂತಿರುಗುತ್ತಿದ್ದAತೆ ಬೊಮ್ಮಾಯಿ ಅವರು ಇದೇ ೨೭ ರಂದು ದೆಹಲಿಗೆ ತೆರಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ೨೦೨೩ ರ ಏಪ್ರಿಲ್-ಮೇನಲ್ಲಿ ಜರುಗಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿ ೧೫೦ ಗುರಿ ಇಟ್ಟುಕೊಂಡು ಆಡಳಿತ ಮತ್ತು ಪಕ್ಷದಲ್ಲಿ ಮಹತ್ತರ ಬದಲಾವಣೆಗೆ ಮುಂದಾಗಿದೆ.

ಕೇAದ್ರ ಗೃಹ ಸಚಿವ ಅಮಿತ್ ಷಾ, ಆರ್.ಎಸ್.ಎಸ್.ನ ಹಿರಿಯ ಮುಖಂಡ ದತ್ತಾತ್ರೆಯ ಹೊಸಬಾಳೆ, ಬಿಜೆಪಿಯ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಅರುಣ್ ಅವರು ದೆಹಲಿಯಲ್ಲಿ ಸಭೆ ಸೇರಿ ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ಮಾಡಿ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರೂಪುರೇಷೆ ಗಳನ್ನು ಸಿದ್ಧಪಡಿಸಿದ್ದಾರೆ.

ಬೊಮ್ಮಾಯಿ ಆಡಳಿತ ಹಾಗೂ ನಳಿನ್‌ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಪಕ್ಷಕ್ಕೆ ನಿರೀಕ್ಷಿಸಿದ ವರ್ಚಸ್ಸು ದೊರೆತಿಲ್ಲ. ಇವರ ನಾಯಕತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಿದರೆ, ನಮ್ಮ ಗುರಿ ಮುಟ್ಟುವುದಿಲ್ಲ ಎಂಬ ಕಾರಣಕ್ಕೆ ಪಕ್ಷ ಮತ್ತು ಸರ್ಕಾರ ದಲ್ಲಿ ಬದಲಾವಣೆ ಮಾಡುವ ತೀರ್ಮಾನವನ್ನು ಕೈಗೊಂಡಿದ್ದಾರೆ.

ಬದಲಾವಣೆ ಮಾಡಿದರೆ ಪರ್ಯಾಯ ನಾಯಕತ್ವದ ತೀರ್ಮಾನವನ್ನು ಪ್ರಧಾನಿಯವರಿಗೆ ಈ ಸಭೆ ನೀಡಿದ ಬೆನ್ನಲ್ಲೆ ರಾಜನಾಥ್ ಸಿಂಗ್ ಮುಖ್ಯ ಮಂತ್ರಿಯವರನ್ನು ಸಂಪರ್ಕಿಸಿ ಮಾತನಾಡಿರುವುದು ಚರ್ಚೆಗೆ ಎಡೆಮಾಡಿದೆ. ಉಭಯ ನಾಯಕರು ಏನು ಮಾತನಾಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ದೆಹಲಿ ಸಭೆಯ ವೈಖರಿಯನ್ನು ಗಮನಿಸಿದರೆ ಬೊಮ್ಮಾಯಿ ಅವರ ಬದಲಾವಣೆ ಬಹುತೇಕ ಖಚಿತ ಎಂದು ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆದಿದೆ. ಇದೇ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವಧಿಯು ಜೂನ್-ಜುಲೈಗೆ ಮುಗಿಯಲಿದ್ದು, ಅದಕ್ಕೂ
ಮುನ್ನವೇ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಲ್ಲವೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ನಾರಾಯಣ್ ಅವರನ್ನು ಈ ಸ್ಥಾನಕ್ಕೆ ತರಲು ದೆಹಲಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.

ಬಿಜೆಪಿಯ ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಎರಡು ದಿನಗಳಿಂದ ರಾಜ್ಯ ಪ್ರವಾಸದಲ್ಲಿದ್ದು, ಇಂದು ನಗರದ ಕೇಶವಶಿಲ್ಪದಲ್ಲೇ ಉಳಿದುಕೊಂಡು ರಾಜ್ಯ ಸಂಘಟನೆಯ ನಾಯಕರೊಟ್ಟಿಗೆ ಸಮಾಲೋಚನೆ ನಡೆಸಿದ್ದಾರೆ. ಅವರು ನಾಳೆಯು ಬೆಂಗಳೂರಿನಲ್ಲೇ ಉಳಿದರೆ, ಮುಖ್ಯಮಂತ್ರಿಯವರು ಪ್ರವಾಸದಿಂದ ಹಿಂತಿರುಗುತ್ತಿದ್ದAತೆ ಹೊಸಬಾಳೆ ಅವರನ್ನು ಭೇಟಿ ಮಾಡಿ, ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ.

ಆಜಾನ್ ಸಂಬAಧ ಆಯಾಯ ಪೊಲೀಸ್ ಠಾಣಾಧಿಕಾರಿಗಳಿಗೆ ಜವಾಬ್ದಾರಿ ಶಾಂತಿ ಸಭೆ ಕರೆದು ಸೌಹಾರ್ದತೆಯಿಂದ ಇತ್ಯರ್ಥಕ್ಕೆ ಮುಖ್ಯಮಂತ್ರಿ ಸೂಚನೆ
ಬೆಂಗಳೂರು, ಏ.೨೨ (ಕೆಎಂಶಿ)- ಆಜಾನ್ ಕುರಿತಂತೆ ಪೊಲೀಸರು ಆಯಾಯ ಠಾಣೆಯಲ್ಲಿ ಶಾಂತಿ ಸಭೆಗಳನ್ನು ನಡೆಸಿ ಸೌಹಾರ್ದತೆ ಯಿಂದ ಸಮಸ್ಯೆಗಳನ್ನು ಬಗೆಹರಿಸಲು ಸೂಚನೆ ನೀಡಲಾಗಿದೆ. ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್ ಬಗ್ಗೆ ಹೈಕೋರ್ಟ್ ಆದೇಶವಿದೆ. ಆ ಪ್ರಕಾರ ಸುತ್ತೋಲೆಯನ್ನು ಈಗಾಗಲೇ ಹೊರಡಿಸ ಲಾಗಿದೆ. ಯಾವ ಯಾವ ಸಂದರ್ಭದಲ್ಲಿ ಎಷ್ಟು ಡೆಸಿಬಲ್ ಇರಬೇಕು ಎಂದು ಕಾನೂನು ಇದೆ. ಡಿಜಿಯವರು ಸುತ್ತೋಲೆ ಹೊರಡಿಸಿದ್ದಾರೆ ಎಂದರು. ಪಕ್ಷದಲ್ಲಿ ಹಿಂದೆAದಿಗಿAತಲೂ ಹೆಚ್ಚಿನ ಒಗ್ಗಟ್ಟು ಇದೆ. ಪಕ್ಷದಲ್ಲಿ ಯಾವ ಅಸಮಾ ಧಾನವೂ ಇಲ್ಲ. ಕೆಲವು ವಿಚಾರಗಳನ್ನು ಚರ್ಚೆ ಮಾಡಿ ಬಗೆಹರಿಸಿ ಕೊಂಡಿದ್ದೇವೆ. ಹಿಂದೆAದಿಗಿAತಲೂ ಹೆಚ್ಚಿನ ಒಗ್ಗಟ್ಟು ನಮ್ಮಲ್ಲಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ನಂಬಿಕೆ ಇದೆ ಎಂದರು.

Translate »