ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡ ನೆಲಸಮ ನಿರ್ಧಾರ ಅವೈಜ್ಞಾನಿಕ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್ಡೌನ್ ಕಟ್ಟಡ ನೆಲಸಮ ನಿರ್ಧಾರ ಅವೈಜ್ಞಾನಿಕ

April 23, 2022

ಮೈಸೂರು, ಏ.೨೨(ಎಂಟಿವೈ)- ಮೈಸೂರಿನ ಪ್ರಮುಖ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಬಿಲ್ಡಿಂಗ್ ನೆಲಸಮ ಮಾಡುವ ನಿರ್ಧಾರ ಸಮಂಜಸವಲ್ಲ, ಸರ್ಕಾರ ಸಹಕಾರ ನೀಡುವ ಭರವಸೆ ನೀಡಿದರೆ ಎರಡೂ ಕಟ್ಟಡಗಳನ್ನು ನಾವೇ ಪುನಶ್ಚೇತನಗೊಳಿಸುತ್ತೇವೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ಡೌನ್ ಕಟ್ಟಡವನ್ನು ನೆಲಸಮ ಮಾಡುವ ನಿರ್ಧಾರ ಅವೈಜ್ಞಾನಿಕವಾಗಿದೆ. ಅದಕ್ಕೆ ನಮ್ಮ ಆಕ್ಷೇಪವಿದೆ. ಪಾರಂಪರಿಕ ಸಮಿತಿ ನಿರ್ಧಾರ ಸಮಂಜಸ ಅಲ್ಲ. ಸರಿಯಾದ ಪಾರಂಪರಿಕ ತಜ್ಞರು ಇಲ್ಲದೇ ಇರುವುದರಿಂದಲೇ ಈ ಅವೈಜ್ಞಾನಿಕ ನಿರ್ಧಾರಕ್ಕೆ ಬರಲು ಕಾರಣ. ಪಾರಂಪರಿಕ ಸಮಿತಿಯಲ್ಲಿ ಎರಡು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಸೂಕ್ತ ತಜ್ಞರ ನೇಮಕ ಮಾಡಿ ಪರಿಶೀಲಿಸಿದರೆ ಮಾರುಕಟ್ಟೆ ಪುನಶ್ಚೇತನಗೊಳಿಸ ಬಹುದು ಎಂದರು. ಈಗಾಗಲೇ ಈ ಎರಡೂ ಕಟ್ಟಡಗಳ ನೆಲಸಮ ನಿರ್ಧಾರದ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿದೆ. ಇದರಿಂದ ಸರ್ಕಾರ ಈ ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸು ತ್ತದೆ ಎಂಬ ಭರವಸೆ ಇದೆ. ರಾಜ ಮನೆತನಕ್ಕೆ ಸೇರಿದ ಪಾರಂಪರಿಕ ಕಟ್ಟಡವಾದ ರಾಜೇಂದ್ರ ವಿಲಾಸ ಪ್ಯಾಲೇಸ್
ಶಿಥಿಲಾವಸ್ಥೆ ತಲುಪಿತ್ತು. ಅದನ್ನು ನಾವು ಪುನಶ್ಚೇತನ ಮಾಡಿz್ದೆÃವೆ. ಪ್ರಯತ್ನ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ಮಾರುಕಟ್ಟೆ ಉಳಿಸಿ ಕೊಳ್ಳುವುದು ಕಷ್ಟವೇನಲ್ಲ. ಸರ್ಕಾರ ಸಹಕಾರ ನೀಡುವ ಭರವಸೆ ನೀಡಿದರೆ ನಾವೇ ಪುನಶ್ಚೇತನಗೊಳಿಸುತ್ತೇವೆ ಎಂದರು.

ಪಾರAಪರಿಕ ಕಟ್ಟಡಗಳ ಮೇಲೆ ಮೈಸೂ ರಿಗರಿಗೆ ಭಾವನಾತ್ಮಕ ಸಂಬAಧ ವಿದೆ. ಮೈಸೂರಿಗೆ ಪಾರಂಪರಿಕ ಕಟ್ಟಡ ಗಳು ಮುಕುಟವಿದ್ದಂತೆ. ಈ ಕಟ್ಟಡಗಳ ಪುನಶ್ಚೇತನಕ್ಕೆ ಸಂಬAಧಿಸಿದAತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳ ಬೇಕಾಗಿತ್ತು. ಜನರ ಭಾವನೆಗೆ ಧಕ್ಕೆ ತರುವ ಕೆಲಸ ಆಗಬಾರದು. ಜನರ ಅಭಿಪ್ರಾಯ ಗೌರವಿಸಿದರೆ ಪ್ರತಿಭಟನೆಗಳು ನಡೆಯುವುದಿಲ್ಲ ಎಂದು ತಿಳಿಸಿದರು.

Translate »