ಮೂರು ದಿನಗಳ ಎಥ್ನೋಫಾರ್ಮಕಾಲಜಿ ಕುರಿತ ೯ನೇ ಅಂತಾರಾಷ್ಟಿçÃಯ ಸಮ್ಮೇಳನ
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರಿಂದ ಉದ್ಘಾಟನೆ
ಮೈಸೂರು, ಏ.೨೨(ಆರ್‌ಕೆ)-ನೋವು ಶಮನ ಮಾಡುವ ನೈಸರ್ಗಿಕ ಗಿಡಮೂಲಿಕೆ ಔಷಧ ಪದ್ಧತಿ ಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕೆAದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಎಸ್‌ಎಫ್‌ಇ-ಇಂಡಿಯಾ ಮೈಸೂರು ಚಾಪ್ಟರ್, ಜೆಎಸ್‌ಎಸ್ ಫಾರ್ಮಸಿ ಕಾಲೇಜು ಹಾಗೂ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಇಂದಿನಿAದ ಆರಂಭವಾದ ೩ ದಿನಗಳ `Soಛಿieಣಥಿ ಜಿoಡಿ ಇಣhಟಿoಠಿhಚಿಡಿmಚಿಛಿoಟogಥಿ’ ಕುರಿತ ೯ನೇ ಅಂತಾರಾಷ್ಟಿçÃಯ ಸಮ್ಮೇಳನ `Sಈಇಅ-೨೦೨೨’ ಅನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಿದ ಹರ್ಬಲ್ ಮೆಡಿಸಿನ್ ಹಲವು ರೋಗಗಳು, ನೋವನ್ನು ನಿವಾರಿಸುವ ಗುಣ ಹೊಂದಿದ್ದು, ನಮ್ಮ ಪ್ರಾಚೀನ ತಲೆಮಾರಿನವರು ಬಳಸುತ್ತಿದ್ದ ಈ ಪ್ರಾಚೀನ ಮತ್ತು ಸಾಂಪ್ರದಾಯಿಕ ಔಷಧ ಪದ್ಧತಿಯು ಅತ್ಯಾಧುನಿಕ ಯುಗವಾದ ಇಂದಿಗೂ ಪ್ರಚಲಿತವಾಗಿರುವುದು ಅದರ ಮೌಲ್ಯ ಮತ್ತು ಪ್ರಾಮುಖ್ಯತೆ ಎಷ್ಟು ಎಂಬುದು ಖಾತರಿಯಾಗುತ್ತದೆ ಎಂದು ಸಚಿವರು ನುಡಿದರು.
ಫಾರ್ಮಕಾಲಜಿ ಮತ್ತು ಮೆಡಿಸಿನ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಭಾರತದತ್ತ ವೈದ್ಯಕೀಯ ಸಂಶೋಧನೆಗೆ ಪಾಶ್ಚಿಮಾತ್ಯ ರಾಷ್ಟçಗಳು ಧಾವಿಸುತ್ತಿವೆ. ನೋವು ಶಮನಕ್ಕೆ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತಿರುವ ನಮ್ಮ ದೇಶದಲ್ಲಿ ಕ್ಯಾನ್ಸರ್‌ನಂತಹ ರೋಗ ನಿವಾರಣೆ ಚಿಕಿತ್ಸೆಗೂ ಉಪಯೋಗಿಸಲಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಡಾ. ಸುಧಾಕರ್ ಶ್ಲಾಘಿಸಿದರು.
ಕೊರೊನಾ ಸೋಂಕಿತ ರೋಗಿಗಳಿಗೆ `ಕಷಾಯ’ ಸಾಂಪ್ರದಾಯಿಕ ಪಾನೀಯವನ್ನು ಕುಡಿಸಲಾಗುತ್ತಿತ್ತು. ಬೇವು, ಶುಂಠಿ, ಬೆಳ್ಳುಳ್ಳಿ ಹಾಗೂ ಜೇನುತುಪ್ಪದಿಂದ ತಯಾರಿಸಿದ ಕಷಾಯವು ಹಲವು ಮಂದಿಯನ್ನು ಸೋಂಕಿನಿAದ ಪಾರು ಮಾಡಿದ್ದನ್ನು ಸ್ಮರಿಸಿದ ಸಚಿವರು, ಅದರ ಗುಣ ಅರಿತ ಮೇಲೆ ಪ್ರತಿಯೊಬ್ಬರೂ ಈ ಪಾನೀಯ ಸೇವಿಸಲಾರಂಭಿಸಿದ್ದಾರೆ ಎಂದರು.
ಇಂಡಸ್ ವ್ಯಾಲಿ ನಾಗರಿಕತೆಯಂತಹ ಪ್ರಾಚೀನ ಭಾರತೀಯರು ರೋಗ ಗುಣಪಡಿಸಿಕೊಳ್ಳಲು ಸಾಂಪ್ರದಾಯಿಕ ಹರ್ಬಲ್ ಮೆಡಿಸಿನ್‌ಗಳ ಮೇಲೆ ಅವಲಂಬಿತರಾಗಿದ್ದರು. ವೈಜ್ಞಾನಿಕ ಯುಗದಲ್ಲಿರುವ ಆಧುನಿಕ ಸಮಾಜವೂ ನಿಸರ್ಗದತ್ತ ಉತ್ಪನ್ನಗಳಿಂದ ತಯಾರಿಸಿದ ಔಷಧಗಳನ್ನು ಬಳಸಲಾರಂಭಿಸಿರುವುದರಿAದ ಆಯುರ್ವೇದ, ಯುನಾನಿ ಯೋಗದಂತಹ ಆಯುಷ್ ವೈದ್ಯಕೀಯ ಪದ್ಧತಿ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ನುಡಿದರು.
ಪ್ರಾಚೀನ ಐತಿಹಾಸಿಕ ಜ್ಞಾನ ಎಂದಿಗೂ ಸಾಯು ವುದಿಲ್ಲ. ಸರ್ಕಾರವು ಇಂತಹ ಜ್ಞಾನ ವೃದ್ಧಿಗೆ ಅಗತ್ಯ ಸೌಲಭ್ಯ ಮತ್ತು ನೆರವು ನೀಡಿ ಪ್ರೋತ್ಸಾಹಿಸುತ್ತದೆ. ಇದೀಗ ಇಡೀ ವಿಶ್ವವು ಆರ್ಗ್ಯಾನಿಕ್ ಆಹಾರ, ನೈಸರ್ಗಿಕ ಔಷಧ, ಯೋಗಿಕ್ ಸೈನ್ಸಸ್‌ಗಳತ್ತ ಎದುರು ನೋಡುತ್ತಿದೆ. ಅದನ್ನು ಪ್ರೋತ್ಸಾಹಿಸಲು ಸರಿಯಾದ ಸಂಶೋಧನೆ ನಡೆಸಿ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತುತಪಡಿಸುವುದು ಈ ಸಮಯದಲ್ಲಿ ಅತ್ಯಗತ್ಯ ಎಂದು ಡಾ. ಸುಧಾಕರ್ ಅಭಿಪ್ರಾಯಪಟ್ಟರು.
ಆರೋಗ್ಯ ಕ್ಷೇತ್ರದ ಮೇಲೆ ಭಾರತ ವಿಶ್ವಾಸವಿರಿಸಿ ಕೊಂಡಿದ್ದು, ಹೆಚ್ಚು ಔಷಧೀಯ ಗುಣವಿರುವ ಗಿಡಗಳನ್ನು ಬೆಳೆಸಲು ಉತ್ತೇಜನ ನೀಡಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (Wಊಔ) ಮಹಾ ನಿರ್ದೇಶಕ ಡಾ. ಟೆಡ್ರೋಸ್ ಅವರು ಹೇಳಿರುವ ರೀತಿ ಭಾರತೀಯರು ಪ್ರಪಂಚದಾದ್ಯAತ ಹೋಗುತ್ತಿರುವಾಗ ಮತ್ತೊಂದೆಡೆ ಇಡೀ ವಿಶ್ವವೇ ಆಯುಷ್ ಮೂಲಕ ಭಾರತಕ್ಕೆ ಬರುತ್ತಿದೆ ಎಂದ ಸಚಿವರು, ಇಂತಹ ನಿಸರ್ಗದತ್ತ ಉತ್ಪನ್ನಗಳ ಔಷಧಿ ತಯಾರಿಕೆ, ಮಾರುಕಟ್ಟೆ ಮಾಡಲು ಸರ್ಕಾರ ಸರ್ವ ರೀತಿಯಲ್ಲಿ ಉತ್ತೇಜನ ನೀಡುತ್ತದೆ ಎಂದರು.
ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದ ಸಮ್ಮೇಳನದಲ್ಲಿ ಛತ್ತೀಸ್‌ಗಢ ಮಾಜಿ ರಾಜ್ಯಪಾಲ ಶೇಖರ್ ದತ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕೊಲ್ಕತ್ತಾದ ಸೊಸೈಟಿ ಫಾರ್ ಎಥ್ನೋ ಫಾರ್ಮಕಾಲಜಿ ಉಪಾಧ್ಯಕ್ಷ ಡಾ. ಸಿ.ಎ.ಕಟಿಯಾರ್, ಎಸ್‌ಎಫ್‌ಇಸಿ-೨೦೨೨ರ ಸೈಂಟಿಫಿಕ್ ಸರ್ವೀಸಸ್ ಅಧ್ಯಕ್ಷ ಪ್ರೊ. ಪುಲೊಕ್ ಕೆ.ಮುಖರ್ಜಿ, ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ರಿಜಿಸ್ಟಾçರ್ ಡಾ. ಬಿ.ಮಂಜುನಾಥ್, ಡಾ. ಟಿ.ಎಂ. ಪ್ರಮೋದ್ ಕುಮಾರ್ ಹಾಗೂ ಡಾ. ಕೆ.ಮೃತ್ಯುಂ ಜಯ ಅವರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.