ಬಿಜೆಪಿ ಬೂತ್ ಅಧ್ಯಕ್ಷರ ಮನೆಗಳಿಗೆ ಶಾಸಕ ರಾಮದಾಸ್ ಭೇಟಿ
ಮೈಸೂರು

ಬಿಜೆಪಿ ಬೂತ್ ಅಧ್ಯಕ್ಷರ ಮನೆಗಳಿಗೆ ಶಾಸಕ ರಾಮದಾಸ್ ಭೇಟಿ

April 23, 2022

ಮೈಸೂರು, ಏ.೨೨- ಶಾಸಕ ಎಸ್.ಎ. ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೫೧ರಲ್ಲಿ ಮತಪಾಲಕರಾಗಿ ಬಿಜೆಪಿ ಬೂತ್ ಅಧ್ಯಕ್ಷರ ಮನೆಗೆ ಶುಕ್ರವಾರ ಭೇಟಿ ನೀಡಿ ಸಮಾ ಲೋಚನೆ ನಡೆಸಿ ಬೂತ್ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅನಾವರಣ ಮಾಡಿದರು.

ಬೂತ್ ಅಧ್ಯಕ್ಷರ ಮನೆ ಮುಂದೆ ನಡೆದ ಕಾರ್ಯಕ್ರಮದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಬೂತ್ ಅಧ್ಯಕ್ಷರುಗಳು ದೇಶಕ್ಕೋಸ್ಕರ ಕೆಲಸ ಮಾಡುತ್ತೇನೆ, ಸರ್ಕಾರದ ಯೋಜನೆ ಗಳನ್ನು ಮನೆಗಳಿಗೆ ತಲುಪಿಸುತ್ತೇನೆ ಎಂದು ಪ್ರಮಾಣ ಮಾಡಿದ್ದಾರೆ. ಬೂತ್ ಅಧ್ಯಕ್ಷರ ಜೊತೆಗೆ ಪೇಜ್ ಪ್ರಮುಖರು ತಮಗೆ ಬರುವ ೮,೧೦ ಮನೆಗಳ ಜವಾಬ್ದಾರಿ ಯನ್ನು ತೆಗೆದುಕೊಳ್ಳಬೇಕು, ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಇದು ಮುಖ್ಯ ಧ್ಯೇಯ ಹಾಗಾಗಿ ನಾವೆಲ್ಲ ಒಟ್ಟಿಗೆ ಸೇರಿ ದೇಶದ ಏಳಿಗೆಗಾಗಿ ಶ್ರಮಿಸಬೇಕಿದೆ ಎಂದರು.

ಸಮಾಜದ ಕೆಲಸವನ್ನು ಮಾಡುವಂತಹ ಜವಾಬ್ದಾರಿ ನಮ್ಮ ಮೇಲಿದೆ, ಎಷ್ಟೋ ಜನಕ್ಕೆ ರೇಷನ್ ಕಾರ್ಡ್, ಆಯುಷ್ಮಾನ್ ಕಾರ್ಡ್ಗಳು ಬೇಕಾಗಿರುತ್ತವೆ. ಅವರಿಗೆ ಬೇಕಾದದ್ದನ್ನು ತಲುಪಿಸುವ ದೊಡ್ಡ ಜವಾ ಬ್ದಾರಿ ನಮ್ಮ ಮೇಲಿದೆ. ನಾವು ಬೂತ್ ಅಧ್ಯಕ್ಷರ ಕೈಯಲ್ಲಿಯೇ ಮುಂದಿನ ದಿನಗಳಲ್ಲಿ ಆಶ್ರಯ ಮನೆಗಳ ಬೀಗದ ಕೈ ಅನ್ನು ನೀಡಲಿ ದ್ದೇವೆ. ಬೂತ್ ಅಧ್ಯಕ್ಷರ ಬಳಿ ಹೇಳಿದರೆ ನಮ್ಮ ಕಷ್ಟಗಳು, ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ನಂಬಿಕೆ ಅವರಲ್ಲಿ ಬರುವ ರೀತಿ ನೀವೆಲ್ಲರೂ ಕೆಲಸ ಮಾಡಬೇಕಿದೆ ಎಂದರು.

ರಾಮಾನುಜ ರಸ್ತೆಯ ಸಾಯಿಬಾಬಾ ದೇವಾಲಯದ ಬಳಿ ಸಾರ್ವಜನಿಕರ ಕುಂದು- ಕೊರತೆ ಆಲಿಸಿದ ಶಾಸಕರು, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳ ಬಳಿ ಹೇಳಿ ಅಲ್ಲಿಯೇ ಪರಿಹಾರವನ್ನು ದೊರಕಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಧಾನ ಕಾರ್ಯದರ್ಶಿ ಓಂ ಶ್ರೀನಿವಾಸ್, ನಾಗೇಂದ್ರ ಕುಮಾರ್, ೫೧ ನೇ ವಾರ್ಡ್ನ ನಗರಪಾಲಿಕಾ ಸದಸ್ಯ ಬಿ.ವಿ. ಮಂಜುನಾಥ್, ಬಿಜೆಪಿ ಕೆ.ಆರ್. ಕ್ಷೇತ್ರ ಉಪಾಧ್ಯಕ್ಷರಾದ ಎಂ.ಆರ್. ಬಾಲಕೃಷ್ಣ, ಸಂತೋಷ್ ಶಂಭು, ಕೆ.ಆರ್. ಕ್ಷೇತ್ರದ ಮಾಜಿ ಬಿಜೆಪಿ ಅಧ್ಯಕ್ಷ ರಾಮ ಪ್ರಸಾದ್, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮನು ಅಪ್ಪಿ(ಶೈವ್) ಪ್ರಮುಖರಾದ ಸಂತೋಷ್, ವಿಜಯ್, ಶಿವರಾಜ್, ಓಂ ಪ್ರಕಾಶ್, ರಾಜಕುಮಾರ್, ಶ್ರೀಮತಿ ಶಾಂತ, ಮಾಸ್ಟರ್ ಮಂಜುನಾಥ್, ಕಾವೇರಿ, ಬೂತ್ ಅಧ್ಯಕ್ಷರುಗಳು ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಹಾಜರಿದ್ದರು.

Translate »