ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ರೈತ ಸೋಮಶೇಖರ್ ಸಾಧನೆ ನೆಲೆಯಲ್ಲಿ ಸಚಿವರ ಸಂಭ್ರಮ
ಮೈಸೂರು

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ರೈತ ಸೋಮಶೇಖರ್ ಸಾಧನೆ ನೆಲೆಯಲ್ಲಿ ಸಚಿವರ ಸಂಭ್ರಮ

April 23, 2022

ಮೈಸೂರು, ಏ.೨೨(ಆರ್‌ಕೆಬಿ)- ಕೃಷಿ ಸಚಿವ ಬಿ.ಸಿ.ಪಾಟೀಲ್ ಶುಕ್ರವಾರ ಮೈಸೂರಿನ ತಳೂರು ಗ್ರಾಮದಲ್ಲಿ ಇಡೀ ದಿನ ರೈತರೊಂದಿಗೆ ಕಾಲ ಕಳೆದರು. ಅವರ ಸಂಕಷ್ಟಗಳನ್ನು ಆಲಿಸಿದರು. `ರೈತರೊಂದಿಗೆ ಒಂದು ದಿನ’ ಕಾರ್ಯ ಕ್ರಮದ ಮೂಲಕ ರೈತರ ಕಷ್ಟ ಸುಖಗಳ ಬಗ್ಗೆ ಮಾಹಿತಿ ಪಡೆದರು. ಅವರೊಂದಿಗೆ ಬೆರೆತು ಸರ್ಕಾರದಿಂದ ರೈತರಿಗೆ ಇರುವ ಕೃಷಿ ಯೋಜನೆಗಳು, ಸಹಾಯಧನ ಇನ್ನಿತರೆ ವಿಚಾರಗಳನ್ನು ವಿನಿಮಯ ಮಾಡಿಕೊಂಡರು.

ಮೈಸೂರಿನಿAದ ೧೪ ಕಿ.ಮೀ. ದೂರದಲ್ಲಿರುವ ಜಯಪುರ ಹೋಬಳಿಯ ತಳೂರು ಗ್ರಾಮದಲ್ಲಿ ಪ್ರಗತಿಪರ ರೈತ, ಕೃಷಿ ಪಂಡಿತ ಟಿ.ಎಸ್.ಸೋಮಶೇಖರ್ ಅವರು ತಮ್ಮ ೬ ಎಕರೆ ತೋಟದಲ್ಲಿ ಅಳವಡಿಸಿಕೊಂಡಿರುವ ಸಮಗ್ರ ಕೃಷಿ ಪದ್ಧತಿಯನ್ನು ಸಚಿವರು ವೀಕ್ಷಿಸಿದರು. ಹಸಿರೆಲೆ ಗೊಬ್ಬರ, ಸಾವಯವ ಗೊಬ್ಬರ ಸಂಸ್ಕರಿಸುವ ವಿಧಾನ, ಎರೆಹುಳು ಗೊಬ್ಬರ, ಹನಿ ನೀರಾವರಿ, ಜೇನು ಸಾಕಾಣ ಕೆ, ಮಾವಿನ ತೋಪು, ಪಪ್ಪಾಯಿ, ಬಾಳೆ, ಕಲ್ಲಂಗಡಿ, ಹಾಗಲಕಾಯಿ, ಬಣ್ಣದ ದಪ್ಪ ಮೆಣಸಿನಕಾಯಿ, ಮಣ್ಣು ಮತ್ತು ಮಳೆ ನೀರಿನ ಸಂರಕ್ಷಣೆ, ಕೃಷಿ ಹೊಂಡ, ಮೀನು ಸಾಕಾಣ ಕೆ, ಜಾನುವಾರುಗಳ ಮೇವು ತಯಾರಿಕೆ ಇತ್ಯಾದಿ ಎಲ್ಲವನ್ನೂ ವೀಕ್ಷಿಸಿದರು.

ಸರ್ಕಾರದಿಂದ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಗಳಿಂದ ರೈತರು ಏನೆಲ್ಲಾ ಯೋಜನೆ ಮತ್ತು ಸಬ್ಸಿಡಿಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬಹುದು ಎಂಬುದನ್ನು ಪ್ರತ್ಯಕ್ಷವಾಗಿ ನೋಡಿದರು. ಇದೇ ಸಮಗ್ರ ಕೃಷಿಯನ್ನು ರೈತರು ಅಳವಡಿಸಿಕೊಂಡರೆ ಆರ್ಥಿಕವಾಗಿ, ಸ್ವಾಭಿಮಾನದಿಂದ ಬದುಕು ನಡೆಸಲು ಸಾಧ್ಯವಿದೆ ಎಂಬುದನ್ನು ರೈತರಿಗೆ ಮನದಟ್ಟು ಮಾಡಿಕೊಟ್ಟರು.

ಪ್ರಗತಿಪರ ರೈತ ಟಿ.ಎಸ್.ಸೋಮಶೇಖರ್ ಅವರು ಪಾಲಿಹೌಸ್ ಘಟಕದಲ್ಲಿ ಜರ್ಬೇರಾ ಹೂವಿನ ಗಿಡಗಳನ್ನು ಬೆಳೆದು ತಿಂಗಳಿಗೆ ಕನಿಷ್ಠ ೫ ಲಕ್ಷ ರೂ. ಆದಾಯ ಪಡೆ ಯುತ್ತಿರುವ ಬಗ್ಗೆ ಮಾಹಿತಿ ಪಡೆದರು. ಈ ಅಲಂಕಾರಿಕ ಹೂವುಗಳಿಗೆ ಭಾರೀ ಬೇಡಿಕೆ ಇದ್ದು, ಮದುವೆ ಮನೆಗಳು ಇನ್ನಿತರೆ ಪ್ರಮುಖ ಸಮಾರಂಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಹೀಗಾಗಿ ಇದನ್ನು ಬೆಳೆಯುವುದರಿಂದ ರೈತರಿಗೆ ಹೆಚ್ಚಿನ ಆದಾಯವು ದೊರೆಯಲಿದೆ ಎಂದರು.

ದೇಶಕ್ಕೆ ಅನ್ನ ನೀಡುವ ರೈತರಲ್ಲಿ ಆತ್ಮವಿಶ್ವಾಸ ಮೂಡಿಸುವ ಉದ್ದೇಶದಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ `ರೈತ ರೊಂದಿಗೆ ಒಂದು ದಿನ’ ಕಾರ್ಯಕ್ರಮ ಆಯೋಜಿಸಿ, ರೈತರ ಹೊಲಕ್ಕೆ ಸರ್ಕಾರವನ್ನು ತೆಗೆದುಕೊಂಡು ಹೋಗುವ ಈ ಕಾರ್ಯಕ್ರಮದಲ್ಲಿ ಸಚಿವ ಬಿ.ಸಿ.ಪಾಟೀಲ್ ಭಾಗವಹಿಸಿ, ಕೃಷಿ ಕ್ಷೇತ್ರದಲ್ಲಾಗಿರುವ ಬದಲಾವಣೆಗಳ ಬಗ್ಗೆ ರೈತರಿಗೆ ತಿಳುವಳಿಕೆ ಮೂಡಿಸಿದರು.

ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಒಂದು ರೀತಿ ರೈತರ ಸಂತೆಯಾಗಿ ಮಾರ್ಪಟ್ಟಿತ್ತು. ಜಿಲ್ಲೆಯ ನಾನಾ ಕಡೆಗಳಿಂದ ರೈತರು ಇಲ್ಲಿಗೆ ಆಗಮಿಸಿದ್ದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಂದ ರೈತರಿಗೆ ಇದೇ ಸಂದರ್ಭದಲ್ಲಿ ಸಚಿವರು ವಿವಿಧ ರೈತ ಫಲಾನುಭವಿ ಗಳಿಗೆ ಸಬ್ಸಿಡಿ ಯೋಜನೆಯಡಿ ವಿವಿಧ ಕೃಷಿ ಪರಿಕರ ಗಳನ್ನು ವಿತರಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಸಚಿವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ರೈತ ಸಂಕೇತವಾದ ಹಸಿರು ಶಾಲಿನ ಪೇಟ ತೊಟ್ಟು ಮಿಂಚಿದರು. ರೈತರೊಡನೆ ಬೆರೆತು ಸಮಾಲೋಚಿಸಿದರು.

ನಂತರ ಹೊಂಬಾಳೆ, ಬಾಳೆ ದಿಂಡಿನಿAದ ಅಲಂಕೃತ ಗೊಂಡಿದ್ದ ವೇದಿಕೆಗೆ ಆಗಮಿಸಿದ ಸಚಿವ ಬಿ.ಸಿ.ಪಾಟೀಲ್ ರಾಗಿ ಪೂಜೆ ನೆರವೇರಿಸಿದರು. ದೀಪ ಬೆಳಗಿಸಿ, ಹೊಂಬಾಳೆ ತೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಕಾವೇರಿ ಅಚ್ಚುಕಟ್ಟು ಪ್ರಾಧಿ ಕಾರದ ಅಧ್ಯಕ್ಷ ಎನ್.ಶಿವಲಿಂಗಯ್ಯ, ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಎನ್.ಆರ್.ಕೃಷ್ಣಪ್ಪ ಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕಲ್ಮಳ್ಳಿ ಶಿವ ಕುಮಾರ್, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಡಾ.ಬಿ.ವೈ.ಶ್ರೀನಿವಾಸ್, ಕೃಷಿ ಇಲಾಖೆ ನಿರ್ದೇಶಕಿ ಡಾ.ಸಿ.ಎನ್.ನಂದಿನಿಕುಮಾರಿ, ಕೃಷಿ ಪಂಡಿತ ಪ್ರಗತಿಪರ ರೈತ ಟಿ.ಎಸ್.ಸೋಮಶೇಖರ್, ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹAತೇಶಪ್ಪ ಇನ್ನಿತರರು ಉಪಸ್ಥಿತರಿದ್ದರು.

ನೀವು ಹೇಳುತ್ತಿರುವುದು ಸುಳ್ಳು… ರೈತರಿಗೆ ಯಾವ ಸಲವತ್ತು ಸಿಗುತ್ತಿಲ್ಲ…
ಮೈಸೂರು, ಏ.೨೨(ಆರ್‌ಕೆಬಿ)- ನೀವು ಹೇಳುತ್ತಿ ರುವುದು ಸುಳ್ಳು. ರೈತರಿಗೆ ಯಾವುದೇ ಸವಲತ್ತು ಸಿಗುತ್ತಿಲ್ಲ ಎಂದು ಕೆಲ ರೈತ ಮುಖಂಡರು ಸಚಿವರ ಭಾಷಣದ ನಡುವೆ ಕೂಗಿದ ಪ್ರಸಂಗ ನಡೆಯಿತು.

ಸಚಿವ ಬಿ.ಸಿ.ಪಾಟೀಲ್ ಅವರು ತಮ್ಮ ಭಾಷಣದಲ್ಲಿ ಸರ್ಕಾರ ರೈತರಿಗೆ ನೀಡುತ್ತಿರುವ ಸಹಾಯಧನ ಮತ್ತು ಯೋಜನೆಗಳ ಬಗ್ಗೆ ಹೇಳುತ್ತಿದ್ದರು. ಆಗ ಸಭಿಕರ ಮಧ್ಯೆ ನೀವು ಹೇಳುತ್ತಿರುವುದು ಸುಳ್ಳು… ರೈತರಿಗೆ ಯಾವ ಸವಲತ್ತುಗಳು ಸಿಗುತ್ತಿಲ್ಲ. ನನಗೆ ನೇರವಾಗಿ ಫೋನ್ ಮಾಡಿ ಎನ್ನುತ್ತೀರಿ. ಆದರೆ ಫೋನ್ ಮಾಡಿದರೆ ಫೋನ್ ತೆಗೆಯುತ್ತಿಲ್ಲ. ಹೀಗಾದರೆ ನಮ್ಮ ನೋವು ಯಾರೊಂದಿಗೆ ಹೇಳಿಕೊಳ್ಳಬೇಕು ಎಂದು ಕೂಗಿ ಹೇಳಿದರು. ಏಕಾಏಕಿ ಇಂಥ ಕೂಗು, ಗದ್ದಲ ಉಂಟಾದಾಗ ಸಚಿವರು ತಮ್ಮ ಭಾಷಣದ ಮಧ್ಯೆಯೇ ಅವರನ್ನು ತಾಳ್ಮೆಯಿಂದಲೇ ಸಮಾಧಾನಪಡಿಸಲು ಯತ್ನಿಸಿದರು. ಅಂಥ ಯಾವುದೇ ಪ್ರಸಂಗ ಇದ್ದರೂ ಸರಿಪಡಿಸಲೆಂದೇ `ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರಶ್ನೆ ಕೇಳಿದರೆ ನನಗೆ ಬೇಜಾರಾಗುವುದಿಲ್ಲ. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಚರ್ಚೆ ಮಾಡೋಣ. ಸಮಸ್ಯೆ ಬಗೆಹರಿಸಲೆಂದೇ ಇಲ್ಲಿಗೆ ಬಂದಿದ್ದೇನೆ. ಕುಳಿತು ಚರ್ಚಿಸಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು.

ರೈತರು ಒಂದೇ ಬೆಳೆಗೆ ಸೀಮಿತರಾಗದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ
ಮೈಸೂರು, ಏ.೨೨(ಆರ್‌ಕೆಬಿ)- ಕೃಷಿ ನಾಶವಾದರೆ ದೇಶಕ್ಕೆ ದುರ್ಬಿಕ್ಷ ಬರುತ್ತ ದೆಂದು ಹಿರಿಯರು ಹೇಳಿದ್ದಾರೆ. ಅದು ನಿಜವೂ ಹೌದು. ಅನ್ನ ಇಲ್ಲದಿದ್ದರೆ ಬದುಕ ಲಾಗದು. ಅಂತಹ ಅನ್ನ ಬೆಳೆಯುವ ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.

ತಳೂರು ಗ್ರಾಮದಲ್ಲಿ `ರೈತರೊಂದಿಗೆ ಒಂದು ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನಗೆ ಅರಣ್ಯ ಇಲಾಖೆ ಕೊಟ್ಟರು. ಪ್ರಾಣ ಗಳ ಜತೆ ಬೇಡ, ನಾನು ಮನುಷ್ಯರ ಜೊತೆ ಓಡಾ ಡಲು ಅವಕಾಶ ನೀಡಿ ಎಂದು ಹಠ ಮಾಡಿ ಕೃಷಿ ಇಲಾಖೆಯನ್ನೇ ಕೇಳಿ ಪಡೆದುಕೊಂಡೆ. ರೈತರೊಂದಿಗೆ ಇರಬೇಕು. ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸ ಬೇಕು ಎಂಬುದು ನನ್ನ ಉದ್ದೇಶ. ಕೃಷಿ ಸಚಿವನಾಗಿ ಕನಿಷ್ಠ ೧೦೦ ಮಂದಿ ರೈತರ ಕಣ ್ಣÃರು ಒರೆಸಿದರೆ ನಾನು ಕೃಷಿ ಸಚಿವನಾ ಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.

ಸಚಿವನಾಗಿ ಕೇವಲ ವಿಧಾನಸೌಧದಲ್ಲಿ ಕುಳಿತುಕೊಳ್ಳುವ ಬದಲಿಗೆ ರೈತರ ಮನೆ ಬಾಗಿಲಿಗೆ, ಹೊಲಗಳಿಗೆ ಹೋಗಬೇಕು. ನೇರವಾಗಿ ರೈತರನ್ನು ಕಂಡು, ಮಾತ ನಾಡಿಸಿ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅವರ ಕಷ್ಟಗಳನ್ನು ಆಲಿಸಿ, ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳಬೇಕು ಎಂಬುದು ನನ್ನ ಮಹ ದಾಸೆಯಾಗಿತ್ತು. ಹಾಗಾಗಿ ರೈತ ರೊಂದಿಗೆ ಒಂದು ದಿನ ಕಾರ್ಯಕ್ರಮ ರೂಪಿಸಿದ್ದಾಗಿ ತಿಳಿಸಿದರು.

ಪ್ರತಿ ಜಿಲ್ಲೆಯಲ್ಲೂ ರೈತರೊಂದಿಗೆ ಒಂದು ದಿನ ಕಳೆಯುತ್ತಿದ್ದು, ಇದು ೧೫ನೇ ಜಿಲ್ಲೆ ಯಾಗಿದ್ದು, ಉಳಿದ ಜಿಲ್ಲೆಗಳಲ್ಲೂ ಈ ಕಾರ್ಯ ಕ್ರಮ ಆಯೋಜಿಸಲಾಗುವುದು ಎಂದರು.

ಪ್ರಗತಿಪರ ರೈತ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ತಳೂರಿನ ಟಿ.ಎಸ್. ಸೋಮ ಶೇಖರ್ ೩.೫ ಎಕರೆ ಜಮೀನಿನಲ್ಲಿ ಹೂವು, ಹಣ್ಣು, ತರಕಾರಿ ಬೆಳೆದಿದ್ದಾರೆ. ಮೀನು ಸಾಕಿದ್ದಾರೆ. ಹೂವು ಬೆಳೆದು ತಿಂಗಳಿಗೆ ೫ ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದಾರೆ. ಇತರೆ ರೈತರು ಇದೇ ರೀತಿ ಮಾಡಿದರೆ ಕೃಷಿ ಸ್ವಾವಲಂಬಿಯಾಗುತ್ತದೆ. ರೈತರ ಅಭಿವೃದ್ಧಿ ಯಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ಸ್ಕಾಲರ್ ಶಿಪ್, ವಿದ್ಯಾನಿಧಿ ಮಾಡಿದರು. ಎಲ್ಲಾ ರೀತಿಯ ರೈತರ ಮಕ್ಕಳಿಗೆ ೧೧,೦೦೦ ರೂ. ಸ್ಕಾಲರ್ ಶಿಪ್ ನೀಡುತ್ತಿರುವುದು ಹೆಮ್ಮೆ ಪಡಬೇಕಾದ ವಿಷಯ. ರೈತರ ಹೆಣ್ಣು ಮಕ್ಕಳಿಗೂ ೨೦೦೦ ರೂ. ಸ್ಕಾಲರ್‌ಶಿಪ್ ನಮ್ಮ ಸರ್ಕಾರ ನೀಡುತ್ತಿದೆ. ಕೃಷಿ ಸಂಜೀವಿನಿ ಯೋಜನೆ ಯಡಿ ಈಗಾಗಲೇ ಸರ್ಕಾರ ೬೦ ವಾಹನ ಗಳನ್ನು ನೀಡಿದ್ದು, ಈ ವರ್ಷ ೧೬೪ ವಾಹನಗಳನ್ನು ನೀಡಲಿದೆ. ಈ ವಾಹನಗಳು ರೈತರ ಕೃಷಿ ಚಟುವಟಿಕೆಗೆ ನೆರವಾಗಲಿದೆ ಎಂದು ಹೇಳಿದರು.

Translate »