ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಳಿವು-ಉಳಿವು ಪ್ರಧಾನಿ ನಿರ್ಧಾರಕ್ಕೆ
ಮೈಸೂರು

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಳಿವು-ಉಳಿವು ಪ್ರಧಾನಿ ನಿರ್ಧಾರಕ್ಕೆ

April 22, 2022

ಬಿಜೆಪಿ-ಆರ್‌ಎಸ್‌ಎಸ್ ಮುಖಂಡರ ಸಭೆ ತೀರ್ಮಾನ ಇನ್ನೆರಡು ದಿನದಲ್ಲಿ ಮಹತ್ತರ ನಿರ್ಧಾರ ಸಾಧ್ಯತೆ

ಬೆಂಗಳೂರು,ಏ.೨೧(ಕೆಎAಶಿ)- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಧಿಕಾರದಲ್ಲಿ ಮುಂದುವರೆಸುವುದು ಇಲ್ಲವೇ ಬದಲಾವಣೆ ಮಾಡುವ ನಿರ್ಧಾರ ಪ್ರಧಾನಿ ಮೋದಿಯವರಿಗೆ ಬಿಡಲಾಗಿದೆ. ಅದರಂತೆ ಇನ್ನೆರಡು ದಿನದಲ್ಲಿ ಪ್ರಧಾನಿಯವರಿಂದ ಮಹತ್ತರ ತೀರ್ಮಾನ ಹೊರ ಬೀಳುವ ಸಾಧ್ಯತೆಗಳಿವೆ.

ಗುರುವಾರ ನವದೆಹಲಿಯಲ್ಲಿ ನಡೆದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ನಾಯಕ ದತ್ತಾತ್ರೇಯ ಹೊಸಬಾಳೆ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟಿçÃಯ ಮುಖಂಡ ಅರುಣ್ ಕುಮಾರ್ ಪಾಲ್ಗೊಂಡಿದ್ದರು. ಸರ್ಕಾರ ಮತ್ತು ಪಕ್ಷದ ಸಾಧನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಈ ನಾಯಕರು, ೨೦೨೩ಕ್ಕೆ ಮತ್ತೆ ಪಕ್ಷವನ್ನು ರಾಜ್ಯದ ಅಧಿಕಾರಕ್ಕೆ ತರುವ ಹೊಣೆಗಾರಿಕೆಯನ್ನು ದೆಹಲಿ ನಾಯಕರು ವಹಿಸಿಕೊಳ್ಳುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ಚುನಾವಣೆವರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಮುಂದುವರೆಸಬೇಕೇ? ಇಲ್ಲ ಅವರನ್ನು ಬದಲಾವಣೆ ಮಾಡಬೇಕೇ? ಎಂಬ ವಿಚಾರವನ್ನು ಪ್ರಧಾನಿಯವರ ತೀರ್ಮಾನಕ್ಕೆ ಬಿಡುವುದು ಉಚಿತ ಎಂಬ ನಿರ್ಧಾರಕ್ಕೆ ಬರಲಾಗಿದೆ. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಬದಲಾವಣೆ ಮಾಡುವುದಕ್ಕೂ ಸಭೆ ಸಮ್ಮತಿಸಿದೆ. ಆದರೆ ಸಿಎಂ ಬೊಮ್ಮಾಯಿ ಬದಲಾವಣೆ ತೀರ್ಮಾನವನ್ನು ಆಧರಿಸಿ ಜಾತಿ ಸಮೀಕರಣದ ಮೇಲೆ ಪಕ್ಷದ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದು ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಅವರೇ ಮುಂದುವರೆದರೆ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಕ್ಕಲಿಗ ಮುಖಂಡರನ್ನು ತರುವ ಚಿಂತನೆಯೂ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಯಾವುದೇ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾದರೆ ಸರ್ಕಾರ ಮತ್ತು ಪಕ್ಷದ ತೀರ್ಮಾನವನ್ನು ಪ್ರಧಾನಿ ನಿರ್ಧಾರಕ್ಕೆ ಬಿಡಲಾಗುತ್ತಿದೆ. ಅದೇ ಮಾನದಂಡವನ್ನು ಕರ್ನಾಟಕದ ವಿಷಯದಲ್ಲಿ ಅನುಸರಿಸಲಾಗುತ್ತಿದೆ. ಪ್ರಧಾನಿ ಮೋದಿ ತಮ್ಮದೇ ಮೂಲಗಳಿಂದ ಮಾಹಿತಿಯನ್ನು ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಿ ಎಂಬುದು ಈ ನಾಯಕರ ಉದ್ದೇಶವೂ ಆಗಿದೆ. ಈ ಹಿಂದೆಯೂ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ನಿರ್ಧಾರವನ್ನು ಪ್ರಧಾನಿಯವರಿಗೇ ಬಿಡಲಾಗಿತ್ತು. ಪ್ರಧಾನಿ ಮೋದಿ ತಾವು ತೆಗೆದುಕೊಂಡAತಹ ತೀರ್ಮಾನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉನ್ನತ ನಾಯಕರೊಬ್ಬರ ಮೂಲಕ ಸಂದೇಶ ರವಾನಿಸಿದ್ದನ್ನು ಸ್ಮರಿಸಬಹುದು. ಅದರಂತೆ ಈಗಲೂ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಳಿವು ಹಾಗೂ ಉಳಿವು ಪ್ರಧಾನಿಯವರ ನಿರ್ಧಾರವನ್ನು ಆಧರಿಸಿದೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣ ಹಾಗೂ ಕೋರ್‌ಕಮಿಟಿ ಸಭೆಯ ನಂತರ ಪಕ್ಷದ ರಾಷ್ಟಿçÃಯ ಅಧ್ಯಕ್ಷ ಜೆ.ಪಿ.ನಡ್ಡಾ, ಕರ್ನಾಟಕದಲ್ಲಿ ನಾಯಕತ್ವ, ಸಂಪುಟ ಪುನರ್ ರಚನೆ ಹಾಗೂ ಪಕ್ಷದ ವಿಚಾರವಾಗಿ ದೆಹಲಿಯಲ್ಲಿ ಸಭೆ ಸೇರಿ ನಿರ್ಧರಿಸಲಾಗುವುದು ಎಂದು ಪ್ರಕಟಿಸಿದ್ದರು. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಇದೇ ಹೇಳಿಕೆಯನ್ನು ನೀಡಿದ್ದರು ಹಾಗೂ ವರಿಷ್ಠರು ಕರೆ ನೀಡಿದಾಗ ದೆಹಲಿಗೆ ತೆರಳುವುದಾಗಿಯೂ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »