ಸಾಧನೆಗೂ ಅಪಸ್ವರವೇ?!
ನಿಮ್ಮ ಪತ್ರಗಳು

ಸಾಧನೆಗೂ ಅಪಸ್ವರವೇ?!

April 19, 2018

ಮಾನ್ಯರೆ,

ಕೆಲ ಜನ ನಾಯಕರುಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಕಾರ್ಯ ತತ್ಪರತೆದೂರದರ್ಶಿತ್ವ ಪ್ರದರ್ಶಿಸಿದರೂ, ಕೊಂಕು ನುಡಿಗಳೇ ಬರುತ್ತಿರುವುದು ವಿಪರ್ಯಾಸ.

ದಕ್ಷ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ದೂರದರ್ಶಿತ್ವದ ಫಲ ಎಂಬಂತೆ ಸುಂದರ ವಿನ್ಯಾಸದವಿಧಾನಸೌಧನಿರ್ಮಾಣವಾಯಿತು. ಸಾಧನೆಗೂ ಅಪಸ್ವರ ಕೇಳಬೇಕಾಯಿತು. ಆದರೂ ಇಂದಿಗೂ, ಎಂದೆಂದಿಗೂ ವಿಧಾನಸೌಧ ಶಿಲ್ಪಿ ಎಂದರೆ ಕನ್ನಡಿಗರ ಕಣ್ಣ ಮುಂದೆ ಬರುವುದುಕೆಂಗಲ್ ಹನುಮಂತಯ್ಯನವರೇ.

ಮೈಸೂರು ಪೊಲೀಸ್ ಆಯುಕ್ತರಾಗಿ ಕೆಂಪಯ್ಯನವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ, ನಾವು ನೋಡುತ್ತಿದ್ದ ಮೈಸೂರು ಆರಕ್ಷಕ ಠಾಣಾ ಕಟ್ಟಡಗಳು ಪ್ರವೇಶಿಸಿದರೆ, ಎಲ್ಲಿ ನಮ್ಮ ಮೇಲೆಯೇ ಬೀಳುತ್ತದೆಯೋ ಎಂಬಂತೆ ಗಾಬರಿ ಹುಟ್ಟಿಸುತ್ತಿತ್ತು. ದುರ್ಗಂಧಧೂಳುಮಯ. ಕೆಂಪಯ್ಯನವರಟಚ್ನಿಂದಾಗಿ, ಎಲ್ಲಾ ಠಾಣೆಗಳೂ ಭವ್ಯವಾಗಿ, ಅಂದ ಚೆಂದವಾಗಿ ನಳನಳಿಸುವಂತಾಯಿತು. ಪೆÇಲೀಸ್ ಮಕ್ಕಳಿಗಾಗಿ ಕೇಂದ್ರೀಯ ಶಾಲೆ ಮುಂತಾದ ಶ್ರೇಯೋಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು.

ಇನ್ನು ಮಾನಸಗಂಗೋತ್ರಿಯ ಶಿಲ್ಪಿ ನಮ್ಮೆಲ್ಲರ ಹೆಮ್ಮೆಯ ಕಾವ್ಯಋಷಿ ಕುವೆಂಪು. ಅವರ ಶಿಷ್ಯರೇ ಆದ ನಾಡೋಜ ದೇಜಗೌ ಅಲ್ಲಿ ಉಳಿದಿದ್ದ ಕಾಮಗಾರಿಗಳನ್ನು ವ್ಯವಸ್ಥಿತ ವಾಗಿ ಕೈಗೊಂಡವರು. ಕುಲಪತಿಗಳಾಗಿದ್ದ ಪ್ರೊ. ಕೆ.ಎಸ್. ರಂಗಪ್ಪನವರಿಂದ ಭವ್ಯವಿದ್ಯಾಸೌಧಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ಮಾಣವಾದವು. ಇಂದು ಮಾನಸಗಂಗೋತ್ರಿ, ಮುಕ್ತ ವಿಶ್ವವಿದ್ಯಾಲಯ ಪರಿಸರ, ವಿದ್ಯಾರ್ಥಿಗಳ ಕಣ್ಮನ ಸೂರೆಗೊಳ್ಳುವಂತಾಗಿದೆ.

ಹಳೇ ವಸ್ತುಪ್ರದರ್ಶನಕ್ಕೆ, ನಾವೀನ್ಯತೆಸಾಹಿತ್ಯದ ಕಾಯಕಲ್ಪ ಕೊಟ್ಟವರು ಕೌಟಿಲ್ಯ ರಘು. ಇದ್ದಷ್ಟು ಪ್ರದೇಶದಲ್ಲೇ ಸೊಗಸಾದ ವಸ್ತುಪ್ರದರ್ಶನ ಕಲ್ಪನೆಸಂಸ್ಕೃತಿಯನ್ನು ಸಾಕಾರಗೊಳಿಸಿದವರು. ಇಷ್ಟೆಲ್ಲಾ ಸಾಧಿಸಿದರೂ, ಇವರುಗಳ ಬಗ್ಗೆ ಅಪಸ್ವರವೇಕೆ?

-ಡಾ|| ಕೆ. ರಘುರಾಂ ವಾಜಪೇಯಿ, ಸಮಾಜ ಸೇವಕರು, ಮೈಸೂರು, ತಾ. 18.4.2018

Translate »